newsfirstkannada.com

ಕ್ಯಾನ್ಸರ್​​ನಿಂದ ತಾಯಿ ಸಾವು; ವೈದ್ಯರ ವಿರುದ್ಧ ಸಿಟ್ಟಿಗೆದ್ದು ಆಸ್ಪತ್ರೆಯ ಗ್ಲಾಸ್ ಒಡೆದ ಮೃತಳ ಮಗ..!

Share :

Published March 18, 2024 at 8:33am

  ಥೆರೆಪಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಯುವಕನ ತಾಯಿ

  ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ತಾಯಿಯನ್ನ ದಾಖಲಿಸಲಾಗಿತ್ತು

  ಬ್ರಹ್ಮಪುರ‌ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ಕಲಬುರಗಿ: ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಉದ್ರಿಕ್ತಗೊಂಡ ಮಗ ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಗ್ಲಾಸ್ ಅನ್ನು ಕುರ್ಚಿಯಿಂದ ಒಡೆದು ಹಾಕಿದ್ದಾನೆ.​

ಕಲಬುರಗಿ ತಾಲೂಕಿನ ಹಾರುತಿ ಹಡಗಿಲ್ ಗ್ರಾಮದ ನಾಗಮ್ಮ (55) ಮೃತಪಟ್ಟವರು. ಇವರು ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೀಗಾಗಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರು ಕಿಮೋ ಥೆರೆಪಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಥೆರೆಪಿ ಚಿಕಿತ್ಸೆ ಫಲಿಸದೇ ತಾಯಿ ಸಾವನ್ನಪ್ಪಿದ್ದಾರೆ.

ಇದರಿಂದ ಆಕ್ರೋಶಗೊಂಡ ಮೃತಳ ಮಗ, ವೈದ್ಯರ ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪಿಸಿ ಕೋಪದಲ್ಲಿ ಕುರ್ಚಿಯನ್ನು ಎತ್ತಿ ಬಿಸಾಡಿದ್ದರಿಂದ ಆಸ್ಪತ್ರೆಯಲ್ಲಿನ ಗ್ಲಾಸ್​ಗಳು ಹೊಡೆದು ಹೋಗಿದೆ. ಈ ಸಂಬಂಧ ಆಸ್ಪತ್ರೆಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದು ಬ್ರಹ್ಮಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾನ್ಸರ್​​ನಿಂದ ತಾಯಿ ಸಾವು; ವೈದ್ಯರ ವಿರುದ್ಧ ಸಿಟ್ಟಿಗೆದ್ದು ಆಸ್ಪತ್ರೆಯ ಗ್ಲಾಸ್ ಒಡೆದ ಮೃತಳ ಮಗ..!

https://newsfirstlive.com/wp-content/uploads/2024/03/KLB_MOTHER.jpg

Load More