Advertisment

ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಸಂಭ್ರಮ; ರಥೋತ್ಸವಕ್ಕೆ ಹಣತೆಗಳಿಂದ ಅಲಂಕಾರಗೊಂಡ ರಥಬೀದಿ

author-image
Gopal Kulkarni
Updated On
ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಸಂಭ್ರಮ; ರಥೋತ್ಸವಕ್ಕೆ ಹಣತೆಗಳಿಂದ ಅಲಂಕಾರಗೊಂಡ ರಥಬೀದಿ
Advertisment
  • ಕೃಷ್ಣ ನಗರಿಯಲ್ಲೀಗ ಲಕ್ಷದೀಪೋತ್ಸವದ ಸಂಭ್ರಮ
  • ಕಡಗೋಲು ಕೃಷ್ಣನ ಬರಮಾಡಿಕೊಳ್ಳಲು ತಯಾರಿ
  • ಯೋಗ ನಿದ್ರೆಯಿಂದ ಏಳಲಿದ್ದಾನೆ ಸುಗುಣಾಂತರಂಗ

ಅಪರೂಪದ ಸಂಪ್ರದಾಯಗಳಿಗೆ ಹೆಸರಾಂತ ಜಾಗ ಉಡುಪಿ. ಇಲ್ಲಿನ ಕೃಷ್ಣಮಠ‌ದಲ್ಲಿ ಲಕ್ಷದೀಪಗಳಿಂದ ಸಂಭ್ರಮ. ಕಡಗೋಲು ಕೃಷ್ಣನ ಮೊದಲ ರಥೋತ್ಸವಕ್ಕೆ ಅಷ್ಟಮಠಗಳ ರಥಬೀದಿ ಅಲಂಕಾರಗೊಂಡು ಹಣತೆಯ ದೀಪಗಳಿಂದ ಕಂಗೊಳಿಸುತ್ತಿದೆ. ಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ನಡುವೆ ಕೃಷ್ಣನ ದೇವರ ಮೆರವಣಿಗೆಯನ್ನ ನಡೆಸಲಾಯ್ತು. ಅಲ್ಲಿನ ರಥಬೀದಿಗಳಲ್ಲಿ ಲಕ್ಷದೀಪೋತ್ಸವ ಕಂಡು ಭಕ್ತರು ಭಕ್ತಿಯ ಮಳೆಯಲ್ಲಿ ನೆನೆದರು.

Advertisment

ಆ ಭಗವಂತನ ಸ್ವಾಗತಕ್ಕೆ ಉಡುಪಿಯ ಅಷ್ಟಮಠಗಳ ರಥಬೀದಿ ದೀಪಗಳಿಂದ ಕಂಗೊಳಿಸುತ್ತಿದ್ದು, ಭಕ್ತರು ಕೃಷ್ಣನಿಗೆ ಹಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಿದ್ರು. ಕೃಷ್ಣ ದೇವರು ಯೋಗ ನಿದ್ರೆಯಲ್ಲಿರುತ್ತಾನೆ ಅನ್ನೋದು ಇಲ್ಲಿಯವರ ನಂಬಿಕೆ. ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನ ಬರಮಾಡಿಕೊಳ್ಳಲು ನಡೆದಿರುವ ತಯಾರಿ ಇದು.

publive-image

ಈ ಮಹೋತ್ಸವವನ್ನ ಲಕ್ಷದೀಪೋತ್ಸವ ಎನ್ನುತ್ತಾರೆ. ಇಳಿ ಹೊತ್ತಲ್ಲಿ ಭಕ್ತರೆಲ್ಲರೂ ಸೇರಿ ರಥಬೀದಿಯಲ್ಲಿ ಸಾವಿರಾರು ದೀಪಗಳನ್ನ ಬೆಳಗಿದರು. ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನೆರವೇರಿತು. ಆ ಬಳಿಕ ಮಠದಿಂದ ಹೊರ ಬರುವ ಕೃಷ್ಣ ದೇವರ ಉತ್ಸವ ಮೂರ್ತಿಯನ್ನ ಮಧ್ವ ಸರೋವರಕ್ಕೆ ಕೊಂಡೊಯ್ಯಲಾಯ್ತು. ಸಾಲು ಸಾಲು ದೀಪಗಳ ನಡುವೆ ಕೃಷ್ಣ ದೇವರ ಮೆರವಣಿಗೆ ನಡಿಯಿತು.. ರಥದ ಮುಂಭಾಗದಲ್ಲಿ ಚಂಡೆಗಳ ನಾದ ವೈಭವ ಮೇಳೈಸಿತು.

ಇದನ್ನೂ ಓದಿ:ಕರ್ನಾಟಕದ ಮಹಿಳೆ ಮದುವೆಯಾಗಿದ್ದ ತಮಿಳುನಾಡಿನ ಸ್ವಾಮೀಜಿಗೆ ಭಾರೀ ವಿರೋಧ; ಕಾರಣವೇನು?

Advertisment

ಈ ಬಾರಿಯ ಲಕ್ಷದೀಪೋತ್ಸವದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ಸಹಿತ ಹಲವು ಮಠಗಳ ಯತಿಗಳು ಭಾಗವಹಿಸಿದ್ರು. ನೂರಾರು ಭಕ್ತರು ಸೇರಿ ಎರಡೂ ರಥಗಳನ್ನ ಎಳೆದರು. ಸಾವಿರಾರು ಸಂಖ್ಯೆಯಲ್ಲಿ ಕೃಷ್ಣ ಮಠಕ್ಕೆ ಬಂದ ಭಕ್ತರು ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡಿದ್ರು..
ಇನ್ನೂ ಮೂರು ದಿನಗಳ ಕಾಲ ಸಮಾನ ವೈಭವದಿಂದ ಲಕ್ಷದೀಪೋತ್ಸವ ನಡೆಯುತ್ತೆ. ಅಷ್ಟಮಠಗಳ ರಥಬೀದಿಯಲ್ಲಿ ಸೇವಾರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment