newsfirstkannada.com

ಪ್ರೀತಿ ಜಿಂಟಾ ಮಾಡಿದ ಆ ತಪ್ಪಿನಿಂದ ಸಿಕ್ಕೇಬಿಟ್ರು ಸೇವಿಯರ್​; ಪಂಜಾಬ್​ ಗೆಲ್ಲಿಸಿದ ಶಶಾಂಕ್ ​​​ಯಾರು..?

Share :

Published April 5, 2024 at 3:23pm

Update April 5, 2024 at 3:30pm

    ಕಳೆದ ವರ್ಷದ ಮಿನಿ ಆಕ್ಷನ್​​ನಲ್ಲಿ ಶಶಾಂಕ್ ಮೂಲ ಬೆಲೆ ಎಷ್ಟು?

    ಅದೃಷ್ಟ ಎಂಬಂತೆ ಪಂಜಾಬ್​​ಗೆ ಆಯ್ಕೆ ಆಗಿದ್ದ ಶಶಾಂಕ್​ ಸಿಂಗ್

    ಶಶಾಂಕ್ ಸಿಂಗ್ ಅನ್ನು ತಪ್ಪಾಗಿ ಆಯ್ಕೆ ಮಾಡಿದ್ರಾ ಪ್ರೀತಿ ಜಿಂಟಾ?

ತವರಿನಲ್ಲೇ ಗುಜರಾತ್ ಟೈಟಾನ್ಸ್ ಟೀಮ್​ ಅನ್ನು ಕಿಂಗ್ಸ್​ ಇಲೆವೆನ್ ಪಂಜಾಬ್ ಸದೆ ಬಡಿದಿದೆ. ಈ ಮೂಲಕ ಗಬ್ಬರ್ ಶಿಖರ್ ಧವನ್ ಪಡೆ ಬಾಲಿವುಡ್ ಬ್ಯೂಟಿ ಪ್ರೀತಿ ಜಿಂಟಾ ಮೊಗದಲ್ಲಿ ನಗುವಿನ ಜೊತೆ ಖುಷಿಯನ್ನು ತರಿಸಿದೆ. ಇದಕ್ಕೆಲ್ಲ ಕಾರಣ ಪ್ರೀತಿ ಜಿಂಟಾನೇ ಎಂದು ಹೇಳಬಹುದು. ಏಕೆಂದರೆ ಪಂಜಾಬ್ ಫ್ರಾಂಚೈಸಿ ಮಾಡಿದ ಅದೊಂದು ತಪ್ಪಿನಿಂದ ಮರೆಯಲ್ಲಿದ್ದ ಪ್ರತಿಭೆಗೆ ಅವಕಾಶ ಸಿಕ್ಕಿದೆ. ವಿಷ್ಯ ಇಷ್ಟೇ.. ತಪ್ಪಾದ ನಿರ್ಧಾರ ತೆಗೆದುಕೊಂಡರೂ ಸರಿಯಾದನ್ನ ಆಯ್ಕೆ ಮಾಡಿದ್ದಾರೆ ಬಾಲಿವುಡ್​ ಬ್ಯೂಟಿ.

ಪಂಜಾಬ್​ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಶಶಾಂಕ್ ಸಿಂಗ್ ಗುಜರಾತ್ ಟೈಟಾನ್ಸ್ ವಿರುದ್ಧ ರಣಾರ್ಭಟವಾಗಿ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಗುಜರಾತ್ ಜೊತೆಗಿನ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 6 ಫೋರ್, 4 ಆಕಾಶದೆತ್ತರ ಸಿಕ್ಸರ್ ಸಮೇತ 61 ರನ್​ ಬಾರಿಸಿ ಏಕಾಂಗಿಯಾಗಿ ಹೋರಾಡಿ ಪಂಜಾಬ್ ಅನ್ನು ಗೆಲ್ಲಿಸಿದ ಪ್ಲೇಯರ್​. ಪ್ರತಿ ಬಾಲ್ ಹಿಟ್ ಮಾಡಿದ ಶಶಾಂಕ್ ಸಿಂಗ್ ಬ್ಯಾಟಿಂಗ್​ಗೆ ಗಿಲ್​ ಸೇನೆ ಮಕಾಡೆ ಮಲಗಿದೆ. ಪಂಜಾಬ್​ ಕೇವಲ 1 ಎಸೆತ ಬಾಕಿ ಇರುವಾಗ 200 ರನ್​ಗಳ ಬಿಗ್​ ಟಾರ್ಗೆಟ್​ ಅನ್ನು ಚೇಸ್ ಮಾಡುವಲ್ಲಿ ಶಶಾಂಕ್ ಸಿಂಗ್ ಅವರ ಅಮೋಘ ಆಟವೇ ಎಲ್ಲರ ಕಣ್ಮನ ಸೆಳೆದಿದೆ. ಇಷ್ಟಕ್ಕೂ ಈ ಶಶಾಂಕ್ ಪಂಜಾಬ್​ ಪ್ಲೇಯರ್ ಅಲ್ಲವೇ ಅಲ್ಲ. ಇವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಫ್ರಾಂಚೈಸಿ ಟೀಮ್​ನಲ್ಲಿ ಇರಲಿಲ್ಲ. ಆದರೆ ಅದೃಷ್ಟ ಎಂಬಂತೆ ಪಂಜಾಬ್ ತಂಡಕ್ಕೆ ಶಶಾಂಕ್ ಸಿಂಗ್ ಆಯ್ಕೆಗೊಂಡಿದ್ದರು.

32 ವರ್ಷದ ಆಲ್​ರೌಂಡರ್​ ಶಶಾಂಕ್ ಸಿಂಗ್ ಛತ್ತೀಸ್​ಘಡದವರು. ಐಪಿಎಲ್​ಗಾಗಿ ಕಳೆದ ವರ್ಷದ ನಡೆದ ಮಿನಿ ಆಕ್ಷನ್​ ಬಿಡ್​ನಲ್ಲಿ ಶಶಾಂಕ್ ಸಿಂಗ್ ಮೂಲ ಬೆಲೆ ಕೇವಲ 20 ಲಕ್ಷ ರೂ.ಗಳು ಇತ್ತು. ಶಶಾಂಕ್ ಸಿಂಗ್ ಎನ್ನುವ ಒಂದೇ ಹೆಸರಲ್ಲಿ ಇಬ್ಬರು ಆಟಗಾರರು ಇದ್ದಾರೆ. ಸ್ಕ್ರೀನ್​ನಲ್ಲಿ ಹೆಸರು ಬಂದಿದ್ದರಿಂದ ಬಿಡ್​ ಅನ್ನು ಪಂಜಾಬ್ ಫ್ರಾಂಚೈಸಿ ಕೂಗಿ 20 ಲಕ್ಷಕ್ಕೆ ಖರೀದಿ ಮಾಡಿದೆ. ಆದರೆ ನಂತರ ನಾವು ಬಿಡ್​ ಕರೆದಿದ್ದು ಬೇರೆ ಶಶಾಂಕ್​ನನ್ನ. ಆದರೆ ಇಲ್ಲಿ ಇರುವುದು ಬೇರೆ ಶಶಾಂಕ್. ಹೀಗಾಗಿ ಇದನ್ನು ಬದಲಾವಣೆ ಮಾಡಿಕೊಡಿ ಎಂದು ಪಂಜಾಬ್ ಫ್ರಾಂಚೈಸಿ ಕೇಳಿಕೊಂಡಿತ್ತು. ಆದರೆ ಬಿಡ್​ನಲ್ಲಿ ಒಮ್ಮೆ ಪ್ಲೇಯರ್​​ನನ್ನ ಖರೀದಿ ಮಾಡಿದರೆ ಮತ್ತೆ ವಾಪಸ್​ ಅಥವಾ ಕ್ಯಾನ್ಸಲ್​ ಮಾಡುವ ನಿಯಮ ಇಲ್ಲ. ಹೀಗಾಗಿ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಪಂಜಾಬ್ ಇಷ್ಟು ದಿನ ಸುಮ್ಮನಿತ್ತು.

ಇದನ್ನೂ ಓದಿ: ವರ್ಷದ ಹಿಂದೆ ಕಾಣೆಯಾಗಿದ್ದ ವೃದ್ಧೆ.. ತನ್ನ ಕುಟುಂಬ ಸೇರಿದ್ದು ಮಾತ್ರ ದೊಡ್ಡ ಪವಾಡ

ಶಶಾಂಕ್ ಈ ಮೊದಲೇ ಐಪಿಎಲ್​ ಟೂರ್ನಿಯಲ್ಲಿ ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​, ರಾಜಸ್ಥಾನ, ಪುಣೆ ವಾರಿಯರ್ಸ್​ ಮತ್ತು ಹೈದರಾಬಾದ್ ತಂಡಗಳಲ್ಲಿ ಆಲ್​ರೌಂಡರ್ ಆಗಿ ಆಡಿದ್ದಾರೆ. ಆದರೆ ಅಷ್ಟೇನೂ ಹೆಸರು, ಖ್ಯಾತಿ ಪಡೆದಿರಲಿಲ್ಲ. ಪುಣೆ ತಂಡ ಕ್ಯಾನ್ಸಲ್ ಆದ ಮೇಲೆ ಶಶಾಂಕ್ ತುಂಬಾ ಶ್ರಮ ವಹಿಸಿದ್ದರು. ಆದರೆ ಎಲ್ಲಿಯು ಸ್ಥಾನ ಸಿಕ್ಕಿರಲಿಲ್ಲ. ಇದರಿಂದ ಛತ್ತೀಸ್​ಘಡ ರಾಜ್ಯ ಟೀಮ್​ಗಳಲ್ಲಿ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿದ್ದರು. ಇವರ ಭರ್ಜರಿ ಬ್ಯಾಟಿಂಗ್​​ಗೆ ಎದುರಾಳಿ ಬೌಲರ್​ಗಳು ಪತರಗುಟ್ಟುತ್ತಿದ್ದರು. ಆದರೆ ಐಪಿಎಲ್​ ಟೂರ್ನಿಯಲ್ಲಿ ಮಿಂಚಲು ಆಗಿರಲಿಲ್ಲ. ಆದರೆ ಆ ಅದೃಷ್ಟ ಗುಜರಾತ್​ ಟೈಟಾನ್ಸ್​ ವಿರುದ್ಧ ಕೂಡಿ ಬಂದಿದ್ದರಿಂದ 200 ರನ್​ಗಳ ಬೃಹತ್​ ಟಾರ್ಗೆಟ್ ಅನ್ನು ಚೇಸ್​ ಮಾಡುವಲ್ಲಿ ಶಶಾಂಕ್​ ಪಾತ್ರ ಮುಖ್ಯವಾಗಿತ್ತು. ಇದರಿಂದಲೇ ರಾತ್ರೋ ರಾತ್ರಿ ಇವರ ಹೆಸರು ಎಲ್ಲೆಡೆ ಹರಡಿದೆ.

ಶಶಾಂಕ್ ಕುರಿತು ಟ್ವಿಟ್ ಮಾಡಿರುವ ಪಂಜಾಬ್ ಫ್ರಾಂಚೈಸಿ ಮಿನಿ ಆಕ್ಷನ್​ನಲ್ಲಿ ಶಶಾಂಕ್ ನಮ್ಮ ಟಾರ್ಗೆಟ್​ ಲಿಸ್ಟ್​ನಲ್ಲಿದ್ದರು. ಆದರೆ ನಾವು ಅಂದುಕೊಂಡಿದ್ದು ಬೇರೆ ಶಶಾಂಕ್​​ನನ್ನ. ಆದರೆ ಸಿಕ್ಕಿದ್ದು ಈ ಶಶಾಂಕ್. ಇಬ್ಬರ ಹೆಸರು ಸೇಮ್ ಇದ್ದಿದ್ದರಿಂದ ನಾವು ಗೊಂದಲಕ್ಕೆ ಒಳಗಾಗಿದ್ದೇವು. ಆದರೆ ಐಪಿಎಲ್ ನಿಯಮ ಪಾಲಿಸಬೇಕಿತ್ತು. ಅದರಂತೆ ಶಶಾಂಕ್​ನನ್ನ ತಂಡದಲ್ಲಿ ಉಳಿಸಿಕೊಂಡಿದ್ದೇವು. ಸದ್ಯ ಅವರು ಟೀಮ್​ಗೆ ಕೊಡುಗೆ ನೀಡಿದ್ದಕ್ಕೆ ಖುಷಿ ಆಗುತ್ತಿದೆ ಎಂದು ಟ್ವಿಟ್​ ಪೋಸ್ಟ್ ಮಾಡಿದ್ದಾರೆ.

ವಿಶೇಷ ವರದಿ: ಭೀಮಪ್ಪ, ನ್ಯೂಸ್​​ಫಸ್ಟ್​, ಡಿಜಿಟಲ್​ ಡೆಸ್ಕ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪ್ರೀತಿ ಜಿಂಟಾ ಮಾಡಿದ ಆ ತಪ್ಪಿನಿಂದ ಸಿಕ್ಕೇಬಿಟ್ರು ಸೇವಿಯರ್​; ಪಂಜಾಬ್​ ಗೆಲ್ಲಿಸಿದ ಶಶಾಂಕ್ ​​​ಯಾರು..?

https://newsfirstlive.com/wp-content/uploads/2024/04/SHASHANK_2.jpg

Load More