newsfirstkannada.com

800ಕ್ಕೂ ಹೆಚ್ಚು ಶ್ವಾನ ಸಾಕಿದ್ದ.. 2 ಕೋಟಿ ಖರ್ಚು ಮಾಡಿ ವಿವಾಹ ಮಾಡಿದ್ದ! ಇದು ನಂಬಲಸಾಧ್ಯವಾದ ನವಾಬನೊಬ್ಬನ ಕಥೆ

Share :

Published March 13, 2024 at 1:47pm

Update March 13, 2024 at 1:52pm

  ನವಾಬನ ಶ್ವಾನ ಪ್ರೀತಿಯನ್ನು ಕೇಳಿದರೆ ಅಚ್ಚರಿಯಾಗುತ್ತದೆ

  ಇದು 77 ವರ್ಷಗಳ ಹಿಂದಿನ ನವಾಬನೊಬ್ಬನ ಶ್ವಾನ ಪ್ರೀತಿ

  2 ಕೋಟಿ ಖರ್ಚು ಮಾಡಿ 3 ದಿನ ಮುದ್ದಿನ ಶ್ವಾನದ ವಿವಾಹ ಮಾಡಿಸಿದ್ದ

ಶ್ವಾನ ನಿಯತ್ತಿನ ಪ್ರಾಣಿ. ಭಾರತದಲ್ಲಿ ಬಹುಸಂಖ್ಯೆಯಲ್ಲಿ ಶ್ವಾನಪ್ರಿಯರನ್ನು ಕಾಣಬಹುದು. ಅತಿ ಹೆಚ್ಚು ಜನರು ಮನೆಯಲ್ಲಿ ಶ್ವಾನವನ್ನು ಸಾಕೋದನ್ನ ಕಾಣಬಹುದು. ಆದರೆ ಸ್ವಾತಂತ್ರದ ಸಮಯದಲ್ಲಿ ನವಾಬನೊಬ್ಬ ಬರೋಬ್ಬರಿ 800 ಶ್ವಾನಗಳನ್ನು ಸಾಕಿದ್ದನು ಎಂಬ ಬಗ್ಗೆ ಯಾರಿಗಾದ್ರು ತಿಳಿದಿದೆಯಾ?. ಅದರಲ್ಲೂ ಆತನ ಪ್ರೀತಿಯ ಶ್ವಾನಕ್ಕೆ 2 ಕೋಟಿಗೂ ಅಧಿಕ ರೂಪಾಯಿ ಖರ್ಚು ಮಾಡಿ ವಿವಾಹ ಮಾಡಿರುವ ಸಂಗತಿ ಗೊತ್ತಿದ್ಯಾ?. ಈ ಬಗ್ಗೆ ಮಾಹಿತಿ ಇಲ್ಲಿದೆ.

ಮೊಹಮ್ಮದ್​​ ಮಹಾಬತ್​ ಖಾನ್ |||​. ಗುಜರಾತ್​ನ ಜುನಾಗಢದ ನಬಾಬನಾಗಿದ್ದನು. ಈತನಿಗೆ ಶ್ವಾನಗಳೆಂದರೆ ಭಾರೀ ಪ್ರೀತಿ. ಹಾಗಾಗಿ 1947ರ ಕಾಲಘಟ್ಟದಲ್ಲಿ ಸುಮಾರು 800ಕ್ಕೂ ಅಧಿಕ ಶ್ವಾನವನ್ನು ಸಾಕಿದ್ದನು. ಅವೆಲ್ಲದಕ್ಕೂ ಒಂದೊಂದು ಕೋಣೆ, ಸರಿಯಾದ ಆಹಾರ, ಆರೈಕೆ ಮಾಡುತ್ತಿದ್ದನು.

ರೋಶನಾರಾ

ಮೊಹಮ್ಮದ್​​ ಮಹಾಬತ್​ ಖಾನ್ ||| 800ಕ್ಕೂ ಹೆಚ್ಚು ಶ್ವಾನಗಳ ಪೈಕಿ ‘ರೋಶನಾರಾ’ ಎಂಬ ಶ್ವಾನ ಅತ್ಯಂತ ಪ್ರೀತಿಪಾತ್ರದಾಗಿತ್ತು. ಅದಕ್ಕಾಗಿ ವಿವಾಹವನ್ನು ಮಾಡಿಸಿದ್ದನು. ಅಚ್ಚರಿ ಸಂಗತಿ ಎಂದರೆ 3 ದಿನಗಳ ಕಾಲ ವಿವಾಹ ಸಂಭ್ರಮ ನಡೆಸಿದ್ದನು.

ರೋಶನಾರಾ ಶ್ವಾನದ ವಿವಾಹಕ್ಕೆ ಮೊಹಮ್ಮದ್​​ ಮಹಾಬತ್​ ಖಾನ್ ||| 2 ಕೋಟಿಗೂ ಅಧಿಕ ಖರ್ಚು ಮಾಡಿದ್ದನಂತೆ. ಈ ಶುಭ ಸಂದರ್ಭಕ್ಕೆ ಗವರ್ನರ್​ ಜನರಲ್ ಲಾರ್ಡ್​​ ಇರ್ವಿನ್​ ಅವರನ್ನು ಆಹ್ವಾನಿಸಿದ್ದನು. ಅದ್ಧೂರಿಯ ಶ್ವಾನದ ವಿವಾಹದಲ್ಲಿ ಗಣ್ಯರು ಕೂಡ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.

1947ರಲ್ಲಿ ಮಹಾರಾಜ ದೇಶ ವಿಭಜನೆ ಸಮಯದಲ್ಲಿ ವಿಮಾನದ ಮೂಲಕ ಪಾಕಿಸ್ತಾನದತ್ತ ಪಾಲಾಯನಗೈಯಲು ಮೊಹಮ್ಮದ್​​ ಮಹಾಬತ್​ ಖಾನ್ ||| ಮುಂದಾಗುತ್ತಾನೆ. ಆದರೆ ಈ ವೇಳೆ ಆತನ ಪತ್ನಿ ತನ್ನ ಮಗುವನ್ನು ಹಿಂದೆ ಉಳಿದುಬಿಟ್ಟಿದೆ ಎಂದು ಹೇಳುತ್ತಾಳೆ. ಆದರೆ ಇದಕ್ಕೆಲ್ಲಾ ಕ್ಯಾರೆ ಮಾಡದ ಆತ ವಿಮಾನದಲ್ಲಿ ಬಾಕಿ ಉಳಿದಿರುವ ಎರಡು ಸೀಟಿನಲ್ಲಿ ನಾಯಿಯನ್ನು ಕೂರಿಸಿಕೊಂಡು ಓಡಿಹೋಗುತ್ತಾನೆ ಎಂದು ಹೇಳಲಾಗುತ್ತಿದೆ.

ಅಷ್ಟರಮಟ್ಟಿಗೆ ಮೊಹಮ್ಮದ್​​ ಮಹಾಬತ್​ ಖಾನ್ ||| ಶ್ವಾನ ಪ್ರೀತಿಯನ್ನು ಹೊಂದಿದ್ದನು ಎಂದು ಇತಿಹಾಸ ಹೇಳುತ್ತಿದೆ. ಪ್ರಸ್ತುತ ಬಹುತೇಕರು ಮನೆಯಲ್ಲಿ ಶ್ವಾನ ಸಾಕುತ್ತಿದ್ದಾರೆ. ಆದರೆ ಆ ಕಾಲಘಟ್ಟದಲ್ಲಿ ಮುಸ್ಲಿಂ ಸಮುದಾಯದ ನವಾಬ ಶ್ವಾನವನ್ನು ಸಾಕುತ್ತಿದ್ದ ಮತ್ತು ಪ್ರಾಣಿ ಪ್ರೀತಿಯನ್ನು ಹೊಂದಿದ್ದನು ಎಂದರೆ ಅಚ್ಚರಿಯಾಗುತ್ತಿದೆ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

800ಕ್ಕೂ ಹೆಚ್ಚು ಶ್ವಾನ ಸಾಕಿದ್ದ.. 2 ಕೋಟಿ ಖರ್ಚು ಮಾಡಿ ವಿವಾಹ ಮಾಡಿದ್ದ! ಇದು ನಂಬಲಸಾಧ್ಯವಾದ ನವಾಬನೊಬ್ಬನ ಕಥೆ

https://newsfirstlive.com/wp-content/uploads/2024/03/Nawab-Dog.jpg

Load More