/newsfirstlive-kannada/media/post_attachments/wp-content/uploads/2025/01/15-YEAR-GIRL.jpg)
ಆಕೆ ಅಪ್ಪಟ ಅಪ್ಪು ಅಭಿಮಾನಿ. ಡ್ಯಾನ್ಸರ್ ಆಗುವ ಕನಸು ಕಂಡಿದ್ಳು. ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಾ ಇದ್ದ ಬಾಲಕಿ ಮೇಲೆ ತಂದೆ ತಾಯಿ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ರು. ಆದ್ರೆ ಆಕೆಯದ್ದಲ್ಲದ್ದ ತಪ್ಪಿಗೆ ಬಾಲಕಿ ಸಾವಿನ ಮನೆ ಸೇರಿದ್ದು ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ.
ಪುನೀತ್ ರಾಜ್​ಕುಮಾರ್ ಅಭಿಮಾನಿಯಾಗಿದ್ದ ಈ ಮುದ್ದು ಮೊಗದ ಬಾಲಕಿಯ ಹೆಸರು ತೇಜಸ್ವಿನಿ. ಈಕೆ ಡ್ಯಾನ್ಸ್ ಮಾಡ್ತಿದ್ರೆ ಪೋಷಕರಿಗೆ ಎಲ್ಲಿಲ್ಲದ ಆನಂದ. ಮಗಳು ಒಳ್ಳೆ ಡ್ಯಾನ್ಸರ್ ಆಗ್ತಾಳೆ ಅಂತಾ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ರು. ಈ ನೃತ್ಯ ರಾಣಿ ಅಪ್ಪು ಡ್ಯಾನ್ಸ್ ಕ್ಲಾಸ್​ನಲ್ಲಿ ತರಬೇತಿ ಕೂಡ ಪಡಿತಿದ್ದಳು. ಆದ್ರೆ ಶಾಲೆ ಮುಗಿಸಿ ಬರ್ತಿದ್ದ ಆಕೆ ಡ್ಯಾನ್ಸ್ ಮಾತ್ರವಲ್ಲ ಜೀವನದ ಪಯಣವನ್ನೇ ಮುಗಿಸಿದ್ದಾಳೆ.
/newsfirstlive-kannada/media/post_attachments/wp-content/uploads/2025/01/15-YEAR-GIRL-1.jpg)
ಸೆಂಟ್ರಿಂಗ್​ ಮರದ ತುಂಡು ಬಿದ್ದು ಅಪ್ಪು ಅಭಿಮಾನಿ ಸಾವು
ಸಮಯ ನಿನ್ನೆ ಮಧ್ಯಾಹ್ನ 12.45. ಶಾಲೆಗೆ ಹೋಗಿದ್ದ 15 ವರ್ಷದ ಬಾಲಕಿ ತೇಜಸ್ವಿನಿ ಬೆಂಗಳೂರಿನ ವಿವಿ ಪುರಂ ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಇದ್ದ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಹೀಗೆ ನಡ್ಕೊಂಡು ಹೋಗ್ತಿದ್ದ ಆಕೆಗೆ ಯಮ ಬಲೆ ಹಾಕಿ ಕಾಯುತ್ತಿದ್ದಾನೆ ಅನ್ನುವ ಅಂದಾಜೇ ಇರಲಿಲ್ಲ. ಆಕೆಯ ಪಾಲಿಗೆ ಯಕಶ್ಚಿತ್ ಸೆಂಟ್ರಿಂಗ್ ಕಂಬ ಯಮಪಾಶವಾಗಿದೆ.
ಇದನ್ನೂ ಓದಿ:ಬೆಳಗ್ಗೆ ಮಿ.ಪರ್ಫೆಕ್ಟ್.. ರಾತ್ರಿ ಫುಲ್ ವೈಲೆಂಟ್.. 700 ಹುಡುಗಿಯರಿಗೆ ಕಾಟ ಕೊಟ್ಟ ಕಿರಾತಕ ಇವನೊಬ್ಬನೇ!
ರಸ್ತೆಯಲ್ಲಿ ನಡ್ಕೊಂಡು ಹೋಗ್ತಿದ್ದ ಬಾಲಕಿ ದಿಢೀರ್​ನೇ ಕುಸಿದು ಬಿದ್ದಳು ವಿವಿ ಪುರಂ ಮೆಟ್ರೋ ನಿಲ್ದಾಣದ ರಸ್ತೆ ಪಕ್ಕದಲ್ಲೇ ಇದ್ದ ಜಾಗದಲ್ಲಿ ಆರಂತಸ್ತಿನ ಕಟ್ಟಡದ ಕೆಲಸ ನಡಿತಿತ್ತು. ಆದ್ರೆ ಅದಕ್ಕೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಕಾಮಗಾರಿ ನಡಿತಿದ್ರೂ ಟಾರ್ಪಲ್ ಕಟ್ಟಿರಲಿಲ್ಲ. ಇದರಿಂದಾಗಿ 4 ನೇ ಅಂತಸ್ತಿನಿಂದ ಸೆಂಟ್ರಿಂಗ್​ ಮರದ ತುಂಡು ಸೀದಾ ಬಾಲಕಿ ಮೇಲೆ ಬಿದ್ದಿದೆ. ಗಾಯಗೊಂಡ ಬಾಲಕಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದಾಳೆ. ಘಟನೆ ಸಂಬಂಧ ಮಾಲೀಕನ ನಿರ್ಲಕ್ಷ್ಯ ಹಿನ್ನಲೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
/newsfirstlive-kannada/media/post_attachments/wp-content/uploads/2025/01/15-YEAR-GIRL-2.jpg)
ಇನ್ನು ಮಗಳೇ ಸರ್ವಸ್ವ ಅಂತ ಆಕೆಯ ಮೇಲೆ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದ ಹೆತ್ತವರು ತೇಜಸ್ವಿನಿಯನ್ನು ಕಳೆದುಕೊಂಡು ಕಣ್ಣೀರು ಹಾಕ್ತಿದ್ದಾರೆ. ಅಯ್ಯೋ ಮಗಳೇ ನಿಂಗೆ ಹೀಗಾಯ್ತಲ್ಲ ಕಣ್ಣೀರಾಗಿದ್ದಾರೆ.ಸದ್ಯ ತೇಜಸ್ವಿನಿ ಮೃತದೇಹ ಕಿಮ್ಸ್ ಆಸ್ಪತ್ರೆ ಶವಾಗಾರದಲ್ಲಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರವಾಗಲಿದೆ. ಅದೇನೆ ಹೇಳಿ ಯಾರದ್ದೋ ನಿರ್ಲಕ್ಷ್ಯ ಬಾಲಕಿಯ ಸಾವಿಗೆ ಕಾರಣವಾಗಿದೆ. ಹೀಗೆ ಬೇಜವಾಬ್ದಾರಿ ಪ್ರದರ್ಶಿಸುವ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us