newsfirstkannada.com

×

WATCH: ವೈದ್ಯರು, ನರ್ಸ್‌ಗಳ ವೇಷದಲ್ಲಿ ನುಗ್ಗಿದ ಇಸ್ರೇಲ್ ಸೇನೆ; ಹಮಾಸ್ ಉಗ್ರರ ಟಾಪ್‌ ಕಮಾಂಡರ್‌ ಫಿನೀಶ್‌!

Share :

Published January 30, 2024 at 8:08pm

    ಡಾಕ್ಟರ್, ನರ್ಸ್‌ಗಳ ವೇಷದಲ್ಲಿ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಪಡೆ

    ವೆಸ್ಟ್‌ ಬ್ಯಾಂಕ್‌ನಲ್ಲಿ ಅಡಗಿದ್ದ ಹಮಾಸ್‌ನ ಟಾಪ್ ಕಮಾಂಡರ್ ಸಾವು

    ಇಸ್ರೇಲ್ ಪಡೆಯ ಈ ಡೆಡ್ಲಿ ಅಟ್ಯಾಕ್ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ಹಮಾಸ್ ಉಗ್ರರನ್ನು ಬಗ್ಗು ಬಡಿಯುತ್ತಿರುವ ಇಸ್ರೇಲ್ ಯುದ್ಧ ಇನ್ನೂ ನಿಂತಿಲ್ಲ. ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಘೋಷಣೆ ಆಗುತ್ತಿದ್ದಂತೆ ಸಾವಿನ ಸರಮಾಲೆ ನಿಂತಿತ್ತು. ಆದರೆ ಹಮಾಸ್ ಉಗ್ರರ ಮೇಲಿದ್ದ ಇಸ್ರೇಲ್ ಜಿದ್ದು ಮಾತ್ರ ನಿಂತಿರಲಿಲ್ಲ. ಬಹಳ ದಿನಗಳ ಬಳಿಕ ಇಸ್ರೇಲ್ ಪಡೆ ಮತ್ತೆ ಹಮಾಸ್ ಕೋಟೆಗೆ ನುಗ್ಗಿದ್ದು, ಟಾಪ್ ಕಮಾಂಡರ್‌ ಕಥೆ ಮುಗಿಸಿದ್ದಾರೆ.

ಇಸ್ರೇಲ್‌ನ ಸ್ಪೆಷಲ್‌ ಪಡೆಯ ಯೋಧರು ವೈದ್ಯರು, ನರ್ಸ್‌, ರೋಗಿಗಳ ವೇಷದಲ್ಲಿ ಗಾಜಾದ ಜೆನಿನ್‌ನಲ್ಲಿರುವ ಸಿನಾ ಆಸ್ಪತ್ರೆಗೆ ನುಗ್ಗಿದ್ದಾರೆ. ಮಧ್ಯರಾತ್ರಿ ಎಲ್ಲರೂ ಮಲಗಿದ್ದ ವೇಳೆ ವೆಸ್ಟ್‌ ಬ್ಯಾಂಕ್‌ನಲ್ಲಿ ಅಡಗಿದ್ದ ಹಮಾಸ್‌ನ ಟಾಪ್ ಕಮಾಂಡರ್ ಮುಹಮ್ಮದ್ ಜಲಮ್ನೆಯ ಬೇಟೆಯಾಡಿದ್ದಾರೆ.

ಹಮಾಸ್‌ನ ಉಗ್ರನಾಯಕರು ಗಾಜಾದ ಆಸ್ಪತ್ರೆಗಳಲ್ಲೇ ಅಡಗಿ ಕುಳಿತಿದ್ದರು. ಈ ಖಚಿತ ಮಾಹಿತಿ ಇಸ್ರೇಲ್ ಪಡೆಗೆ ಸಿಕ್ಕಿದ್ದು, ಡಾಕ್ಟರ್, ನರ್ಸ್‌ಗಳ ವೇಷದಲ್ಲಿ ಆಸ್ಪತ್ರೆಗೆ ನುಗ್ಗಿದ್ದಾರೆ. ಹಮಾಸ್‌ನ ಟಾಪ್ ಕಮಾಂಡರ್ ಮುಹಮ್ಮದ್ ಜಲಮ್ನೆ ಸೇರಿದಂತೆ ಮತ್ತೊಬ್ಬ ಉಗ್ರನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇಸ್ರೇಲ್ ಸೇನೆಯ ಈ ದಾಳಿಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇಸ್ರೇಲ್ ಸೇನೆ ವೈದ್ಯಕೀಯ ಸಿಬ್ಬಂದಿಗಳ ವೇಷದಲ್ಲಿ ಆಸ್ಪತ್ರೆಯ ಒಳಗೆ ಪ್ರವೇಶ ಮಾಡಿದ್ದು, ಉಗ್ರರನ್ನು ಹುಡುಕಿ, ಹುಡುಕಿ ಕೊಂದಿದ್ದಾರೆ. ಇಸ್ರೇಲ್ ಪಡೆಯ ಈ ಡೆಡ್ಲಿ ಅಟ್ಯಾಕ್ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ದಿಂಬಿನಿಂದ ಉಸಿರುಗಟ್ಟಿಸಿ ಹೆಂಡತಿಯನ್ನೇ ಕೊಲೆ ಮಾಡಿದ ಪಾಪಿ ಗಂಡ; ಕಾರಣವೇನು?

2023 ಅಕ್ಟೋಬರ್ 7ರಂದು ಇಸ್ರೇಲ್, ಹಮಾಸ್ ಉಗ್ರರ ಯುದ್ಧ ಆರಂಭವಾಯಿತು. ಅಂದಿನಿಂದ ಇಲ್ಲಿವರೆಗೂ ಸಾವುನೋವು ನಿಂತಿಲ್ಲ. ಇಸ್ರೇಲ್ ಯುದ್ಧದ ಪರಿಣಾಮ ಗಾಜಾದಲ್ಲಿ ಪಾಲಿಸ್ತೈನ್‌ನ 10 ಸಾವಿರ ಮಕ್ಕಳು ಸೇರಿದಂತೆ 26,751 ಮಂದಿ ಸಾವನ್ನಪ್ಪಿದ್ದಾರೆ. 7 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ವೈದ್ಯರು, ನರ್ಸ್‌ಗಳ ವೇಷದಲ್ಲಿ ನುಗ್ಗಿದ ಇಸ್ರೇಲ್ ಸೇನೆ; ಹಮಾಸ್ ಉಗ್ರರ ಟಾಪ್‌ ಕಮಾಂಡರ್‌ ಫಿನೀಶ್‌!

https://newsfirstlive.com/wp-content/uploads/2024/01/ISrail-Army.jpg

Load More