ಶೋಭಿತಾಗೆ ಮಗನಿಗಿಂತ ಹೆಚ್ಚು ಕೇರ್ ಮಾಡಿದ ನಾಗಾರ್ಜುನ.. ವಿಡಿಯೋ ನೋಡಿದ ನೆಟ್ಟಿಗರು ಶಾಕ್‌!

author-image
admin
Updated On
ಶೋಭಿತಾಗೆ ಮಗನಿಗಿಂತ ಹೆಚ್ಚು ಕೇರ್ ಮಾಡಿದ ನಾಗಾರ್ಜುನ.. ವಿಡಿಯೋ ನೋಡಿದ ನೆಟ್ಟಿಗರು ಶಾಕ್‌!
Advertisment
  • ಮದುವೆ ಬಳಿಕ ನಾಗಚೈತನ್ಯ, ಶೋಭಿತಾ ಮೊದಲ ಪ್ರವಾಸ
  • ಶಾಸ್ತ್ರೋಕ್ತವಾಗಿ ನೆರವೇರಿದ ನಾಗಚೈತನ್ಯ ವಿವಾಹ ಮಹೋತ್ಸವ
  • ನಾಗಾರ್ಜುನ ಮಾವನ ರೀತಿ ನಡೆದುಕೊಳ್ಳುತ್ತಿಲ್ಲ ಎಂದ ನೆಟ್ಟಿಗರು

4 ದಿನಗಳ ಹಿಂದಷ್ಟೇ ಸ್ಟಾರ್ ಜೋಡಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ಅದ್ಧೂರಿಯಾಗಿ ನಡೆದಿದೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅಕ್ಕಿನೇನಿ ನಾಗಾರ್ಜುನ ಕುಟುಂಬದ ಸದಸ್ಯರು, ಸ್ನೇಹಿತರು ನಾಗಚೈತನ್ಯ 2ನೇ ಮದುವೆಗೆ ಸಾಕ್ಷಿಯಾಗಿದ್ದಾರೆ. ಶಾಸ್ತ್ರೋಕ್ತವಾಗಿ ನೆರವೇರಿದ ವಿವಾಹ ಮಹೋತ್ಸವದಲ್ಲಿ ಹಲವು ನಟ, ನಟಿಯರು ಭಾಗಿಯಾಗಿದ್ದರು.

ಮದುವೆ ಬಳಿಕ ನಾಗಚೈತನ್ಯ, ಶೋಭಿತಾ ದೇವಸ್ಥಾನಗಳಿಗೆ ಭೇಟಿ ಕೊಟ್ಟು ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸೆರೆಯಾಗಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಾಗಾರ್ಜನ ಅವರಿಗೆ ಸಖತ್‌ ಟಾಂಗ್ ಕೊಟ್ಟಿದ್ದಾರೆ.

publive-image

ನಾಗಚೈತನ್ಯ, ಶೋಭಿತಾ ಅವರು ಮದುವೆಯಾದ ಮೇಲೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಶೋಭಿತಾ ಅವರ ಗಂಡನ ಜೊತೆ ನಾಗಾರ್ಜನ ಅವರು ಕೂಡ ಪ್ರವಾಸ ಕೈಗೊಂಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಶೋಭಿತಾ ಅವರನ್ನ ನಾಗಚೈತನ್ಯ ಅವರಿಗಿಂತ ಹೆಚ್ಚು ಮಾವ ನಾಗರ್ಜುನ ಅವರೇ ಕೇರ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಯಾರು, ಯಾರನ್ನ ಮದುವೆಯಾಗಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಬಹುಕಾಲದ ಪ್ರೀತಿ, ಪ್ರೇಮ, ಡೇಟಿಂಗ್‌ನ ಬಳಿಕ ಕೊನೆಗೂ ನಾಗಚೈತನ್ಯ, ಶೋಭಿತಾ ಧೂಳಿಪಾಲ ಜೋಡಿ ಸಪ್ತಪದಿ ತುಳಿದಿದೆ. ಹೊಸ ಜೀವನಕ್ಕೆ ಕಾಲಿಟ್ಟಿರುವ ನವಜೋಡಿಗೆ ಟಾಲಿವುಡ್‌ನ ಹಲವು ತಾರೆಯರು ಶುಭಾಶಯ ಕೋರಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಾಗಚೈತನ್ಯ, ಶೋಭಿತಾ ಹೊಸ ಜೀವನವನ್ನ ಆರಂಭಿಸಿದ್ದಾರೆ.

ಇದನ್ನೂ ಓದಿ: ಮದುವೆಗೆ ದುಬಾರಿ ಸೀರೆ ಧರಿಸಿದ್ದ ನಾಗ ಚೈತನ್ಯ ಪತ್ನಿ ಶೋಭಿತಾ; ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ! 


">December 6, 2024

ನೆಟ್ಟಿಗರ ಆಕ್ಷೇಪಣೆ ಯಾಕೆ?
ವೈರಲ್‌ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಅನುಮಾನಗಳನ್ನ ವ್ಯಕ್ತಪಡಿಸಿದ್ದಾರೆ. ಶೋಭಿತಾ ಹಣೆಗೆ ಕುಂಕುಮ ಇಟ್ಟುಕೊಳ್ಳುವಾಗ ನಾಗಾರ್ಜುನ ಅವರು ಕೂದಲು ಸರಿಸಲು ಸಹಾಯ ಮಾಡಿದ್ದಾರೆ. ಇದನ್ನು ನೋಡಿದ ಜನರು ನಾಗಾರ್ಜುನ ಅವರು ಮಾವನ ರೀತಿ ನಡೆದುಕೊಳ್ಳುತ್ತಿಲ್ಲ. ಮದುವೆಯಾದ ಮೇಲೆ ನಾಗಚೈತನ್ಯ, ಶೋಭಿತಾ ಇಬ್ಬರೇ ಹೋಗಬೇಕಿತ್ತು ಅಲ್ವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment