/newsfirstlive-kannada/media/post_attachments/wp-content/uploads/2025/07/SUPREME-COURT.jpg)
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಢವಢವ ಶುರುವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸಾರಥಿಯ ಜಾಮೀನು ಅರ್ಜಿಯ ವಿಚಾರಣೆ ನಡೆದಿದೆ. ಸರ್ಕಾರದ ವಾದ ಮುಗಿದಿದ್ದು, ದರ್ಶನ್ ಪರ ವಕೀಲರು ಇವತ್ತು ಪ್ರತಿವಾದ ಮಂಡಿಸಲಿದ್ದಾರೆ. ಕೊನೆ ಗಳಿಗೆಯಲ್ಲಿ ದಾಸನ ಪರ ವಕೀಲರು ಬದಲಾಗಿದ್ದು, ಬೇಲ್ ರದ್ದಾಗುವ ಭೀತಿ ಆವರಿಸಿದೆ.
ಹೈಕೋರ್ಟ್ ನೀಡಿರುವ ಜಾಮೀನು ರದ್ದಾಗುತ್ತಾ ಅಥವಾ ಮುಂದುವರೆಯುತ್ತಾ ಎಂಬುದು ಇವತ್ತು ತೀರ್ಮಾನ ಆಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರ ಚಿತ್ತ ಇದೀಗ ಸುಪ್ರೀಂಕೋರ್ಟ್ನತ್ತ ನೆಟ್ಟಿದೆ.
‘ಸುಪ್ರೀಂ’ನತ್ತ ಎಲ್ಲರ ಚಿತ್ತ!
ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈಗಾಗಲೇ ರಾಜ್ಯ ಸರ್ಕಾರ ಪರ ವಕೀಲರ ವಾದವನ್ನ ಸುಪ್ರೀಂಕೋರ್ಟ್ ಆಲಿಸಿದೆ. ಎಲ್ಲ ದಾಖಲೆಗಳನ್ನು ಸ್ವೀಕರಿಸಿರುವ ಸುಪ್ರೀಂ ಕೋರ್ಟ್ ಪೀಠ, ಇವತ್ತು ಡೆವಿಲ್ ಪರ ವಕೀಲರ ವಾದವನ್ನ ಆಲಿಸಲಿದೆ. ಬಳಿಕ ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ವಾಹನ ಚಾಲನೆಯಿಂದ ತೊಂದರೆ, ಕೈಗಾರಿಕಾ ಉದ್ಯಮಿಗಳಿಗೆ ಸಂತಸದ ದಿನ; ಭವಿಷ್ಯ ಈ ದಿನ
‘ಡೆವಿಲ್’ ಬೇಲ್ ಭವಿಷ್ಯ
- ಜು. 17ರಂದು ದರ್ಶನ್ ಬೇಲ್ ಅರ್ಜಿ ವಿಚಾರಣೆ ನಡೆದಿತ್ತು
- ಜಾಮೀನಿನ ವಿಷ್ಯದಲ್ಲಿ ನಾವೇಕೆ ಮಧ್ಯಪ್ರವೇಶಿಸ ಬಾರದು?
- ನಮಗೆ ಪೊಲೀಸರು ನೀಡಿರುವ ಸಾಕ್ಷ್ಯಗಳು ತೃಪ್ತಿ ತಂದಿವೆ
- ಬೇಲ್ ನೀಡಲು ಹೈಕೋರ್ಟ್ ಕಾರಣಗಳು ಸಮಂಜಸವಾಗಿಲ್ಲ
- ಹೀಗೆ ಹೇಳಿ ಅರ್ಜಿ ವಿಚಾರಣೆಯನ್ನ ಜು.22ಕ್ಕೆ ಮುಂದೂಡಿಕೆ
- ಜು.22ರಂದು ದರ್ಶನ್ ಪರ ಕಪಿಲ್ ಸಿಬಲ್ ವಾದಿಸಬೇಕಿತ್ತು
- ಆದ್ರೆ, ಕಪಿಲ್ ಸಿಬಲ್ ಬಾರದೇ ಎರಡು ದಿನ ಕಾಲಾವಕಾಶ
- ಇವತ್ತು ಕಪಿಲ್ ಸಿಬಲ್ ಬದಲಿಗೆ ಸಿದ್ದಾರ್ಥ್ ದವೆ ವಾದ
ದರ್ಶನ್ ಪರ ವಕೀಲರಾಗಿದ್ದ ಕಪಿಲ್ ಸಿಬಲ್ ವಾದ ಮಂಡನೆ ಮಾಡದೇ ಇರೋದು ಡೆವಿಲ್‌ಗೆ ಢವಢವ ಶುರುವಾಗಿದೆ. ಥಾಯ್ಲೆಂಡ್‌ನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮಾಡುತ್ತಾ ಜಾಲಿ ಮೂಡ್‌ನಲ್ಲಿದ್ದ ದರ್ಶನ್‌ಗೆ ಬೇಲ್ ರದ್ದಾಗುವ ಭೀತಿ ಆವರಿಸಿದೆ. ಇವತ್ತು ಸಿದ್ಧಾರ್ಥ್ ದವೆ ವಾದ ಮಂಡನೆ ಬಳಿಕ ದಾಸನ ಭವಿಷ್ಯ ಏನಾಗುತ್ತೆ ಅನ್ನೋದೇ ಅತಿದೊಡ್ಡ ಕೌತುಕ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ದೆಹಲಿಯಾತ್ರೆ.. ಮತ್ತೆ ಕಾಂಗ್ರೆಸ್ನಲ್ಲಿ ಬಿಸಿಬಿಸಿ ಟಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ