/newsfirstlive-kannada/media/post_attachments/wp-content/uploads/2024/10/MOSSAD-OPERATION-DIOMAND-2.jpg)
ಅದು 1963ರ ದಿನಗಳು. ಇಸ್ರೇಲ್ ಸೇನೆಯಲ್ಲಿ ಯಾವುದೋ ಒಂದು ಅವ್ಯಕ್ತವಾದ ಭಯ ಆವರಿಸಿಕೊಂಡಿತ್ತು. ಮಧ್ಯಪ್ರಾಚ್ಯದಲ್ಲಿ ಯಾವಾಗ ಬೇಕಾದರೂ ಇಸ್ರೇಲ್ ಹಾಗೂ ಉಳಿದ ಇಸ್ಲಾಂ ರಾಷ್ಟ್ರಗಳ ನಡುವೆ ಕದನ ನಡೆದು ಹೋಗಬಹುದಾದ ದಿನಗಳು ಜಾರಿಯಲ್ಲಿದ್ದವು. ಇಸ್ರೇಲ್ ಸೇನಾಧಿಕಾರಿ ಎಝರ್ ವಿಝ್ಮನ್ನ ಹಣೆಯಲ್ಲಿ ಚಿಂತೆಯ ಗೆರೆಗಳು ಸ್ಪಷ್ಟವಾಗಿ ಮೂಡಿದ್ದವು ಕಾರಣ ಸೋವಿಯತ್ ರಷ್ಯಾದಿಂದ ಅಂದಿನ ಕಾಲದ ಅತ್ಯಾಧುನಿಕ ಯುದ್ಧ ವಿಮಾನಗಳು ತನ್ನ ವೈರಿ ರಾಷ್ಟ್ರಗಳು ಖರೀದಿಸಿದ್ದವು. ಯುದ್ಧ ಯಾವಾಗ ನಡೆದರೂ ಕೂಡ ಸರಳವಾಗಿ ಇಸ್ರೇಲ್ ಪಡೆಯನ್ನು ನಿರ್ನಾಮಗೊಳಿಸಬಲ್ಲ ಸಶಸ್ತ್ರ ಯುದ್ಧ ವಿಮಾನ ಮಿಗ್-21 ಇರಾಕ್ ಈಜಿಪ್ಟ್ ಹಾಗೂ ಸಿರಿಯಾ ಸೋವಿಯತ್ ರಷ್ಯಾದಿಂದ ಖರೀದಿಸಿದ್ದವು. ಒಂದು ಬಾರಿ ಅಂದಿನ ಮೊಸಾದ್ನ ಮುಖ್ಯಸ್ಥರಾದ ಮೀರ್ ಅಮಿತ್ ಜೊತೆ ಸೇನಾಧಿಕಾರಿ ಎಝರ್ ವಿಝ್ಮನ್ ಕಾಫಿ ಹೀರುತ್ತಾ ಕುಳಿತಿರುವಾಗ ಮೀರ್ ಅಮಿತ್ ವಿಝ್ಮನ್ರನ್ನ ಕೇಳುತ್ತಾರೆ. ಅದ್ಯಾವ ಚಿಂತೆಯಲ್ಲಿರುವೇ ಮೈ ಡಿಯರ್ ಫ್ರೆಂಡ್, ಹೇಳು ನಿನ್ನ ಚಿಂತೆಯನ್ನು ನಾನು ದೂರ ಮಾಡಬಲ್ಲೆ ಅಂತ.
ಅಂದು ವಿಝ್ಮನ್ ಮಾತು ಕೇಳಿ ವಿಶ್ವದ ಅತಿ ಅಪಾಯಕಾರಿ ಗುಪ್ತಚರ ಇಲಾಖೆಯ ಮುಖ್ಯಸ್ಥನೇ ಒಮ್ಮೆ ಬೆಚ್ಚಿ ಬಿದ್ದಿದ್ದ. ಹಣೆಯ ಮೇಲೆ ಸಣ್ಣದಾಗಿ ಬೆವರು ಹನಿಗಳು ಮೂಡಿದ್ದವರು. ಕಾರಣ ವಿಝ್ಮನ್ ಕೇಳಿದ್ದು ನನಗೆ ಮಿಗ್-21 ವಿಮಾನ ಬೇಕು ಅಂತ. ಕೇಳಿದಷ್ಟು ಸರಳವಾಗಿ ಮಿಗ್-21 ತಂದುಕೊಡುವುದು ಸರಳವಿರಲಿಲ್ಲ. ಆದರೇ ಮೊಸಾದ್ ಒಂದು ಬಾರಿ ಇದು ಬೇಕು ಎಂದು ಗುರಿಯಿಟ್ಟುಕೊಂಡರೆ ಮುಗೀತು, ಅದನ್ನು ಸಾಧಿಸುವವರೆಗೂ ಅದು ಅರೆಘಳಿಗೆ ವಿರಮಿಸುವುದಿಲ್ಲ. ವಿಝ್ಮನ್ ಮಾತಿಗೆ ಕೊಂಚ ಹೊತ್ತು ಚಿಂತಾಕ್ರಾಂತರಾದ ಅಮಿತ್, ಬಿಡು ಕೆಲವೇ ದಿನಗಳಲ್ಲಿ ಮಿಗ್ 21 ಇಸ್ರೇಲ್ಗೆ ಬಂದಿಳಿಯುತ್ತೆ ಎಂದು ಪ್ರಾಮೀಸ್ ಮಾಡಿ ಹೊರಟು ಬಿಟ್ಟರು. ಅಲ್ಲಿಂದಲೇ ಆರಂಭವಾಗಿದ್ದು ಆಪರೇಷನ್ ಡೈಮಂಡ್.
ಮೊದಲು ಈಜಿಪ್ಟ್ನಿಂದ ಮಿಗ್ 21 ವಿಮಾನ ಕದ್ದುಕೊಂಡು ಬರಲು ಮೊದಲ ಆರಪೇಷನ್ ರೆಡಿಯಾಗಿತ್ತು. ಆದ್ರೆ ಆ ಕೆಲಸಕ್ಕೆ ನೇಮಿಸಲಾದ ಜೀನ್ ಥಾಮಸ್ ಮಾಡಬಾರದ ಎಡವಟ್ಟೊಂದು ಮಾಡಿಕೊಂಡು ಈಜಿಪ್ಟ್ ಸೇನೆಯ ಕೈಗೆ ಸಿಕ್ಕಾಕಿಕೊಂಡ. ಈಜಿಪ್ಟ್ ಸರ್ಕಾರ ಅವನೊಂದಿಗೆ ಅವನ ತಂದೆಯನ್ನೂ ತಂದು ನೇಣುಗಂಬಕ್ಕೆ ಏರಿಸಿತು.
ತನ್ನೊಬ್ಬ ಚಾಣಾಕ್ಷ ಏಜೆಂಟ್ನನ್ನು ಕಳೆದುಕೊಂಡ ದುಃಖದಲ್ಲದ್ದರೂ ಇಸ್ರೇಲ್ ತನ್ನ ಮುಂದಿನ ಕಾರ್ಯದತ್ತ ಹೆಜ್ಜೆಯಿಟ್ಟತು. ಆಮೇಲೆ ಅದರ ದೃಷ್ಟಿ ನೆಟ್ಟಿದ್ದು ಇರಾಕ್ನತ್ತ. ಇರಾಕ್ನಿಂದ ಮಿಗ್ 21 ವಿಮಾನ ಹಾರಿಸಿಕೊಂಡು ಬರಲು ಸ್ಕೇಚ್ ರೆಡಿಯಾಯಿತು. ಇರಾಕ್ನ ವಾಯುನೆಲೆಯಲ್ಲಿ ತಣ್ಣಗೆ ನಿಂತಿದ್ದ ಮಿಗ್ 21 ವಿಮಾನದ ಹಾರಾಟವನ್ನು ಮಾಡುತ್ತಿದ್ದವನ ಹೆಸರು ಮುನಿರ್ ರೆಡ್ಫಾ. ಮೂಲತಃ ಕ್ರಿಶ್ಚನ್ ಆಗಿದ್ದ ಈತ ಇರಾಕ್ ಸೇನೆಯಲ್ಲಿ ಆಗುತ್ತಿದ್ದ ತಾರತಮ್ಯದಿಂದ ಬೇಸತ್ತಿದ್ದರು ಸೇನೆಯಲ್ಲಿ ನಿಷ್ಠಾವಂತ ಯೋಧನಾಗಿ ಗುರುತಿಸಿಕೊಂಡಿದ್ದ. ಒಂದು ಬಾರಿ ಪಬ್ ಒಂದರಲ್ಲಿ ತನ್ನ ಹೆಂಡತಿಯ ತಂಗಿ ಕಂಡ ಶಮೇಶ್ ಜೊತೆ ವಿಸ್ಕಿ ಹೀರುತ್ತಾ ಕುಳಿತಿದ್ದಾಗ ಅಲ್ಲೊಂದು ಅಮೆರಿಕಾದ ದಂತದ ಗೊಂಬೆ ಬಂದು ಹಾಯ್ ಶಮೇಶ್ ಹೌ ಆರ್ ಯು ಎನ್ನುತ್ತದೆ. ಉಭಯಕುಶೋಲಪರಿ ಹೇಳಿಕೊಂಡ ಶಮೇಶ್ ಮುನಿರ್ನನ್ನು ಪರಿಚಯ ಮಾಡಿಸಿಕೊಡುತ್ತಾನೆ.
ಇದನ್ನೂ ಓದಿ:ಡೆಮಸ್ಕಾಸ್ಗೆ ನುಗ್ಗಿ ಇಸ್ರೇಲ್ ಮಹಿಳೆಯರನ್ನು ರಕ್ಷಿಸಿದ್ದು ಹೇಗೆ ಮೊಸಾದ್? ಏನಿದು ರಣರೋಚಕ ಆಪರೇಷನ್ ಸ್ಮಿಖಾ?
ಆಕೆಯ ಹೆಸರು ಹೆಲನ್. ಮಾದವಕತೆಯೇ ಮೈವೆತ್ತು ಕುಳಿತಂತ ಗೊಂಬೆ ಅದು. ಅವಳ ಕಣ್ಣ ಸೆಳೆತಕ್ಕೆ ಸರಳವಾಗಿ ಕರಗಿದ ಮುನಿರ್ ರೆಡ್ಫಾ, ಆಕೆಯೊಂದಿಗೆ ಸ್ನೇಹ ಹಸ್ತ ಚಾಚುತ್ತಾನೆ. ಪರಿಚಯ ಪ್ರೇಮಕ್ಕೆ ತಿರುಗಿ, ಪ್ರೇಮ ಪಲ್ಲಂಗದವರೆಗೂ ಸೆಳೆದುಕೊಂಡು ಹೋಗುತ್ತದೆ. ಅಲ್ಲಿಯವರೆಗೂ ಮುನಿರ್ ರೆಡ್ಫಾನಿಗೆ ತಾನು ಇಸ್ರೇಲ್ ಹೆಣೆದ ಬಲೆಯಲ್ಲಿ ಸಿಲುಕಿದ್ದೇನೆ ಅನಿಸುರುವುದೇ ಇಲ್ಲ. ಯಾವಾಗ ಹೆಲನ್ ಕೆಲವು ದಿನಗಳ ಕಾಲ ರೋಮ್ನ ಅಥೆನ್ಸ್ಗೆ ಪ್ರವಾಸಕ್ಕೆ ಹೋಗೋಣ ಅಂತ ಮುನಿರ್ ರೆಡ್ಫಾನನ್ನು ಕರೆದುಕೊಂಡು ಹೋಗುತ್ತಾಳೆ.ಆ ಪ್ರವಾಸದಲ್ಲಿ ಮುನಿರ್ ರೆಡ್ಫಾಗೆ ನಾವು ಇಲ್ಲಿಂದ ನೇರವಾಗಿ ಟೆಲ್ ಅವೀವ್ಗೆ ಹೋಗ್ತಿದ್ದೀವಿ ಮುನಿರ್ ನೀವು ಬೇಡ ಅನ್ನುವ ಹಾಗಿಲ್ಲ ಎಂದಾಗಲೇ ರೆಡ್ಫಾಗೆ ತಾನು ಕುಳಿತಿದ್ದ ನೆಲವೇ ಕುಸಿದು ಬೀಳುವ ಹಾಗಾಗುತ್ತದೆ.
ವಿಧಿಯಿಲ್ಲದೇ ರೆಡಾಫ್ ಇಸ್ರೇಲ್ಗೆ ಹೋಗುತ್ತಾನೆ. ಅಲ್ಲಿ ಮೀರ್ ಅಮಿತ್ ನೀನು ನಮ್ಮ ಪರವಾಗಿ ಕೆಲಸ ಮಾಡು 1 ಮಿಲಿಯನ್ ಡಾಲರ್ ಕೊಡುವುದಾಗಿ ಹೇಳುತ್ತಾನೆ. ಒಂದು ವೇಳೆ ನೀನು ಇಲ್ಲ ಅನ್ನುವುದಾದ್ರೆ ಹೆಲನ್ ಜೊತೆ ನೀನು ಇರುವ ಖಾಸಗಿ ಕ್ಷಣದ ಫೋಟೋಗಳು ನಮ್ಮ ಬಳಿ ಇವೆ. ಇದು ನಿನ್ನ ಇರಾಕ್ ಸೇನೆಗೆ ತಲುಪಿದಲ್ಲಿ, ನಿನಗೆ ಹಾಗೂ ನಿನ್ನ ಕುಟುಂಬಕ್ಕೆ ಅಲ್ಲಿನ ಸರ್ಕಾರ ಮಾಡಬಹುದಾದ ಅಪಾಯಗಳೇನು ಎಂಬುದನ್ನು ಅರ್ಥ ಮಾಡಿಕೊ ಎಂದು ಹೇಳುತ್ತಾನೆ. ಮುನಿರ್ ರೆಡ್ಫಾ ಈಗ ಇಸ್ರೇಲ್ ಇಕ್ಕಳದಲ್ಲಿ ಅಕ್ಷರಶಃ ಸಿಲುಕಿ ಹೋಗಿರುತ್ತಾನೆ. ವಿಧಿಯಲ್ಲಿದೇ ಒಪ್ಪಿಕೊಳ್ಳಬೇಕಾಗುತ್ತದೆ.
ಇದೆಲ್ಲದರ ನಡುವೆ ಇರಾಕ್ ಸೇನೆಗೆ ರಡ್ಫಾ ಮೇಲೆ ಒಂದು ಡೌಟ್ ಬಂದಿರುತ್ತೆ. ಇತ್ತೀಚೆಗೆ ಆತ ಅಮೆರಿಕನ್ ಮಹಿಳೆಯೊಂದಿಗೆ ಸುತ್ತಾಡುತ್ತಿರುವ ಸುದ್ದಿ ಗುಪ್ತಚರ ಇಲಾಖೆಯಿಂದ ಬರುತ್ತದೆ. ಕೊನೆಗೆ ಆತನನ್ನು ವಿಚಾರಣೆಗೂ ಕೂಡ ಒಳಪಡಿಸಲಾಗುತ್ತದೆ. ಆದ್ರೆ ರೆಡ್ಫಾ ಅಂದು ಕೊಂಚವೂ ಅಳುಕದೆ ನೀಡಿದ ಉತ್ತರ ಸೇನಾಧಿಕಾರಿಗಳ ಬಾಯಿ ಮುಚ್ಚಿಸಿರುತ್ತದೆ. ಆದರೂ ಅವನ ಮೇಲೆ ಒಂದು ಕಣ್ಣಿಡಲು ಇರಾಕ್ ಗುಪ್ತಚರ ಇಲಾಖೆ ಆತ ವಾಸ ಮಾಡುತ್ತಿದ್ದ ಬೀದಿಯೊಳಗೆ ಒಂದು ಲೇಡಿ ಏಜೆಂಟ್ಳನ್ನ ಮನೆಕೆಲಸದವಳ ವೇಷದಲ್ಲಿ ಇರಿಸುತ್ತದೆ. ಮಿಗ್ 21 ವಿಮಾನ ಅಪಹರಿಸುವ ಮುಂಚೆ ನನ್ನ ಕುಟುಂಬವನ್ನು ಕಾಪಾಡಬೇಕು ಎಂದು ಇಸ್ರೇಲ್ ಎದುರು ಬೇಡಿಕೆ ಇಟ್ಟಿರುತ್ತಾನೆ ರೆಡ್ಫಾ. ಅದರಂತೆಯೇ ಮನೆಯ ಒಂದೊಂದೆ ಮನೆಯ ವಸ್ತುಗಳು ಮಾರಲು ಆರಂಭವಾಗುತ್ತವೆ. ಹೊರ ದೇಶಕ್ಕೆ ಪ್ರವಾಸದ ನೆಪ ಹೇಳಿ ಮನೆಯಲ್ಲಿದ್ದ ನಾಯಿಯನ್ನು ಕೂಡ ಪಕ್ಕದ ಮನೆಯವರಿಗೆ ನೋಡಿಕೊಳ್ಳಲು ಹೇಳುತ್ತಾನೆ.
ಅತ್ತ ಅವನ ಕುಟುಂಬ ರೇಲ್ವೆ ಸ್ಟೇಷನ್ಗೆ ಹೋದಾಗ ಇರಾನ್ ಗುಪ್ತಚರ ಇಲಾಖೆಯ ಏಜೆಂಟ್ ಕೂಡ ಅಲ್ಲಿರುತ್ತಾನೆ. ಅಲ್ಲಿಂದ ಯಾವ ಊರಿಗೆ ಟಿಕೆಟ್ ಆ ಕುಟುಂಬ ತೆಗದುಕೊಂಡಿದೆ ಎಂದು ವಿಚಾರ ಮಾಡಿ ಅವರು ಇಳಿಯುವ ರೈಲ್ವೆ ಸ್ಟೇಷನ್ ಕನ್ಫರ್ಮ್ ಮಾಡಿಕೊಂಡು ಅಲ್ಲಿಗೂ ಕೂಡ ಒಬ್ಬ ಏಜೆಂಟ್ನನ್ನು ನಿಯೋಜಿಸಲಾಗಿರುತ್ತೆ. ಆದ್ರೆ ರೆಡಾಫ್ ಕುಟುಂಬದೊಂದಿಗೆ ಇದ್ದ ಮೊಸಾದ್ ಏಜೆಂಟ್ ಅವರನ್ನು ಮಾರ್ಗ ಮಧ್ಯದಲ್ಲಿಯೇ ಇಳಿಸಿಕೊಂಡು ಸರಳವಾಗಿ ಇಸ್ರೇಲ್ಗೆ ರವಾನೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ.
ಅದರಂತೆಯೇ ಮನೆಯ ಒಂದೊಂದೆ ವಸ್ತುಗಳು ಮಾರಲು ಆರಂಭವಾಗುತ್ತವೆ. ಹೊರ ದೇಶಕ್ಕೆ ಪ್ರವಾಸದ ನೆಪ ಹೇಳಿ ಮನೆಯಲ್ಲಿದ್ದ ನಾಯಿಯನ್ನು ಕೂಡ ಪಕ್ಕದ ಮನೆಯವರಿಗೆ ನೋಡಿಕೊಳ್ಳಲು ಹೇಳುತ್ತಾನೆ. ಅತ್ತ ಅವನ ಕುಟುಂಬ ರೇಲ್ವೆ ಸ್ಟೇಷನ್ಗೆ ಹೋದಾಗ ಇರಾಕ್ನ ಗುಪ್ತಚರ ಇಲಾಖೆಯ ಏಜೆಂಟ್ ಕೂಡ ಅಲ್ಲಿರುತ್ತಾನೆ. ಅಲ್ಲಿಂದ ಯಾವ ಊರಿಗೆ ಟಿಕೆಟ್ ಆ ಕುಟುಂಬ ತೆಗದುಕೊಂಡಿದೆ ಎಂದು ವಿಚಾರ ಮಾಡಿ ಅವರು ಇಳಿಯುವ ರೈಲ್ವೆ ಸ್ಟೇಷನ್ ಕನ್ಫರ್ಮ್ ಮಾಡಿಕೊಂಡು ಅಲ್ಲಿಗೂ ಕೂಡ ಒಬ್ಬ ಏಜೆಂಟ್ನನ್ನು ನಿಯೋಜಿಸಲಾಗಿರುತ್ತೆ. ಆದ್ರೆ ರೆಡ್ಫಾ ಕುಟುಂಬದೊಂದಿಗೆ ಇದ್ದ ಮೊಸಾದ್ ಏಜೆಂಟ್ ಅವರನ್ನು ಮಾರ್ಗ ಮಧ್ಯದಲ್ಲಿಯೇ ಇಳಿಸಿಕೊಂಡು ಸರಳವಾಗಿ ಇಸ್ರೇಲ್ಗೆ ರವಾನೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ.
ಇದನ್ನೂ ಓದಿ:ಲೆಬನಾನ್ ಮೇಲೆ ಬಿಳಿ ವಿಷ ಚೆಲ್ಲುತ್ತಿರುವ ಇಸ್ರೇಲ್! ಏನಿದು White Phosphorus ? ಬ್ಯಾನ್ ಆಗಿರೋದ್ಯಾಕೆ?
ಇತ್ತ ವಾಯುನೆಲೆಗೆ ನುಗ್ಗಿದ ರೆಡ್ಫಾ ಮಿಗ್ -21 ಇಂಧನ ಭರ್ತಿ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತಾನೆ. ಅದಕ್ಕೆ ಸಿಬ್ಬಂದಿ ಜನಾಬ್, ಈ ವಿಮಾನಕ್ಕೆ ಇಂಧನ ಭರ್ತಿ ಮಾಡುವಂತಿಲ್ಲ ಎಂದು ಹೇಳುತ್ತಾರೆ. ನಾನು ಈಗಾಗಲೇ ಮೇಲಿನ ಅಧಿಕಾರಿಗಳಿಂದ ಅದಕ್ಕಾಗಿ ಪರವಾನಿಗೆ ಪತ್ರ ತಂದಿದ್ದೇನೆ ಎಂದು ಅವನು ಪರವಾನಿಗೆ ಪತ್ರ ತೋರಿಸುತ್ತಾನೆ. ಮೊಸಾದ್ ಇಂತಹ ಪತ್ರಗಳನ್ನು ರೆಡಿ ಮಾಡುವುದರಲ್ಲಿ ನಿಸ್ಸೀಮರು ಅಂತ ಪಾಪ ಅಲ್ಲಿಯ ಸಿಬ್ಬಂದಿಗಾದ್ರೂ ಏನು ಗೊತ್ತು. ಯಾವ ಕಡೆ ಪ್ರಯಾಣ ಜನಾಬ್ ಎಂದಾಗ ಮುನೀರ್ ಇವತ್ತು ವೆಸ್ಟ್ ಬ್ಯಾಂಕ್ ಮೇಲೆ ದಾಳಿ ಮಾಡಲು ಹೊಟಿದ್ದೇನೆ ಎಂಬ ಮಾತು ಕೇಳುತ್ತಿದ್ದಂತೆ ಖುಷಿಯಿಂದ ಕುಣಿದಾಡಿದ ಸಿಬ್ಬಂದಿ ಇಂಧನ ಪೂರ್ತಿಟ್ಯಾಂಕ್ ಫುಲ್ ಮಾಡಿ ಅಲ್ಲಿಯೇ ನೆಲದ ಮೇಲೆ ಕುಳಿತು ಪ್ರಾರ್ಥಿಸಿ ನೀವು ಗೆದ್ದು ಬನ್ನಿ ಎಂದು ಹಾರೈಸಿ ಕಳುಹಿಸುತ್ತದೆ.
ಏಕಾಏಕಿ ಮಿಗ್-21 ವಿಮಾನ ವಾಯುನೆಲೆಯಿಂದ ಹಾರಿದ್ದು, ಇತ್ತ ರೆಡ್ಫಾ ಕುಟುಂಬ ಇಳಿಯಬೇಕಾದ ರೈಲ್ವೆ ನಿಲ್ದಾಣದಲ್ಲಿ ಇಳಿಯದೇ ಕಣ್ಮರೆಯಾಗಿದ್ದು. ಅಮೆರಿಕಾ ಮಹಿಳೆ ಹೆಲನ್ ಗೊತ್ತಿಲ್ಲದಂತೆ ಇರಾಕ್ನಿಂದ ಕಳೆದು ಹೋಗಿದ್ದು. ಎಲ್ಲ ಡಾಟ್ಗಳನ್ನು ಸೇರಿಸುತ್ತಾ ಬಂದಾಗ ಇರಾಕ್ಗೆ ತಾನೊಂದು ಸಂಚಿನಲ್ಲಿ ಅಕ್ಷರಶಃ ಸಿಲುಕಿದ್ದೇನೆ ಎಂಬುದು ಸ್ಪಷ್ಟವಾಗಿ ಹೋಗುತ್ತದೆ. ಕೂಡಲೇ ನಭಕ್ಕೆ ನೆಗಿದಿದ್ದ ಮಿಗ್ -21 ವಿಮಾನಗಳನ್ನು ಹೊಡೆದುರುಳಿಸುವಂತೆ ಆದೇಶ ಬರುತ್ತದೆ. ಮುನಿರ್ ರೆಡ್ಫಾ ಹಾರಿಸಿಕೊಂಡು ಹೋದ ವಿಮಾನದ ಹಿಂದೆಯೇ ಇರಾಕ್ನ ಎರಡು ವಿಮಾನಗಳು ಬೆನ್ನಟ್ಟುತ್ತವೆ. ಕೊನೆಗೆ ಭೂಮಿಯಂದ ಕೇವಲ ನೂರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಾ, ಇಂಧನದ ಕೊನೆಯ ಬಿಂದು ಬತ್ತಿ ಹೋಗುವಷ್ಟರಲ್ಲಿ ಮುನಿರ್ ರೆಡ್ಫಾ ಇಸ್ರೇಲ್ ವಾಯುನೆಲೆಯಲ್ಲಿ ಮಿಗ್ -21 ವಿಮಾನವನ್ನು ಇಳಿಸಿರುತ್ತಾನೆ.
ದೇಶದ್ರೋಹ ಮಾಡಿದ ಕುದಿ ಒಳಗೆ ಇದ್ದರೂ ಕೂಡ ಮುನಿರ್ ರೆಡ್ಫಾ ಅನಿವಾರ್ಯಕ್ಕೆ ಕಟ್ಟು ಬಿದ್ದಿರುತ್ತಾನೆ. ಇರಾಕ್ ವಾಯುನೆಲೆಯಿಂದ ಇಸ್ರೇಲ್ ಮಿಗ್ -21 ವಿಮಾನ ಕದ್ದಿದ್ದು ಜಗಜ್ಜಾಹೀರು ಆಗಿ ಇರಾಕ್ ಜಾಗತಿಕವಾಗಿ ಮತ್ತೊಮ್ಮೆ ಮುಜುಗರಕ್ಕಿಡಾಗುತ್ತದೆ. ಎಂತಹ ಮುಠ್ಠಾಳರಿಗೆ ನಾನು ಮಿಗ್ -21 ವಿಮಾನ ಕೊಟ್ಟೆ ಎಂದು ಸೋವಿಯತ್ ರಷ್ಯಾ ಕೈ ಕೈ ಹಿಸುಕಿಕೊಳ್ಳುತ್ತೆ. ಇಸ್ರೇಲ್ ಇದೆ ವಿಮಾನವನ್ನೇ ಬಳಸಿ 1967ರಲ್ಲಿ ನಡೆದ ಯುದ್ಧದಲ್ಲಿ ಸಿರಿಯಾದ ಕೈವಶದಲ್ಲಿದ್ದ ಗೋಲನ್ ಹೈಟ್ಸ್ ಮೇಲೆ ಭೀಕರವಾಗಿ ದಾಳಿ ಮಾಡಿ ತನ್ನ ವಶಕ್ಕೆ ಪಡೆದುಕೊಳ್ಳುತ್ತೆ.
ಗ್ರಂಥಋಣ: ಯಹೂದಿ, ಶ್ರೀಕಾಂತ್ ಶೆಟ್ಟಿ ಕಾರ್ಕಳ (ಮಹಾಕಾಲ್)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ