/newsfirstlive-kannada/media/post_attachments/wp-content/uploads/2025/03/WAGHYA.jpg)
ಇತಿಹಾಸಗಳಿಗೆ ಹಲವು ಮಜಲುಗಳು. ಐತಿಹಾಸಿಕ ದಾಖಲೆಯಿಂದ ಹಿಡಿದು ಲಾವಣಿ ಪದಗಳು, ಜಾನಪದಗಳ, ಒಬ್ಬರಿಂದ ಒಬ್ಬರಿಗೆ ಹರಡಿದ ಕಥೆಗಳಿಂದಲೂ ನಮಗೆ ಕಾಣ ಸಿಗುತ್ತವೆ. ಹೀಗೆಯೇ ಮರಾಠಾ ದೊರೆ ಶಿವಾಜಿಗೆ ಸಂಬಂಧಿಸಿದ ಒಂದು ಕಥೆ ಇಂದಿಗೂ ಕೂಡ ಪ್ರಚಲಿತದಲ್ಲಿದೆ . ಅದು ಅವನ ನೆಚ್ಚಿನ ಶ್ವಾನಾ ವ್ಯಾಘ್ಯಾ ಬಗ್ಗೆ. ಶಿವಾಜಿ ಸ್ಮಾರಕದ ಪಕ್ಕದಲ್ಲಿಯೇ ಒಂದು ಶ್ವಾನದ ಸ್ಮಾರಕವನ್ನು ಕಟ್ಟಲಾಗಿತ್ತು. ಅದರ ಹಿಂದೆ ಒಂದು ಕಥೆಯೇ ಇದೆ. ಆದರೆ ಅದಕ್ಕೆ ಐತಿಹಾಸಿಕವಾದ ದಾಖಲೆಗಳು ಯಾವುದು ಇಲ್ಲ. ಅದು ಜನರಿಂದ ಹಾಗೂ ಲಾವಣಿ ಪದಗಳಿಂದ ಸೃಷ್ಟಿಯಾದ ಒಂದು ಮನಕಲುಕುವ ಕಥೆ.
ಇದನ್ನೂ ಓದಿ: ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್.. ಕಾಶ್ಮೀರಕ್ಕೆ ನೇರ ರೈಲು ಮಾರ್ಗ ಉದ್ಘಾಟನೆ ಯಾವಾಗ; ಏನಿದರ ವಿಶೇಷತೆಗಳು?
ಶಿವಾಜಿ ಮಹಾರಾಜರೊಂದಿಗೆ ಅವರ ನೆಚ್ಚಿನ ನಾಯಿ ವ್ಯಾಘ್ಯಾ ಸದಾ ಇರುತ್ತಿತ್ತು. ಅವರಿಗೆ ಅಂಟಿಕೊಂಡೇ ಇರುತ್ತಿತ್ತು. ಒಮ್ಮೆ ಶಿವಾಜಿ ಮಹಾರಾಜರು ರಾತ್ರಿ ಮಲಗಿದ ವೇಳೆ ಈ ವ್ಯಾಘ್ಯಾ ಅವರ ಪಕ್ಕದಲ್ಲಿಯೇ ಮಲಗಿಕೊಂಡಿತ್ತಂತೆ. ಈ ವೇಳೆ ಶತ್ರು ಪಾಳಯದವನೊಬ್ಬ ಎಲ್ಲ ಭದ್ರತೆಗಳನ್ನು ಕಳ್ಳ ಮಾರ್ಗದಿಂದ ದಾಟಿಕೊಂಡು ಶಿವಾಜಿ ಇದ್ದ ಕೋಣೆಗೆ ಬಂದಿದ್ದಾನೆ. ಅವನನ್ನು ನೋಡಿದ ವ್ಯಾಘ್ಯಾ ಕೂಡಲೇ ಬೊಗಳಲು ಶುರು ಮಾಡಿದ್ದಾನೆ. ಆಗ ಎಚ್ಚರಗೊಂಡ ಶಿವಾಜಿ ಮಹಾರಾಜರು ಆತನನ್ನು ಹೊಡೆದುರುಳಿಸಿದ್ದರಂತೆ.
ಇದನ್ನೂ ಓದಿ: ಪ್ರಭಾಸ್ ಮದುವೆನಾ?; ಮೋಸ್ಟ್ ಬ್ಯಾಚುಲರ್ಗೆ ಕಂಕಣ ಭಾಗ್ಯ.. ಅನುಷ್ಕಾ ಅಲ್ಲವೇ ಅಲ್ಲ, ಮತ್ಯಾರು?
ವಾಘ್ಯಾ ಮಾಡಿದ ಸಾಹಸಕ್ಕೆ ಅವರು ಅವನಿಗೆ ಹಲವು ಉಡುಗೊರೆಯನ್ನು ನೀಡಿ ಗೌರವಿಸಿದ್ದರಂತೆ. ಅಂದಿನಿಂದ ವ್ಯಾಘ್ಯಾನೊಂದಿಗೆ ಶಿವಾಜಿಗೆ ಇನ್ನೂ ಆತ್ಮೀಯತೆ ಬೆಳೆಯಿತಂತೆ. ಅಷ್ಟೇ ಶಿವಾಜಿಯತ್ತ ವ್ಯಾಘ್ಯಾಗೆ ನಿಷ್ಠೆ ಬೆಳೆದುಕೊಂಡು ಹೋಯಿತಂತೆ. ಕೊನೆಗೆ ಶಿವಾಜಿ ಮಹಾರಾಜರು ಮೃತರಾದಾಗ, ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದಾಗ ಈ ವ್ಯಾಘ್ಯಾ ಅವರ ಚಿತೆಗೆ ಹಾರಿಕೊಂಡು ಆತ್ಮಾರ್ಪಣೆ ಮಾಡಿಕೊಂಡಿಂತೆ ಎಂಬ ಕಥೆ ಮಹಾರಾಷ್ಟ್ರದ ಬೀದಿ ಬೀದಿಯಲ್ಲಿಯೂ ಪರಿಚಿತ. ಹೀಗಾಗಿ ವಾಘ್ಯಾನ ಪ್ರತಿಮೆಯನ್ನು ಶಿವಾಜಿ ಮಹಾರಾಜರ ಪಕ್ಕದಲ್ಲಿಯೇ ನಿರ್ಮಿಸಲಾಗಿತ್ತು.
ಆದ್ರೆ ಶಿವಾಜಿ ಮಹಾರಾಜರ ವಂಶರಾದ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಕೊಲ್ಹಾಪುರದ ಶಾಹಿ ಪರಿವಾರದವರಾದ ಸಂಭಾಜಿರಾಜೆ ಛತ್ರಪತಿಯವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ 22ನೇ ಮಾರ್ಚ್ನಂದು ಪತ್ರ ಬರೆದು ಈ ರೀತಿಯಾದ ಒಂದು ಶ್ವಾನ ಶಿವಾಜಿ ಮಹಾರಾಜರ ಬಳಿ ಇರಲಿಲ್ಲ. ಇತ್ತು ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ ಕೂಡಲೇ ಆ ಪ್ರತಿಮೆಯನ್ನು ಅಲ್ಲಿಂದ ತೆರವುಗೊಳಿಸುಬೇಕು ಎಂದು ಪತ್ರವನ್ನು ಬರೆದಿದ್ದಾರೆ.
ಮುಧೋಳ ಶ್ವಾನಕ್ಕೂ ಶಿವಾಜಿ ಸೇನೆಗೂ ಇತ್ತು ನಂಟು?
ಇನ್ನು ಮತ್ತೊಂದು ವಿಷಯವೇನೆಂದರೆ ಶಿವಾಜಿ ಪಕ್ಕಾ ತಂತ್ರಗಾರಿಕೆ ಹೂಡಿಕೊಂಡು ಯುದ್ಧ ಮಾಡುವ ಕೌಶಲ್ಯ ಹೊಂದಿದ ವೀರ. ಹೀಗಾಗಿಯೇ ಸಾವಿರ ಸಾವಿರ ಮೊಘಲರ ಸೇನೆಯನ್ನು ಕೇವಲ ಇನ್ನೂರು ಮುನ್ನೂರು ಮರಾಠಾ ಸೈನಿಕರು ಮಣ್ಣು ಮುಕ್ಕಿಸುತ್ತಿದ್ದರು. ಶಿವಾಜಿ ಸೇನೆಯ ಇನ್ನೊಂದು ಪ್ರಮುಖ ಅಂಶ ಅಂದ್ರೆ ಅದು ಮುಧೋಳ ಶ್ವಾನ. ಅವನ ಸೇನೆಯಲ್ಲಿ ಹಲವಾರು ಮುಧೋಳ ಶ್ವಾನಗಳು ಇರುತ್ತಿದ್ದವಂತೆ. ಅವುಗಳಿಗೆ ಸರಿಯಾದ ತರಬೇತಿ ಕೊಟ್ಟು ಅವುಗಳನ್ನು ಯುದ್ಧದಲ್ಲಿ ಬಳಸಲಾಗುತ್ತಿತ್ತಂತೆ. ಗೇರಿಲ್ಲಾ ಯುದ್ಧ ತಂತ್ರಕ್ಕೆ ಮುಧೋಳ ಶ್ವಾನಗಳು ಹೇಳಿ ಮಾಡಿಸಿದ ತಳಿಯಂತೆ ಯುದ್ಧದಲ್ಲಿ ಪಾಲ್ಗೊಳ್ಳುತ್ತಿದ್ದವಂತೆ. ಇದಕ್ಕೆ ಐತಿಹಾಸಿಕವಾಗಿ ದಾಖಲೆಗಳು ಕೂಡ ಇವೆ ಎಂದು ಹೇಳಲಾಗುತ್ತದೆ. ಈ ಹಿಂದೆ ತಮಿಳುನಾಡಿನ ನಾಯಕ ಸಾಮ್ರಾಜ್ಯದ ರಾಜರು ಕೂಡ ರಾಜಪಾಲಯಂ ಎಂಬ ಶ್ವಾನ ತಳಿಗಳನ್ನು ಯುದ್ಧದಲ್ಲಿ ಬಳಸಿಕೊಳ್ಳುತ್ತಿದ್ದರಂತೆ. ಪಾಲಿಗರ್ ಯುದ್ಧಗಳು(1799-1805) ಮತ್ತು ಕರ್ನಾಟಕ ಯುದ್ಧಗಳಲ್ಲಿ ರಾಜಪಾಲಯಂ ಶ್ವಾನಗಳನ್ನು ಬಳಸಿದ್ದರು ಎಂಬ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ