/newsfirstlive-kannada/media/post_attachments/wp-content/uploads/2025/06/joga-1.jpg)
ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಮರುಜೀವ ಬಂದಿದ್ದು, ಪ್ರವಾಸಿಗರನ್ನು ಮತ್ತೆ ಕೈಬಿಸಿ ಕರೆಯುತ್ತಿದೆ.. ಪ್ರಕೃತಿಯ ತಾಣದ ಸೊಬಗನ್ನು ಸವಿಯಲು ಸಹಸ್ರಾರು ಜನ ಬರುತ್ತಿದ್ದು, ಜೋಗದ ಗತವೈಭವಕ್ಕೆ ಮತ್ತೆ ಮೆರಗು ಬಂದಿದೆ..
ಮಲೆನಾಡು ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಕಳೆದ ಎರಡ್ಮೂರು ವಾರದಿಂದ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ಜೋಗ ಜಲಪಾತ ಧುಮ್ಮುಕ್ಕಿ ಹರಿಯುತ್ತಿದೆ. ಜೋಗ ಜಲಪಾತದಲ್ಲಿ ನಯನ ಮನೋಹರ ದೃಶ್ಯ ಕಾವ್ಯ ನಿರ್ಮಾಣವಾಗಿದೆ. ನಾಲ್ಕು ಕವಲುಗಳಲ್ಲೂ ಜಲಧಾರೆ ಉಕ್ಕಿ ಹರಿಯುತ್ತಿದೆ..
ಇದನ್ನೂ ಓದಿ: ಮಳೆಯ ಎಚ್ಚರಿಕೆ.. ರಾಜ್ಯದ 6 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಎಂದ ಹವಾಮಾನ ಇಲಾಖೆ..
ಮೈದುಂಬಿ ಧುಮ್ಮಿಕ್ಕುತ್ತಿರುವ ರಾಜಾ, ರಾಣಿ, ರೋರರ್ ಮತ ರಾಕೆಟ್ ವೀಕ್ಷಿಸಲು ಪ್ರವಾಸಿಗರು ಬರುತ್ತಿದ್ದಾರೆ. ಹೀಗಾಗಿ ಪ್ರವಾಸಿ ತಾಣದಲ್ಲಿ ಹಬ್ಬದ ಕಳೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಜೋಗ ಜಲಪಾತ ಇದೆ.
ಇದನ್ನೂ ಓದಿ: Daund-Pune ರೈಲಿನಲ್ಲಿ ಹಠಾತ್ ಬೆಂಕಿ, ಭಾರೀ ಅನಾಹುತದ ಆತಂಕ.. ವಿಡಿಯೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ