/newsfirstlive-kannada/media/post_attachments/wp-content/uploads/2025/07/KARNATAKA-RAIN-AND-RIVER-WATER.jpg)
ಹಲವು ದಿನಗಳಿಂದ ರಾಜ್ಯದಲ್ಲೆಡೆ ಸುರಿಯುತ್ತಿದ್ದ ಮಳೆ, ನಾನಾ ಅವಾಂತರ ಸೃಷ್ಟಿ ಮಾಡಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಈಗಾಗಲೇ ಮುಂಗಾರು ಹಾವಳಿಗೆ ಜನ ಕಂಗೆಟ್ಟಿದ್ದಾರೆ.
KRS, ಕಬಿನಿಯಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ರಿಲೀಸ್
ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಹಳ್ಳ-ಕೊಳ್ಳಗಳು ನದಿಯಂತೆ ಭೋರ್ಗರೆಯತ್ತಿವೆ. ನದಿಗಳ ಓಟ ಮಿತಿ ಮೀರಿದೆ. ಕಾವೇರಿ ನದಿಯ ಆರ್ಭಟವೂ ಹೆಚ್ಚಾಗಿದ್ದು, ಕೆ.ಆರ್.ಎಸ್ ಹಾಗೂ ಕಬಿನಿ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಟಿ.ನರಸೀಪುರ ಹಾಗೂ ತಲಕಾಡಿಗೆ ಸಂಪರ್ಕ ಸಾಧಿಸುವ ಹೆಮ್ಮಿಗೆ ಸೇತುವೆ ಮುಳುಗಡೆ ಹಂತ ತಲುಪಿದೆ. ನದಿಗೆ ಜನರು ಇಳಿಯದಂತೆ ಸೇತುವೆಯ ಎರಡು ಬದಿಯಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಯೂರಿಯಾ ಗೊಬ್ಬರ ಅಭಾವ; ಪ್ರಹ್ಲಾದ್ ಜೋಶಿ ನೇತೃತ್ವದ ರಾಜ್ಯ ಬಿಜೆಪಿ ನಿಯೋಗದಿಂದ JP ನಡ್ಡಾಗೆ ಮನವಿ
ತುಂಗಭದ್ರಾದಿಂದ 1.40 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ!
ಕೊಪ್ಪಳದ ತುಂಗಭದ್ರಾ ಜಲಾಶಯ ಭರ್ತಿ ಹಿನ್ನೆಲೆ 30 ಗೇಟ್ ಮೂಲಕ 1 ಲಕ್ಷ 40 ಸಾವಿರ ಕ್ಯೂಸೆಕ್ಸ್ ನೀರನ್ನ ಹರಿ ಬಿಡಲಾಗ್ತಿದೆ. ಜಲಾಶಯದ ಗೇಟ್ ಮುಂಭಾಗ ಇರುವ ಸೆಲ್ಫಿ ಬ್ರಿಡ್ಜ್.. ಕೊಪ್ಪಳ ಹಾಗೂ ಮುನಿರಾಬಾದ್ ಸಂಪರ್ಕ ಕಲ್ಪಿಸುವ ಕೇಳ ಸೇತುವೆ ಮುಳುಗಡೆಯಾಗಿದೆ. ಇನ್ನಷ್ಟು ಒಳ ಹರಿವು ಹೆಚ್ಚಳ ಸಾಧ್ಯತೆ ಇದ್ದು, ಸೇತುವೆ ಮೇಲೆ ಜನ ಓಡಾಡದಂತೆ ನಿಷೇಧ ಹೇರಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ನಮ್ಮ ಸ್ವಂತದವರೇ ನಮ್ಮನ್ನ ಮನೆಯಿಂದ ಆಚೆ ಹಾಕಿದರು- ಟೀಮ್ ಇಂಡಿಯಾ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್
ವಿದ್ಯುತ್ ತಂತಿ ಕಟ್.. ದುರಸ್ತಿಗೆ ಲೈನ್ ಮ್ಯಾನ್ಗಳ ಸಾಹಸ!
ಮಳೆಗೆ ಕೆರೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನ ದುರಸ್ತಿ ಮಾಡಲು ಲೈನ್ ಮ್ಯಾನ್ಗಳು ತೆಪ್ಪ ಬಳಸಿ ಸಾಹಸ ಮಾಡಿರೋ ಘಟನೆ ಶಿವಮೊಗ್ಗ ಜಿಲ್ಲೆಯ ಆಚಾಪುರದಲ್ಲಿ ನಡೆದಿದೆ. ಪ್ರಾಣದ ಹಂಗನ್ನ ತೊರೆದು ಸಿಬ್ಬಂದಿ ವಿದ್ಯುತ್ ತಂತಿ ಸರಿಪಡಿಸುವ ದೃಶ್ಯ ಸ್ಥಳೀಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ.
ಐತಿಹಾಸಿಕ ಹಂಪಿಯ ನಾನಾ ಸ್ಮಾರಕಗಳು ಮುಳುಗಡೆ
ತುಂಗಭದ್ರಾ ಜಲಾಶಯದಿಂದ ಒಂದೂವರೇ ಲಕ್ಷ ಕ್ಯೂಸೆಕ್ ನದಿಗೆ ನೀರು ಹರಿಬಿಟ್ಟ ಹಿನ್ನೆಲೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರೋ ವಿಶ್ವವಿಖ್ಯಾತ ಹಂಪಿಯಲ್ಲಿನ ವಿಧಿ-ವಿಧಾನ ಮಂಟಪಗಳು, ಸ್ನಾನಘಟ್ಟಗಳು ಮುಳುಗಡೆಯಾಗಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಕೃಷ್ಣಾ, ದೂದಗಂಗಾ ನದಿಗೆ ನೀರು!
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರೆದ ಪರಿಣಾಮ ಕೃಷ್ಣಾ ಅಚ್ಚು ಕಟ್ಟು ಪ್ರದೇಶದ ಜಲಾಶಯಗಳು ಭರ್ತಿ ಹಂತ ತಲುಪಿದೆ. ಕೃಷ್ಣಾ, ದೂದಗಂಗಾ ನದಿಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಸದ್ಯ ಕೃಷ್ಣಾ ನದಿಯ ಒಳ ಹರಿವು 90 ಸಾವಿರ ಕ್ಯೂಸೆಕ್ಸ್ ಇದೆ.
ಇದನ್ನೂ ಓದಿ: ನಮ್ಮ ಸ್ವಂತದವರೇ ನಮ್ಮನ್ನ ಮನೆಯಿಂದ ಆಚೆ ಹಾಕಿದರು- ಟೀಮ್ ಇಂಡಿಯಾ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್
16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 8 ಸೇತುವೆಗಳು ಜಲಾವೃತ!
ದೂದಗಂಗಾ ನದಿ ನೀರಿನಲ್ಲೂ ಗಣನೀಯ ಏರಿಕೆ ಕಂಡಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು-ಕಲ್ಲೋಳ, ಭಾವನಸೌಂದತ್ತಿ-ಮಾಂಜರಿ, ದೂದಗಂಗಾ ನದಿಯ ಮಲ್ಲಿಕವಾಡ-ದತ್ತವಾಡ, ಕಾರದಗಾ-ಭೋಜ, ಭೋಜವಾಡಿ-ಕಾರದಗಾ, ಎಕ್ಸಂಬಾ-ದತ್ತವಾಡ, ಭಾರವಾಡ-ಕುನ್ನೂರು, ಬೋಜವಾಡಿ-ಕುನ್ನೂರು ಹೀಗೆ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 8 ಸೇತುವೆಗಳು ನಾಲ್ಕನೇ ಬಾರಿ ಜಲಾವೃತಗೊಂಡಿದೆ. ನದಿ ತೀರಕ್ಕೆ ತೆರಳದಂತೆ ಬೆಳಗಾವಿ ಜಿಲ್ಲಾಡಳಿತ ಸೂಚನೆ ನೀಡಿದೆ. ಪರ್ಯಾಯ ಮಾರ್ಗಗಳ ಮೂಲಕ ಜನರ ಸಂಚಾರ ಮಾಡ್ತಿದ್ದಾರೆ.
ಬಿರುಗಾಳಿ ಅಬ್ಬರಕ್ಕೆ ಮಡಿಕೇರಿ ಕೋಟೆಯ ಹೆಬ್ಬಾಗಿಲು ಕ್ಲೋಸ್!
17ನೇ ಶತಮಾನದ ಉತ್ತರಾರ್ಧದಲ್ಲಿ ಅರಸ ಮುದ್ದುರಾಜರು ನಿರ್ಮಿಸಿದ ಐತಿಹಾಸಿಕ ಮಡಿಕೇರಿ ಕೋಟೆಯ ಹೆಬ್ಬಾಗಿಲು ಕಳೆದ ಎರಡು ದಿನಗಳಿಂದ ಬೀಸಿದ ಬಿರುಗಾಳಿಗೆ ಮುಚ್ಚಿಕೊಂಡವು. ನಂತರ ಅಧಿಕಾರಿಗಳು ಜೆಸಿಬಿ ಯಂತ್ರದ ಸಹಾಯದಿಂದ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಒಟ್ಟಾರೆ, ಮಳೆಯ ಅಬ್ಬರ ಅವಾಂತರಗಳನ್ನೇ ಸೃಷ್ಟಿಸಿದೆ. ಜನರನ್ನ ಹೈರಾಣಾಗಿಸಿದೆ.
ಇದನ್ನೂ ಓದಿ: ದರ್ಶನ್ ಫ್ಯಾನ್ಸ್ ವಿರುದ್ಧ FIR; ದಾಖಲಾಗಿರೋ ಸೆಕ್ಷನ್ ನೋಡಿದ್ರೆ ತಪ್ಪಿಸಿಕೊಳ್ಳೋದು ಸುಲಭ ಇಲ್ಲ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ