/newsfirstlive-kannada/media/post_attachments/wp-content/uploads/2024/09/Riyan-parag-1.jpg)
#Justiceforriyanparag ಎಂಬ ಹ್ಯಾಶ್​​ಟ್ಯಾಗ್​​ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಹ್ಯಾಶ್​​​ಟ್ಯಾಗ್​ ಹರಿದಾಡುತ್ತಿದ್ದು. ಟ್ರೆಂಡಿಂಗ್​​ನಲ್ಲಿ ಕಾಣಿಸಿಕೊಂಡ ಈ ಹ್ಯಾಶ್​​ಟ್ಯಾಗ್​ ಕ್ರಿಕೆಟ್​​ ಅಭಿಮಾನಿಗಳ ಕುತೂಹಲತೆಯನ್ನು ಕೆರಳಿಸಿದೆ. ಆದರೆ ಈ ಹ್ಯಾಶ್​​ಟ್ಯಾಗ್​ ನಿರ್ಮಾಣಕ್ಕೆ ಕಾರಣ ಯಾರು ಗೊತ್ತಾ? ಶುಭ್ಮನ್​​ ಗಿಲ್​ ಅಂದ್ರೆ ನಂಬ್ತೀರಾ?. ಹಾಗಿದ್ರೆ ಈ ಸ್ಟೋರಿ ಓದಿ.
‘ರಿಯಾನ್​ ಪರಾಗ್​ಗೆ ನ್ಯಾಯ ಸಿಗಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್​​ಟ್ಯಾಗ್​ ಕಾಣಿಸಿಕೊಂಡಿದೆ. ಇದಕ್ಕೆಲ್ಲ ಕಾರಣ ಶುಭ್ಮನ್​​ ಗಿಲ್​​ ಕಂಪನಿಯೊಂದಕ್ಕೆ ನೀಡಿರುವ ಜಾಹೀರಾತು.
Riyan Parag bhai...? pic.twitter.com/COspR8eTeV
— Jo Kar (@i_am_gustakh)
Riyan Parag bhai...😭 pic.twitter.com/COspR8eTeV
— Jo Kar (@i_am_gustakh) September 4, 2024
">September 4, 2024
ಹೌದು. ಜನಪ್ರಿಯ ಆಡಿಯೋ ಕಂಪನಿಯೊಂದಕ್ಕೆ ಶುಭ್ಮನ್​ ಗಿಲ್​​ ಮತ್ತು ಅನನ್ಯಾ ಪಾಂಡೆ ಜಾಹೀರಾತು ನೀಡಿದ್ದಾರೆ. ಆ ಜಾಹೀರಾತನ್ನು ಎಕ್ಸ್​ನಲ್ಲಿ ಕಂಪನಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್​ಗಳು ಜಾಹೀರಾತು ಕಂಡ ತಕ್ಷಣ ರಿಯಾಗ್​ ಪರಾಗ್​ ಅವರ ಹೆಸರನ್ನು ಉಲ್ಲೇಖಿಸಿ ಕಾಲೆಳೆದಿದ್ದಾರೆ.
When you realize your crush is crushing on someone else... ?#AnanyaPanday#RiyanParag#ShubmanGillpic.twitter.com/FXIXcHKIiQ
— ?????????? (@PublicHaiHum)
When you realize your crush is crushing on someone else... 😅#AnanyaPanday#RiyanParag#ShubmanGillpic.twitter.com/FXIXcHKIiQ
— 𝐒unil 𝐑ahar (@SunillRahar) September 4, 2024
">September 4, 2024
ರಿಯಾನ್​ ಪರಾಗ್​​ ಬಾಲಿವುಡ್​ ನಟಿ ಅನನ್ಯಾ ಪಾಂಡೆಯ ಅಭಿಮಾನಿ. ಈ ವರ್ಷ ಆರಂಭದಲ್ಲಿ ಗೇಮಿಂಗ್​​ ಸೆಷನ್​ನಲ್ಲಿ ರಿಯಾನ್​ ಯೂಟ್ಯೂಬ್​ ಲೈವ್​​ನಲ್ಲಿ ಹುಡುಕಾಡಿದಾಗ ಕೆಲವು ನಟಿಯರ ಹೆಸರುಗಳು ಕಾಣಿಸಿದೆ. ಅದರಲ್ಲಿ ಅನನ್ಯಾ ಪಾಂಡೆ ಹೆಸರು ಕೂಡ ಇದ್ದ ಸಂಗತಿ ವೈರಲ್​ ಆಗಿತ್ತು. ಆದರೀಗ ಅನನ್ಯಾ ಮತ್ತು ಶುಭ್ಮನ್​ ಗಿಲ್​ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನೋಡಿ ರಿಯಾನ್​ ಪ್ರತಿಕ್ರಿಯಿಸಿದ್ದಾರೆ. ಇವರ ರಿಯಾಕ್ಷನ್​ ಕಂಡ ಬಳಿಕ ನೆಟ್ಟಿಗರು ಅವರ ಕಾಲೆಳೆಯಲು ಶುರು ಮಾಡಿದ್ದಾರೆ.
Shubhman gill के साथ Riyan Parag की crush #AnanyaPanday ???
Riyan Parag be like - ठुकरा के मेरा प्यार मेरा इंतकाम देखेगी ??
Justice for Indian cricketer Riyan Parag? #shubhmangill#riyanparag#AnanyaPandey
https://t.co/iN5ebU7Yrq#riyanparagpic.twitter.com/xOQXlRHeic— POONAM MEHARA (@POONAMSANPA7339) September 4, 2024
ಅನೇಕರು ‘ಜಸ್ಟೀನ್​ ಫಾರ್​ ರಿಯಾನ್​ ಪರಾಗ್​’ ಎಂದು ಹ್ಯಾಶ್​​ಟ್ಯಾಗ್​ ನಮೂದಿಸಿ ಟ್ರೆಂಡಿಂಗ್​ನಲ್ಲಿ ಕಾಣಿಸುವಂತೆ ಮಾಡಿದ್ದಾರೆ. ಇನ್ನು ಹಲವರು ಶುಭ್ಮನ್​ ಗಿಲ್​ ಕಾಲೆಳೆದಿದ್ದಾರೆ. ನಟಿ ಸಾರಾ ಅಲಿ ಖಾನ್​​, ಸಾರಾ ತೆಂಡೂಲ್ಕರ್​ ಬಳಿಕ ಅನನ್ಯಾ ಪಾಂಡೆಯ ಜೊತೆಗೆ ಕಾಣಿಸಿಕೊಂಡಿದ್ದನ್ನು ಕಂಡು ಮೀಮ್ಸ್​ ಮಾಡಿ ಹಂಚುತ್ತಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us