newsfirstkannada.com

ಕರ್ನಾಟಕ, ತಮಿಳುನಾಡು ಮಧ್ಯೆ ಮತ್ತೊಂದು ನದಿ ನೀರು ವಿವಾದ; ಸುಪ್ರೀಂಕೋರ್ಟ್ ಮಹತ್ವದ ಸೂಚನೆ

Share :

Published January 23, 2024 at 4:20pm

Update January 23, 2024 at 4:21pm

    ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟದಲ್ಲಿ ಉಗಮಿಸುವ ಪೆನ್ನಾರ್ ನದಿ

    ನದಿ ನೀರು ಹಂಚಿಕೆ ಇತ್ಯರ್ಥಕ್ಕೆ ಸಮಿತಿ ರಚನೆ ಮಾಡಲು ಸೂಚನೆ

    ಕರ್ನಾಟಕದಲ್ಲಿ ಇದನ್ನು ಉತ್ತರ ಪಿನಾಕಿನಿ ಎಂದು ಕರೆಯುತ್ತಾರೆ

ನವದೆಹಲಿ: ಕರ್ನಾಟಕ, ತಮಿಳುನಾಡಿನ ಮಧ್ಯೆ ಉಂಟಾಗಿರುವ ಪೆನ್ನಾರ್ ನದಿ ನೀರಿನ ವಿವಾದಕ್ಕೆ ಸಂಧಾನ ಸಮಿತಿ ರಚನೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. 2 ವಾರಗಳಲ್ಲಿ ಹೊಸದಾಗಿ ಸಂಧಾನ ಸಮಿತಿಯನ್ನು ರಚಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ಕರ್ನಾಟಕ, ತಮಿಳುನಾಡಿನ ಮಧ್ಯೆ ಕಾವೇರಿಯಂತೆ ಪೆನ್ನಾರ್ ನದಿ ನೀರಿನ ವಿವಾದ ಕೂಡ ಜೀವಂತವಾಗಿದೆ. ಈ ನದಿ ನೀರು ಹಂಚಿಕೆ ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚನೆ ಮಾಡಲು ಸೂಚಿಸಿದ್ದು, ಆ ಸಮಿತಿ 3 ತಿಂಗಳೊಳಗೆ ತನ್ನ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ಆದೇಶ ನೀಡಲಾಗಿದೆ.

ಇದನ್ನೂ ಓದಿ: VIDEO: ರಘುಪತಿ ರಾಘವ ರಾಜಾರಾಮ್.. ಬಿಜೆಪಿ ನಾಯಕರಿಗೆ ಟಾಂಗ್‌ ಕೊಟ್ಟ ಡಿ.ಕೆ ಶಿವಕುಮಾರ್

ಏನಿದು ಪೆನ್ನಾರ್ ನದಿ ವಿವಾದ?
ಪೆನ್ನಾರ್ ನದಿ ದಕ್ಷಿಣ ಭಾರತದ ನದಿಗಳಲ್ಲೊಂದು. ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟದಲ್ಲಿ ಉಗಮಿಸುವ ಇದು ಆಂಧ್ರ ಪ್ರದೇಶದ ಮೂಲಕ ಬಂಗಾಳ ಕೊಲ್ಲಿಯನ್ನು ತಲುಪುತ್ತದೆ. ಕರ್ನಾಟಕದಲ್ಲಿ ಇದನ್ನು ಉತ್ತರ ಪಿನಾಕಿನಿ ಎಂದು ಕರೆಯುತ್ತಾರೆ. ಹೆಚ್ಚು ಮರಳನ್ನು ಹೊತ್ತು ತರುವ ಈ ನದಿ ವರ್ಷದಲ್ಲಿ ಹೆಚ್ಚು ಕಾಲ ನೆಲದ ಅಡಿಯಲ್ಲಿ ಹರಿಯುತ್ತದೆ.

ಕರ್ನಾಟಕ ಸರ್ಕಾರ ಪೆನ್ನಾರ್ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕೋಲಾರ ಜಿಲ್ಲೆಯ ಯರಗೋಳ ಗ್ರಾಮದ ಬಳಿ ಕುಡಿಯುವ ನೀರಿಗಾಗಿ ಅಣೆಕಟ್ಟೆಯನ್ನು ನಿರ್ಮಿಸುತ್ತಿದೆ. ಕೃಷಿ ಚಟುವಟಿಕೆ, ಕುಡಿಯುವ ನೀರಿಗಾಗಿ ತಮಿಳುನಾಡಿನ ಜನರು ಈ ಪೆನ್ನಾರ್ ನದಿಯನ್ನು ಅವಲಂಬಿಸಿದ್ದಾರೆ. ಇದರಿಂದ ನದಿ ನೀರಿನ ಹರಿವಿಗೆ ಅಡ್ಡಿಯಾಗುತ್ತದೆ ಅನ್ನೋದು ತಮಿಳುನಾಡಿನ ವಾದವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕ, ತಮಿಳುನಾಡು ಮಧ್ಯೆ ಮತ್ತೊಂದು ನದಿ ನೀರು ವಿವಾದ; ಸುಪ್ರೀಂಕೋರ್ಟ್ ಮಹತ್ವದ ಸೂಚನೆ

https://newsfirstlive.com/wp-content/uploads/2024/01/Pennar-River.jpg

Load More