Advertisment

ದಿಟ್ಟ ಹೋರಾಟಕ್ಕೆ ಸಂದ ಜಯ.. 82 ಬಾರಿ ಗೆದ್ದ ಕುಸ್ತಿಪಟುಗೆ ಮಣ್ಣು ಮುಕ್ಕಿಸಿದ ವಿನೇಶ್ ಪೋಗಟ್!

author-image
admin
Updated On
ವಿನೇಶ್ ಫೋಗಾಟ್​ಗೆ ಸಿಲ್ವರ್ ಮೆಡಲ್ ಬರುತ್ತಾ..? ಭಾರತದ ಸ್ಪರ್ಧಿ ಪರ ಧ್ವನಿ ಎತ್ತಿದ 4 ರಾಷ್ಟ್ರಗಳು!
Advertisment
  • ಭರ್ಜರಿ ಗೆಲುವಿನಿಂದ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಭಾರತದ ವೀರನಾರಿ
  • ವರ್ಲ್ಡ್‌ ಚಾಂಪಿಯನ್ ಯುಯಿ ಸುಸಾಕಿ ಸೋಲಿಸಿದ ವಿನೇಶ್ ಪೋಗಟ್
  • ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ವಿರುದ್ಧ ಹೋರಾಟ

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರು ವೀರಾವೇಶದ ಆಟ ಪ್ರದರ್ಶಿಸಿದ್ದಾರೆ. 50 ಕೆಜಿ ಕುಸ್ತಿ ವಿಭಾಗದಲ್ಲಿ ಇದುವರೆಗೂ ಸೋತೇ ಇರದ ಜಪಾನ್ ದೇಶದ ವರ್ಲ್ಡ್‌ ಚಾಂಪಿಯನ್ ಯುಯಿ ಸುಸಾಕಿ ಅವರನ್ನು ಸೋಲಿಸೋ ಮೂಲಕ ಸೆಮಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.

Advertisment

publive-image

ಯುಯಿ ಸುಸಾಕಿ ಫುಲ್ ಸುಸ್ತು!
50 ಕೆಜಿ ಕುಸ್ತಿ ವಿಭಾಗದಲ್ಲಿ ವಿನೇಶ್ ಪೋಗಟ್ ಅವರು ಜಪಾನ್ ದೇಶದ ಯುಯಿ ಸುಸಾಕಿ ಅವರ ವಿರುದ್ಧ ಸೆಣಸಾಡಿದರು. 3-2 ರಿಂದ ಜಪಾನ್ ದೇಶದ ಕುಸ್ತಿಪಟುವನ್ನು ಸೋಲಿಸಿ ಸಂಭ್ರಮಾಚರಣೆ ಮಾಡಿದರು. ಜಪಾನ್‌ ದೇಶದ ಯುಯಿ ಸುಸಾಕಿ ಅವರು ಇದುವರೆಗೂ ಯಾವುದೇ ಒಂದು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೋಲೇ ಕಂಡಿರಲಿಲ್ಲ. ಇದೀಗ ವಿನೇಶ್‌ ಪೋಗಟ್ ವಿರುದ್ಧ ಸೋತು ಪ್ಯಾರಿಸ್ ಒಲಿಂಪಿಕ್ಸ್‌ನಿಂದಲೇ ಹೊರ ನಡೆದಿದ್ದಾರೆ.

ಇದನ್ನೂ ಓದಿ: NeerajChopra: ಭಲೇ.. ಭಲೇ ಚಿನ್ನದ ಹುಡುಗ; 89 ಮೀ. ಜಾವಲಿನ್ ಎಸೆದ ನೀರಜ್ ಚೋಪ್ರಾ! 

ಯುಯಿ ಸುಸಾಕಿ ಅವರು ಇದುವರೆಗೂ 82 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದು ವರ್ಲ್ಡ್ ಚಾಂಪಿಯನ್ ಆಗಿದ್ದಾರೆ. 2020ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ ವಿನೇಶ್ ಪೋಗಟ್ ಅವರು ಸುಸಾಕಿ ಅವರ ಪ್ಯಾರಿಸ್ ಕನಸನ್ನು ನುಚ್ಚು ನೂರು ಮಾಡಿದ್ದಾರೆ.

Advertisment

publive-image

ಸೆಮಿಫೈನಲ್ ಪ್ರವೇಶಿಸಿದ ಪೋಗಟ್‌!
ಯುಯಿ ಸುಸಾಕಿ ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ವಿನೇಶ್ ಪೋಗಟ್ ಅವರು ಮತ್ತೆ ಗೆಲುವು ಸಾಧಿಸಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಉಕ್ರೇನ್ ಸ್ಪರ್ಧಿಯನ್ನು ಸೋಲಿಸಿದ ವಿನೇಶಾ ಪೋಗಟ್‌ ಅವರು ಇದೀಗ ಸೆಮಿ ಫೈನಲ್ ಕೂಡ ಪ್ರವೇಶಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ರಾತ್ರಿ 10.25ಕ್ಕೆ ಸೆಮಿ ಫೈನಲ್ ಪಂದ್ಯ ನಡೆಯಲಿದ್ದು, ವಿನೇಶ್ ಪೋಗಟ್ ಅವರು ಪದಕ ಗೆಲ್ಲುವತ್ತ ಮುನ್ನುಗ್ಗುತ್ತಿದ್ದಾರೆ.

publive-image


">August 6, 2024

ವೀರನಾರಿ ಹೋರಾಟಕ್ಕೆ ಸಿಕ್ಕ ಗೆಲುವು!
ವಿನೇಶ್ ಪೋಗಟ್‌ ಅವರು ಕೆಲವು ದಿನಗಳ ಹಿಂದೆ ಭಾರತದಲ್ಲಿ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ವಿರುದ್ಧ ಉಗ್ರ ಹೋರಾಟ ನಡೆಸಿದ್ದರು. ಭಾರತದ ಕುಸ್ತಿ ಫೆಡರೇಷನ್‌ನಲ್ಲಿ ಬದಲಾವಣೆಗಾಗಿ ಹೋರಾಟ ನಡೆಸಿದ್ದ ವಿನೇಶ್ ಪೋಗಟ್ ಅವರು ಇದೀಗ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ತನ್ನ ಪರಾಕ್ರಮ ಪ್ರದರ್ಶಿಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment