ಪಂಚೆಯಲ್ಲಿ ಬಂದ ರೈತನನ್ನು ಒಳ ಬಿಡದೆ ಅವಮಾನ ಮಾಡಿದ GT ಮಾಲ್​​​ ಸಿಬ್ಬಂದಿ.. ಭಾರೀ ಆಕ್ರೋಶ!

author-image
admin
Updated On
ಪಂಚೆಯಲ್ಲಿ ಬಂದ ರೈತನನ್ನು ಒಳ ಬಿಡದೆ ಅವಮಾನ ಮಾಡಿದ GT ಮಾಲ್​​​ ಸಿಬ್ಬಂದಿ.. ಭಾರೀ ಆಕ್ರೋಶ!
Advertisment
  • ಬೆಂಗಳೂರು ನಗರದ ಪ್ರತಿಷ್ಠಿತ ಮಾಲ್‌ನಲ್ಲಿ ರೈತನಿಗೆ ಅವಮಾನ
  • ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಡದ ಸಿಬ್ಬಂದಿ
  • ಮಾಲ್‌ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ ಅನ್ನೋ ರೂಲ್ಸ್‌!

ಬೆಂಗಳೂರು ನಗರದ ಪ್ರತಿಷ್ಠಿತ ಮಾಲ್‌ನಲ್ಲಿ ರೈತನಿಗೆ ಅವಮಾನ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಡದೆ ಮಾಲ್ ಸಿಬ್ಬಂದಿ ತಡೆದಿದ್ದಾರೆ ಎನ್ನಲಾಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ನಿವೇದಿತಾ ಗೌಡ ಹೊಸ ವಿಡಿಯೋ ಪೋಸ್ಟ್‌ಗೆ ಕಮೆಂಟ್‌ಗಳ ಸುರಿಮಳೆ; ಸ್ಟುಪಿಡ್‌, ಗೆಟೌಟ್‌ ಎಂದ ಗೊಂಬೆ! 

ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನಲ್ಲಿ ಇಂದು ಸಂಜೆ ಇಂತಹದೊಂದು ಘಟನೆ ನಡೆದಿದೆ. ಹಾವೇರಿ ಮೂಲದ ನಾಗರಾಜ್ ತಮ್ಮ ತಂದೆ, ತಾಯಿಯನ್ನು ಜಿಟಿ ಮಾಲ್‌ಗೆ ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಮೂರಂತಸ್ತಿನ ಮನೆಯಲ್ಲಿ ದುರಂತ.. ರಮಾನಂದ ಶೆಟ್ಟಿ ದಂಪತಿ ಸಾವಿಗೆ ಕಾರಣವೇನು? ಆಗಿದ್ದೇನು? 

ತಂದೆಯನ್ನು ಸಿನಿಮಾ ತೋರಿಸಲು ಮಗ ಕರೆದುಕೊಂಡು ಹೋಗುವಾಗ ಮಾಲ್ ಪ್ರವೇಶ ದ್ವಾರದಲ್ಲಿ ತಡೆದಿದ್ದಾರೆ. ರೈತರು ಪಂಚೆ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಅವರನ್ನು ಸೆಕ್ಯೂರಿಟಿ ಸಿಬ್ಬಂದಿ ಮಾಲ್ ಒಳಗೆ ಪ್ರವೇಶ ಮಾಡಲು ಬಿಡಲಿಲ್ಲ. ಅರ್ಧ ಗಂಟೆಗೂ ಹೆಚ್ಚು ಕಾಲ ಪಂಚೆ ಹಾಕಿದ್ದ ರೈತನನ್ನು ಮಾಲ್ ಮುಂದೆಯೇ ಕೂರಿಸಿದ್ದರು ಎಂದು ಆರೋಪಿಸಲಾಗಿದೆ.

ರೈತನ ಮಗ ನಾಗರಾಜ್ ಎಂಬುವರು ಮಾಲ್‌ ಒಳಗೆ ಬಿಡಿ ಅಂತ ಎಷ್ಟು ಬಾರಿ ಕೇಳಿದರು ಸಿಬ್ಬಂದಿ ಕೇಳಿಲ್ಲ. ಪಂಚೆ ಹಾಕೊಂಡಿದ್ದಾರೆ ಹೀಗಾಗಿ ಬಿಡುವುದಿಲ್ಲ. ಮಾಲ್‌ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ. ನಮ್ಮ ಮಾಲಿನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಹೇಳಿದ್ದಾರಂತೆ. ಈ ಬಗ್ಗೆ ವಿಡಿಯೋ ಮಾಡಿರೋ ನಾಗರಾಜ್ ಅವರು ಮಾಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment