/newsfirstlive-kannada/media/post_attachments/wp-content/uploads/2024/08/Radhika-kumaraswamy-Varamahalakshmi-5.jpg)
ಮಹಾಲಕ್ಷ್ಮಿ ಮನೆಗೆ ಬಾರಮ್ಮ ಅಂತ ವರಲಕ್ಷ್ಮಿ ವ್ರತವನ್ನ ನಾಡಿನೆಲ್ಲೆಡೆ ಆಚರಿಸಲಾಗಿದೆ. ಸಾಮಾನ್ಯ ಜನರ ಮನೆಯಲ್ಲಿ ಒಂದು ಸಂಭ್ರಮವಾದ್ರೆ ನಮ್ಮ ಸ್ಯಾಂಡಲ್‌ವುಡ್ ತಾರೆಯರು ಅದ್ಧೂರಿಯಾಗಿ ಈ ಬಾರಿ ಹಬ್ಬವನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.
ಅದರಲ್ಲೂ ರಾಧಿಕಾ ಕುಮಾರಸ್ವಾಮಿ ಅವರ ಅಪರೂಪಕ್ಕೆ ಅಭಿಮಾನಿಗಳ ಮುಂದೆ ಬಂದಿದ್ದು, ತಮ್ಮ ಮನೆಯಲ್ಲಿ ಮಾಡಿದ ವರಮಹಾಲಕ್ಷ್ಮಿ ವ್ರತದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರ ಮನೆಯಲ್ಲಿ ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸಲಾಗಿದೆ.
ಇದನ್ನೂ ಓದಿ: PHOTOS: ನಮ್ರತಾ ಗೌಡ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ ಜೋರು; ಯಾರೆಲ್ಲಾ ಬಂದಿದ್ರು?
ಸ್ಪೆಷಲ್ ವಿಡಿಯೋ ಹಂಚಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರು ಶ್ರೀ ವರಮಹಾಲಕ್ಷ್ಮಿ ದೇವಿಯು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ನೀಡಿ ಕಾಪಾಡಲಿ. ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು ಕೋರಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರ ವಿಡಿಯೋ ನೋಡಿದ ಫ್ಯಾನ್ಸ್ ಅಂತು ಫುಲ್ ಶಾಕ್ ಆಗಿದ್ದಾರೆ. ಗೋಲ್ಡನ್ ಬಣ್ಣದ ಸೀರೆಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕಂಗೊಳಿಸುತ್ತಿದ್ದರೆ ಅಭಿಮಾನಿಗಳು ನಿಮಗೆ ವಯಸ್ಸು ಆಗೋದಿಲ್ವಾ ಸೌಂದರ್ಯಕ್ಕೆ ಮತ್ತೊಂದು ಹೆಸರೇ ನೀವು ಎಂದು ಕೊಂಡಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಆಡಂಬರದ ಪೂಜೆ ನೋಡಿ ಇನ್ನೂ ಕೆಲವರು ಇನ್ನು ಎಷ್ಟು ಬರಬೇಕು ತಾಯಿ ನಿಮ್ ಮನೆಗೆ ಲಕ್ಷ್ಮಿ ನಮ್ಮನೆಗೂ ಸ್ವಲ್ಪ ಕಳಿಸಿ. ಹ್ಯಾಪಿ ವರಮಹಾಲಕ್ಸ್ಮಿ ಹಬ್ಬದ ಶುಭಾಶಯಗಳು. ಈ ವರ್ಷ ಗ್ರ್ಯಾಂಡ್ ಆಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದವರಲ್ಲಿ ನಿಮಗೆ ಮೊದಲ ಬಹುಮಾನ ಕೊಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ