/newsfirstlive-kannada/media/post_attachments/wp-content/uploads/2023/12/Court-1.jpg)
ಪತ್ನಿಯನ್ನು ಕಳೆದುಕೊಂಡು, ವರದಕ್ಷಿಣೆ ಕಿರುಕುಳ ಕಳಂಕ ಹೊತ್ತು ಬರೋಬ್ಬರಿ 32 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ ವ್ಯಕ್ತಿಗೆ ಕೊನೆಗೂ ಜಯ ಸಿಕ್ಕಿದೆ. ಉತ್ತರಾಖಂಡ್​ ವ್ಯಕ್ತಿಯೊಬ್ಬ 32 ವರ್ಷಗಳ ಕಾಲ ನಡೆಸಿದ ಕರುಣಾಜನಕ ಕತೆ ಇಲ್ಲಿದೆ..
ಸ್ಟೋರಿಯ ಮೂಲ ಉತ್ತರಾಖಂಡದ ಚಮೋಲಿ ಜಿಲ್ಲೆ. 32 ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡಿದ ವ್ಯಕ್ತಿಯ ಹೆಸರು ರಾಮ್ ಕುಮಾರ್ ಗುಪ್ತಾ (Ram Kumar Gupta). ಇವರು ಮೇ 2, 1993ರಲ್ಲಿ ಕಾಂಚನಾ ಗುಪ್ತಾ (Kanchan Gupta) ಅನ್ನೋರ ಮದುವೆಯಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ವರ್ಷ ಕೂಡ ಕಳೆದಿರಲಿಲ್ಲ, ಅಕ್ಟೋಬರ್ 19, 1993ರಲ್ಲಿ ಕಾಂಚನಾ ಗುಪ್ತಾ ರಸ್ತೆ ಆಕಸ್ಮಿಕವಾಗಿ ನಡೆದ ದುರಂತದಲ್ಲಿ ಪ್ರಾಣ ಕಳೆದುಕೊಂಡರು.
ಇದನ್ನೂ ಓದಿ: Thug Life: ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಸುಪ್ರೀಂ ಗ್ರೀನ್​ ಸಿಗ್ನಲ್
ಪತ್ನಿ ಸಾವಿಗೆ ರಾಮ್ ಕುಮಾರ್ ಗುಪ್ತಾ ಹೇಳಿದ್ದೇನು..?
ಅಂದು ಪತ್ನಿ ಜೀವ ಕಳೆದುಕೊಳ್ತಿದ್ದಂತೆಯೇ ಕಾಂಚನಾಳ ಹೆತ್ತವರಿಗೆ ಮಾಹಿತಿ ನೀಡಿದ್ದಾರೆ. ಕಾಂಚನಾ ಅಡುಗೆ ಮಾಡುವ ವೇಳೆ ಭೀಕರ ಬೆಂಕಿ ಅನಾಹುತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾಳೆ. ದಯವಿಟ್ಟು ಬೇಗ ಬನ್ನಿ, ಗೌರವದಿಂದ ಆಕೆಯ ಅಂತ್ಯಕ್ರಿಯೆ ಮಾಡಬೇಕು ಎಂದಿದ್ದರು.
ಆದರೆ..
ಕಾಂಚನಾಳ ಸಾವಿಗೆ ನೀಡಿದ ಕಾರಣವನ್ನು ನಂಬದ ಆಕೆಯ ಕುಟುಂಬಸ್ಥರು ಪೊಲೀಸರಿಗೆ ರಾಮ್ ಕುಮಾರ್ ಗುಪ್ತಾ ವಿರುದ್ಧ ದೂರು ನೀಡಿದ್ದರು. ಕಾಂಚನಾಳ ಸಹೋದರ ಅಲೋಕ್ ಕುಮಾರ್ ಗುಪ್ತಾ, ವರದಕ್ಷಿಣೆ ಕೇಸ್ ದಾಖಲಿಸಿದ್ದರು. ಮದುವೆ ವೇಳೆ ರಾಮ್ ಕುಮಾರ್ ಗುಪ್ತಾ ಕುಟುಂಬ ವರದಕ್ಷಿಣೆ ಕೇಳಿತ್ತು. ನಗದು, ಸ್ಕೂಟರ್, ರೆಫ್ರಿಜರೇಟರ್ ಮತ್ತು ಚಿನ್ನಾಭರಣಗಳನ್ನು ಕೇಳಿದ್ದರು ಎಂದು ಕುಟುಂಬ ಆರೋಪಿಸಿತ್ತು.
ಇದಕ್ಕೆ ಆರೋಪಿ ಏನು ಹೇಳಿದ್ದರು..?
ಅವರ ಆರೋಪ ಖಂಡಿತ ಸುಳ್ಳು. ನನ್ನ ಅತ್ತೆ-ಮಾವಗೆ ಇನ್ನೊಬ್ಬಳು ಮಗಳಿದ್ದಾಳೆ. ಅವಳು ಕಾಂಚನಾಳ ಅಕ್ಕ. ಆಕೆಯನ್ನು ಮದುವೆ ಆಗುವಂತೆ ನನ್ನ ಒತ್ತಾಯಿಸುತ್ತಿದ್ದರು. ಅದನ್ನು ನಿರಾಕರಿಸಿದಾಗ ನನ್ನ ಮೇಲೆ ಈ ಆರೋಪ ಮಾಡಿದ್ದಾರೆ ಎಂದು ರಾಮ್ ಗುಪ್ತಾ ಅಂದು ಹೇಳಿದ್ದರು.
ಇದನ್ನೂ ಓದಿ: ಐಶ್ವರ್ಯ ಗೌಡ ವಂಚನೆ ಪ್ರಕರಣ; ಡಿಕೆ ಸುರೇಶ್​ಗೆ EDಯಿಂದ ಸಮನ್ಸ್​
ಪ್ರಕರಣವು ಕೆಳ ವಿಚಾರಣಾ ನ್ಯಾಯಾಲಯದಲ್ಲಿ ನಡೆದು, 2007ರಲ್ಲಿ ತೀರ್ಪು ಕೂಡ ಪ್ರಕಟವಾಯಿತು. ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3/4 ರ ಅಡಿಯಲ್ಲಿ ರಾಮ್ ಕುಮಾರ್ ಗುಪ್ತಾ ದೋಷಿ ಎಂದು ತೀರ್ಪು ನೀಡಿತು. ಈ ನಿರ್ಧಾರವನ್ನು ರಾಮ್ ಕುಮಾರ್​ ಗುಪ್ತಾ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್​​, ಕಳೆದ ಗುರುವಾರ ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿ ಪಂಕಜ್ ಪುರೋಹಿತ್ ನೇತೃತ್ವದ ಏಕ ಸದಸ್ಯ ಪೀಠವು, ಆರೋಪಿಯನ್ನು ಪ್ರಕರಣದಿಂದ ಖುಲಾಷೆಗೊಳಿಸಿದೆ. ಶಿಕ್ಷೆಗೆ ಗುರಿಪಡಿಸುವಲ್ಲಿ ವಿಚಾರಣಾ ನ್ಯಾಯಾಲಯವು ಗಂಭೀರ ಅಕ್ರಮ ಮತ್ತು ಅಕ್ರಮ ಎಸಗಿದೆ ಎಂದು ಹೇಳಿದೆ. ಸಾವಿಗೂ ಮೊದಲು ಮಹಿಳೆಯ ಹೇಳಿಕೆಯನ್ನು ಇಲ್ಲಿ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಘಟನೆ ನಡೆದಿರೋದು ಆಕಸ್ಮಿಕ. ಇಲ್ಲಿ ಗಂಡನ ದೂಷಿಸಬಾರದು ಎಂಬ ಹೇಳಿಕೆಯನ್ನು ಪರಿಗಣಿಸಿರುವ ಹೈಕೋರ್ಟ್, ಮಹಿಳೆ ಬರೆದಿದ್ದ ಆಪಾದಿತ ಪತ್ರಗಳ (ವದಂತಿಗಳು ಮತ್ತು ಛಾಯಾಚಿತ್ರಗಳ) ಆಧಾರದ ಮೇಲೆ ಮತ್ತು ಇತ್ಯರ್ಥಪಡಿಸಿದ ಕಾನೂನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: ಅಹ್ಮದಾಬಾದ್‌ನಲ್ಲಿ ಅದೃಷ್ಟವಶಾತ್ ತಪ್ಪಿತು ಅನಾಹುತ; ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ದೋಷ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ