Advertisment

ಹಣವಿಲ್ಲದೇ 290 km ರೈಲಿನಲ್ಲಿ ಪ್ರಯಾಣ ಮಾಡಿದ ಯುವಕ; ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ!

author-image
admin
Updated On
ಹಣವಿಲ್ಲದೇ 290 km ರೈಲಿನಲ್ಲಿ ಪ್ರಯಾಣ ಮಾಡಿದ ಯುವಕ; ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ!
Advertisment
  • ತನ್ನ ಪ್ರಾಣವನ್ನೇ ಪಣಕ್ಕಿಟ್ಟು 290 ಕಿ.ಮೀ ರೈಲಿನಲ್ಲಿ ಪ್ರಯಾಣ
  • ಅಬ್ಬಾ.. ಎಂತಹ ವಿಚಿತ್ರ ಮನುಷ್ಯನಪ್ಪಾ ಇವನು ಎಂದ ನೆಟ್ಟಿಗರು
  • ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ಟ್ರೈನ್ ನಿಂತಾಗ ಅಚ್ಚರಿ ಘಟನೆ

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ ಮಾಡಿದ್ರೆ TC ಬಂದು ಫೈನ್ ಹಾಕ್ತಾರೆ. ನಮ್ಮ ದೇಶದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡೋಕೆ ಎಷ್ಟೋ ಜನ ಪಡಬಾರದ ಕಷ್ಟ ಪಟ್ಟಿದ್ದಾರೆ. ಕೊನೆಗೆ ಟಿ.ಸಿ ಕೈಯಲ್ಲಿ ಸಿಕ್ಕಿ ಬಿದ್ದು ಫಜೀತಿಗೆ ಸಿಲುಕಿದ್ದಾರೆ. ಬೇಕು ಅಂತ ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣ ಮಾಡೋದು ಅಪರಾಧ.

Advertisment

ಟಿಕೆಟ್ ಇಲ್ಲದೆ ಭಾರತದ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶವಿಲ್ಲ. ಆದರೆ ದುಡ್ಡಿಲ್ಲದ ಯುವಕನೊಬ್ಬ ಪ್ರಾಣವನ್ನೇ ಪಣಕ್ಕಿಟ್ಟು 290 ಕಿ.ಮೀ ರೈಲಿನಲ್ಲಿ ಪ್ರಯಾಣ ನಡೆಸಿದ್ದಾನೆ. ಇದು ನಂಬಲು ಅಸಾಧ್ಯವಾದ್ರು ನಡೆದಿರುವ ನೈಜ ಘಟನೆ.

ಮಧ್ಯಪ್ರದೇಶದ ಜಬಲ್‌ಪುರದ ರೈಲ್ವೆ ನಿಲ್ದಾಣದಲ್ಲಿ ಇಂತಹದೊಂದು ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಎಂತಹ ವಿಚಿತ್ರ ಮನುಷ್ಯನಪ್ಪಾ ಇವನು ಎಂದು ಹುಬ್ಬೇರಿಸುತ್ತಿದ್ದಾರೆ. ದನಪುರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಂತಹದೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬಾ ಮನೆಗೆ ಟೀ ಕುಡಿಯೋಣ.. ಕಂಟ್ರ್ಯಾಕ್ಟರ್​ ಕರೆದು ಶಾಕ್ ಕೊಟ್ಟ ಯುವತಿ; ಇದು ಪಕ್ಕಾ ಫಿಲ್ಮಿ ಸ್ಟೈಲ್‌! 

Advertisment

ಈ ಯುವಕ ಇಟಾರ್ಸಿಯಿಂದ ಜಬಲ್ ಪುರದವರೆಗೂ ರೈಲು ಬೋಗಿಯಡಿ ಬಚ್ಚಿಟ್ಟುಕೊಂಡು ಪ್ರಯಾಣ ಮಾಡಿದ್ದಾರೆ. ರೈಲು ಟಿಕೆಟ್ ಖರೀದಿಗೆ ಹಣವಿಲ್ಲದೇ ಬಚ್ಚಿಟ್ಟುಕೊಂಡ ಬಂದ ಬಡಪಾಯಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ.

ಮಧ್ಯಪ್ರದೇಶದ ಜಬಲ್ ಪುರದಲ್ಲಿ ರೈಲು ನಿಲ್ಲಿಸಿದಾಗ ರೈಲ್ವೆ ಸಿಬ್ಬಂದಿ ಬೋಗಿಗಳನ್ನು ಪರೀಕ್ಷೆ ಮಾಡಿದ್ದಾರೆ. ಆಗ ನಿಧಾನಕ್ಕೆ ಈತ ರೈಲು ಬೋಗಿಯ ಕೆಳಗಿನಿಂದ ಹೊರ ಬಂದಿದ್ದಾನೆ. ತಾನೇಕೆ ಹೀಗೆ ಮಾಡಿದೆ ಅನ್ನೋ ಕಾರಣ ಹೇಳಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment