ಅಬ್ಬಾ.. ಹಿಮಪಾತಕ್ಕೂ ಜಗ್ಗದ ಲಲಿತ್ ಮಹಾರಾಜ ಸನ್ಯಾಸಿ; ಮೈ ಜುಮ್ಮೆನ್ನಿಸೋ ವಿಡಿಯೋ ವೈರಲ್‌!

author-image
admin
Updated On
ಅಬ್ಬಾ.. ಹಿಮಪಾತಕ್ಕೂ ಜಗ್ಗದ ಲಲಿತ್ ಮಹಾರಾಜ ಸನ್ಯಾಸಿ; ಮೈ ಜುಮ್ಮೆನ್ನಿಸೋ ವಿಡಿಯೋ ವೈರಲ್‌!
Advertisment
  • ಉತ್ತರಾಖಂಡ ರಾಜ್ಯದ ಕೇದಾರ ಕಣಿವೆಯಲ್ಲೂ ಭಾರಿ ಹಿಮಪಾತ
  • ಕೇದಾರ ಕಣಿವೆಯ ಭೈರವ ಮಂದಿರದಲ್ಲಿರುವ ಲಲಿತ್ ಮಹಾರಾಜ್
  • ಹಿಮಪಾತದಲ್ಲೂ ಪೂಜೆ, ಧ್ಯಾನ, ಹರ ಹರ ಮಹಾದೇವ ಘೋಷಣೆ

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾರೀ ಹಿಮಪಾತ ಬೀಳುತ್ತಿದೆ. ಹಿಮಪಾತದಿಂದ ಹಲವು ರಸ್ತೆ ಮಾರ್ಗ ಬಂದ್ ಆಗಿದ್ದು, ಸ್ಥಳೀಯರು ಪ್ರವಾಸಿಗರು ಪರದಾಡುತ್ತಿದ್ದಾರೆ.
ಉತ್ತರಾಖಂಡ ರಾಜ್ಯದ ಕೇದಾರ ಕಣಿವೆಯಲ್ಲೂ ಭಾರಿ ಹಿಮಪಾತವಾಗಿದೆ. ಈ ಹಿಮಪಾತದ ಮಧ್ಯೆಯೂ ಕೇದಾರ ಕಣಿವೆಯ ಭೈರವ ಮಂದಿರದಲ್ಲಿ ಲಲಿತ್ ಮಹಾರಾಜ್ ಅನ್ನೋ ಸನ್ಯಾಸಿ ವಾಸಿಸೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪ್ರತಿವರ್ಷ ಹಿಮಪಾತದ ಸಂದರ್ಭದಲ್ಲಿ ಕೇದಾರನಾಥ ದೇವಸ್ಥಾನಕ್ಕೆ ಸಂಪೂರ್ಣ ಹಿಮದಲ್ಲಿ ಮುಚ್ಚಿ ಹೋಗುತ್ತೆ. ಈ ಸಂದರ್ಭದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಏರಲಾಗುತ್ತೆ. ಚಳಿಗಾಲದಲ್ಲಂತೂ ಕೇದಾರ ಕಣಿವೆಯಲ್ಲಿ ಸಾಮಾನ್ಯರು ವಾಸ ಮಾಡಲು ಆಗಲ್ಲ.

publive-image

ಇದನ್ನೂ ಓದಿ: ‘ಐಸ್​ ಬೆಡ್’​ ಫೋಟೋಗೆ ಒಲಿದ ಪ್ರತಿಷ್ಠಿತ ವೈಲ್ಡ್​​ಲೈಫ್ ಫೋಟೋಗ್ರಾಫರ್ ಪ್ರಶಸ್ತಿ.. ಕ್ಲಿಕ್ ಮಾಡಿದ್ದು ಯಾರು?

ಭಾರೀ ಹಿಮಪಾತದ ಸಂದರ್ಭದಲ್ಲೂ ಲಲಿತ್ ಮಹಾರಾಜ್ ಎಂಬ ಸನ್ಯಾಸಿ ಹಿಮದ ಮಧ್ಯೆ ನಡೆದುಕೊಂಡು ಬಂದು ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ. ಹರ ಹರ ಮಹಾದೇವ ಘೋಷಣೆಯೊಂದಿಗೆ ಲಲಿತ್ ಮಹಾರಾಜ್ ಹೆಜ್ಜೆ ಹಾಕಿದ್ದಾರೆ. ಲಲಿತ್ ಮಹಾರಾಜ್ ಅವರು ಹಿಮಪಾತದಲ್ಲಿ ನೆಲೆಸಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


">February 8, 2024

ಹಿಮಪಾತದ ಸಂದರ್ಭದಲ್ಲಿ ಉತ್ತರಾಖಂಡದಲ್ಲಿ ಜೀವಿಸೋದು ಬಹಳ ಕಷ್ಟ. ಆದರೆ ಲಲಿತ ಮಹಾರಾಜ್‌ ಅವರು ಭೈರವ ಮಂದಿರದಲ್ಲಿ ಪೂಜೆ, ಧ್ಯಾನದ ಮೂಲಕ ಕಳೆದ 1 ವರ್ಷದಿಂದ ಕಾಲ ಕಳೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment