ದಾವಣಗೆರೆಯಲ್ಲಿ ಘೋರ ದುರಂತ.. ಮಕ್ಕಳಾಗಲಿಲ್ಲ ಅನ್ನೋ ಕೊರಗಿಗೆ ದಂಪತಿ ಆತ್ಮಹತ್ಯೆಗೆ ಶರಣು

author-image
admin
Updated On
ದಾವಣಗೆರೆಯಲ್ಲಿ ಘೋರ ದುರಂತ.. ಮಕ್ಕಳಾಗಲಿಲ್ಲ ಅನ್ನೋ ಕೊರಗಿಗೆ ದಂಪತಿ ಆತ್ಮಹತ್ಯೆಗೆ ಶರಣು
Advertisment
  • ಮದುವೆಯಾಗಿ 30 ವರ್ಷ ಕಳೆದರೂ ಮಕ್ಕಳಾಗದ ಕೊರಗು
  • ಮಕ್ಕಳಗಾದ ಚಿಂತೆಯಲ್ಲಿ ಸಾವಿನ ಮನೆ ಸೇರಿದ ನತದೃಷ್ಟ ದಂಪತಿ
  • ದಂಪತಿ ಕರುಣಾಜನಕ ಸಾವಿಗೆ ಕಂಬನಿ ಮಿಡಿದ ಇಡೀ ಗ್ರಾಮಸ್ಥರು

ದಾವಣಗೆರೆ: ಮಕ್ಕಳು ಇರದ ಮನೆ ಸ್ಮಶಾನಕ್ಕೆ ಸಮ ಅನ್ನೋ ಮಾತಿದೆ. ಮಕ್ಕಳಾಗಲಿಲ್ಲ ಅನ್ನೋ ಕೊರಗಿಗೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ನಡೆದಿದೆ. ಷಣ್ಮುಖಪ್ಪ (62) ಇಂದ್ರಮ್ಮ(50) ಮೃತ ದುರ್ದೈವಿಗಳು.

ಷಣ್ಮುಖಪ್ಪ ಹಾಗೂ ಇಂದ್ರಮ್ಮ ಅವರು ಮದುವೆಯಾಗಿ 30 ವರ್ಷ ಕಳೆದಿತ್ತು. ಮಕ್ಕಳಾಗದೇ ಒತ್ತಡಕ್ಕೆ ಒಳಗಾಗಿದ್ದ ದಂಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಕ್ಕಳ ಚಿಂತೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ದಂಪತಿ ವಿಷಪೂರಿತ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಷಣ್ಮುಖಪ್ಪ ಅವರು ಪಾರ್ಶ್ವವಾಯು ಮತ್ತು ಇಂದ್ರಮ್ಮ ಸಕ್ಕರೆ ಕಾಯಿಲೆಯಿದ್ದ ಬಳಲುತ್ತಿದ್ದರು.

publive-image

ವಿಷಪೂರಿತ ಮಾತ್ರೆ ನುಂಗಿದ ದಂಪತಿ ನೋವು ತಡೆಯಲಾರದೆ ಕಿರುಚಾಡುತ್ತಿದ್ದರು. ಇವರ ನೋವಿನ ಧ್ವನಿ ಕೇಳಿ ಧಾವಿಸಿದ ಅಕ್ಕ-ಪಕ್ಕದ ಮನೆಯವರು ತಕ್ಷಣವೇ ನ್ಯಾಮತಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ: ಬೈಕ್​, ಲಾರಿ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಛಿದ್ರ ಛಿದ್ರಗೊಂಡ ಸವಾರನ ದೇಹ 

ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಇಂದ್ರಮ್ಮ ನ್ಯಾಮತಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ರೆ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪತಿ ಷಣ್ಮುಖಪ್ಪ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ:ಮೆಟ್ರೋ ಪಿಲ್ಲರ್​​ಗೆ ಡಿಕ್ಕಿ ಹೊಡೆದ ಬಸ್​ಗೆ ಅಪಘಾತ.. ಸ್ಥಳದಲ್ಲೇ ಮಹಿಳೆ ಸಾವು; ಹಲವರ ಸ್ಥಿತಿ ಗಂಭೀರ

ಷಣ್ಮುಖಪ್ಪ, ಇಂದ್ರಮ್ಮ ದಂಪತಿ ಕರುಣಾಜನಕ ಸಾವಿಗೆ ಇಡೀ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment