ಅಮ್ಮನಿಗಾಗಿ ತಾಜ್ ಮಹಲ್ ಕಟ್ಟಿದ ಮಗ
ಇದು ತಾಯಿಯ ಪ್ರೀತಿಯ ದ್ಯೋತಕ
ಒಂದಲ್ಲಾ.. ಕೋಟಿ ಖರ್ಚು ಮಾಡಿ ನಿರ್ಮಾಣ
ಪ್ರೀತಿಯ ಮಡದಿಯ ನೆನಪಿಗಾಗಿ ಷಹಜಹಾನ್ ತಾಜ್ ಮಹಲ್ ನಿರ್ಮಿಸಿರುವ ಘಟನೆ ಎಲ್ಲರಿಗೂ ಗೊತ್ತಿದೆ. ಆದರೆ ಮಗನೊಬ್ಬ ತನ್ನ ತಾಯಿಯ ನೆನಪಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಾಜ್ ಮಹಲ್ ಮಾದರಿಯ ಕಟ್ಟಡ ನಿರ್ಮಿಸಿದನ್ನು ಕೇಳಿದ್ದೀರಾ?. ತುಂಬಾ ಕುತೂಹಲಕಾರಿಯಾಗಿದೆ ಈ ಸ್ಟೋರಿ.
ಅಮರುದ್ದೀನ್ ಶೇಖ್ ದಾವೂದ್ ಎಂಬ ವ್ಯಕ್ತಿ ತಮಿಳುನಾಡಿನ ತಿರುವಾರೂರಿನಲ್ಲಿ ತಾಜ್ ಮಹಲ್ ಮಾದರಿಯಂತೆಯೇ ಕಟ್ಟಡ ನಿರ್ಮಿಸಿದ್ದಾರೆ. ತನ್ನ ತಾಯಿಯ ನೆನಪಿಗಾಗಿ ಈ ಕಟ್ಟಡವನ್ನು ನಿರ್ಮಿಸಿದ್ದಾರೆ.
ಅಮರುದ್ದೀನ್ ಶೇಖ್ ದಾವೂದ್ ಅವರ ತಂದೆ 1989ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. ಆ ಬಳಿಕ ಅವರನ್ನು ಸಾಕಿದ್ದು ತಾಯಿ ಜೈಲಾನಿ ಬೀವಿ. 5 ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಬೆಳೆಸಿದರು. ಆದರೆ 2020ಕ್ಕೆ ಜೈಲಾನಿ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾದರು. ಆದರೆ ಇವರ ನೆನಪಿಗಾಗಿ ಅಮರುದ್ದೀನ್ ಶೇಖ್ ದಾವೂದ್ ತಾಜ್ ಮಹಲ್ ಮಾದರಿಯ ಕಟ್ಟಡ ನಿರ್ಮಿಸಿದ್ದಾರೆ.
8 ಸಾವಿರ ಚದರ ಅಡಿಯ ಕಟ್ಟಡ
ಅಂದಹಾಗೆಯೇ ಜೈಲಾನಿ ಅವರನ್ನು ಮಗ ಅಮರುದ್ದೀನ್ ಶೇಖ್ ದಾವೂದ್ ಅವರು ಸ್ವಂತ ಜಮೀನಿನಲ್ಲೇ ಹೂಳಿದ್ದರು. ಆ ಬಳಿಕ ತಾಯಿಯಾಗಿ ತಾನೊಂದು ಕಟ್ಟಡ ನಿರ್ಮಿಸಬೇಕು ಎಂದು ಅಮರುದ್ದೀನ್ ಶೇಖ್ ದಾವೂದ್ಗೆ ಅನಿಸಿತು. ಹಾಗಾಗಿ 2021ರ ಜೂನ್ 3 ರಂದು ಕಟ್ಟಡದ ಕೆಲಸ ಪ್ರಾರಂಭಿಸಿದರು. ಒಂದು ಎಕರೆ ಭೂಮಿಯಲ್ಲಿ 8 ಸಾವಿರ ಚದರ ಅಡಿಯಲ್ಲಿ ಕಟ್ಟಡ ನಿರ್ಮಿಸಿದರು.
ನಿರ್ಮಾಣಕ್ಕೆ 5.5 ಕೋಟಿ ಖರ್ಚು
ಇನ್ನು ಅಮರುದ್ದೀನ್ ಶೇಖ್ ದಾವೂದ್ ಅವರು ಈ ಕಟ್ಟಡ ನಿರ್ಮಾಣಕ್ಕಾಗಿ ಬರೋಬ್ಬರಿ 5.5 ಕೋಟಿ ಖರ್ಚು ಮಾಡಿದ್ದಾರೆ. ಸದ್ಯ ಈ ಕಟ್ಟಡವನ್ನು ಮತ್ತು ಭೂಮಿಯನ್ನು ಚಾರಿಟೇಬಲ್ ಟ್ರಸ್ಟ್ಗೆ ನೀಡಲಾಗಿದೆ.