ಅಬಾಷನ್ ಮಾಡಿಸಲು ಸಂಚು ಮಾಡಿದ್ದ.. ನಟ ಸನ್ನಿ ಮೋಸ ಎಳೆ ಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ; ಹೇಳಿದ್ದೇನು?

author-image
Veena Gangani
Updated On
ಅಬಾಷನ್ ಮಾಡಿಸಲು ಸಂಚು ಮಾಡಿದ್ದ.. ನಟ ಸನ್ನಿ ಮೋಸ ಎಳೆ ಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ; ಹೇಳಿದ್ದೇನು?
Advertisment
  • ನೇತ್ರಾವತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನಟ ಸನ್ನಿ
  • ಮದುವೆ ಆಗ್ತೀನಿ ಅಂತ ನಂಬಿಸಿ ಯುವತಿ ಜೊತೆ ದೈಹಿಕ ಸಂಪರ್ಕ?
  • ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಸಂತ್ರಸ್ತೆ ಮಹಿಳೆ ಹೇಳಿದ್ದೇನು?

ಕನ್ನಡ ಕಿರುತೆರೆಯ ಜನಪ್ರಿಯ ನೇತ್ರಾವತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿರುವ ನಟ ಸನ್ನಿ ಮಹಿಪಾಲ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ​ಸನ್ನಿ ಮಹಿಪಾಲ್ ಬಗ್ಗೆ ಆರೋಪ ಮಾಡಿರೋ ಸಂತ್ರಸ್ತೆ ಮಹಿಳೆ ನ್ಯೂಸ್​ ಫಸ್ಟ್​ನೊಂದಿಗೆ ಈ ಬಗ್ಗೆ ಎಳೆ, ಎಳೆಯಾಗಿ ಮಾಹಿತಿ ಬಿಚ್ಚಿಟ್ಟದ್ದಾರೆ.

publive-image

ಇದನ್ನೂ ಓದಿ:2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ ನೇತ್ರಾವತಿ ಧಾರಾವಾಹಿ ನಟ.. ಗರ್ಭಪಾತವಾಗಿ ಆಸ್ಪತ್ರೆಗೆ ದಾಖಲು

ಈ ಬಗ್ಗೆ ಮಾತಾಡಿರುವ ಸಂತ್ರಸ್ತೆ ಮಹಿಳೆ, ಮೊದಲು ನಾವಿಬ್ಬರು ಸ್ನೇಹಿತರಾಗಿದ್ದೆವು. ಆಮೇಲೆ ನನಗೆ ಆಣೆ ಮಾಡಿದ್ದ ನಿನ್ನ ಜೊತೆ ಮದುವೆ ಆಗುತ್ತೇನೆ ಅಂತ. ಫೆಬ್ರವರಿಯಲ್ಲಿ ನಾನು ಅವರಿಗೆ ಪರಿಚಯ ಆಗಿದ್ದೆ. ಇದಾದ ಬಳಿಕ ನನ್ನ ಮನೆಗೆ ಬಂದು ಮೀಟ್ ಮಾಡಿದ್ರು. ನನ್ನ ಜೊತೆ ದೈಹಿಕವಾಗಿ ಸಂಪರ್ಕ ಇಟ್ಟುಕೊಂಡಿದ್ದರು. ಎಲ್ಲಿ ನಾನು ಜೈಲಿಗೆ ಹೋಗ್ತೀನಿ ಅನ್ನೋ ಭಯದಲ್ಲಿ ನನ್ನ ಜೊತೆ ಮದುವೆ ಆಗುತ್ತೇನೆ ಅಂತ ಹೇಳಿದ್ದಾರೆ.

publive-image

ಆದರೆ ಅಷ್ಟೋತಿಗೆ ನಾನು ಗರ್ಭಿಣಿ ಆಗಿದ್ದೆ. ಇದೇ ವಿಚಾರದ ಬಗ್ಗೆಯೂ ನಾನು ಹೇಳಿದ್ದೇ. ಆಗ ಅಬಾಷನ್ ಮಾಡುವಂತೆ ಪದೇ ಪದೇ ಒತ್ತಾಯಿಸಿದ್ದ. ನನಗೆ ಮಾಹಿತಿ ಸಿಕ್ಕಿತ್ತು. ಮತ್ತೊಂದು ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿಕೊಂಡಿದ್ದಾನೆ. ಇದನ್ನೂ ಪ್ರಶ್ನೆ ಮಾಡಿದ್ದಕ್ಕೆ ಚಾಕು ಇರಿದು ಹಲ್ಲೆ ಮಾಡಿದ್ದಾನೆ. ಅದಲ್ಲದೇ ನನ್ನ ಹೊಟ್ಟೆಗೂ ಕೂಡ ಹೊಡೆದಿದ್ದಾನೆ. ಆಗ ನಾನು ಪೊಲೀಸರಿಗೆ ಫೋನ್​ ಮಾಡಿ ಈ ವಿಚಾರ ತಿಳಿಸಿದೆ. ಕೂಡಲೇ ಪೊಲೀಸರು ಭೇಟಿ ಮಾಡಿದ್ರು. ಅದಾದ ನಂತರ ನಾನು ಆಸ್ಪತ್ರೆಗೆ ದಾಖಲಾದೆ. ಆತ ನನ್ನ ಹೊಟ್ಟೆಗೆ ಹೊಡೆದಿದ್ದಕ್ಕೆ ನನಗೆ ಗರ್ಭಪಾತ ಆಯ್ತು ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment