ಕಬಿನಿ ಡ್ಯಾಂ‌ ಭರ್ತಿಗೆ 3 ಅಡಿ ಭಾಕಿ.. ಕೆಳ‌ಸೇತುವೆ ಮುಳುಗಡೆ, 20 ಗ್ರಾಮಗಳ ಸಂಪರ್ಕ ಕಡಿತ..! Photos

author-image
Ganesh
Updated On
ಕಬಿನಿ ಡ್ಯಾಂ‌ ಭರ್ತಿಗೆ 3 ಅಡಿ ಭಾಕಿ.. ಕೆಳ‌ಸೇತುವೆ ಮುಳುಗಡೆ, 20 ಗ್ರಾಮಗಳ ಸಂಪರ್ಕ ಕಡಿತ..! Photos
Advertisment
  • 4 ಕ್ರಸ್ಟ್ ಗೇಟ್ ಮೂಲಕ 25,000 ಕ್ಯೂಸೆಕ್ಸ್ ನೀರು ಬಿಡುಗಡೆ
  • ಜಲಾಶಯಕ್ಕೆ ಒಳಹರಿವಿನ ಪ್ರಮಾಣ 21,500 ಕ್ಯೂಸೆಕ್ಸ್
  • ಜಲಾಶಯದ‌ ಇಂದಿನ ನೀರಿನ ಮಟ್ಟ 81 ಅಡಿ

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದ ಕಬಿನಿ ಜಲಾಶಯದ ಕೆಳ‌ಸೇತುವೆ ಸಂಪೂರ್ಣ ಮುಳಗಡೆ ಆಗಿದ್ದು, ಪರಿಣಾಮ 20 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: ಪೈಲಟ್‌ ಆಗುವುದು ಹೇಗೆ.. ವಿದ್ಯಾರ್ಥಿಗಳು ಇದಕ್ಕಾಗಿ ಯಾವ ಕೋರ್ಸ್​ ಮಾಡಬೇಕು..?

publive-image

ಕೇರಳದ ವೈನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ‌ ಪ್ರವಾಹದ ಭೀತಿ ಎದುರಾಗಿದೆ. ಕಪಿಲಾ ನದಿ ಪ್ರವಾಹಕ್ಕೆ ಗದ್ದೆಗಳು ಮುಳುಗಡೆ ಆಗಿವೆ. ಬೊಕ್ಕಹಳ್ಳಿ, ಮೂಡಹಳ್ಳಿ, ತಾಯೂರು, ಹೊಸಕೋಟೆ, ಸುತ್ತ ನೂರಾರು ಎಕರೆ ಪ್ರದೇಶ ನೀರಿನಲ್ಲಿ ಮುಳುಗಡೆ ಆಗಿದೆ. ತಗ್ಗು ಪ್ರದೇಶದ ಗದ್ದೆಗಳಿಗೆ ನದಿ ನೀರು ನುಗ್ಗುತ್ತಿದ್ದು ಆತಂಕದ ವಾತಾವರಣ ನಿರ್ಮಾಣ ಆಗಿದೆ. ಇನ್ನು ಕಬಿನಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಮೂಲಕ 25 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್​ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!

publive-image

ಇದರಿಂದ ಡ್ಯಾಂ ಕೆಳಭಾಗದ ಸೇತುವೆ ಸಂಪೂರ್ಣ ಮುಳುಗಡೆ ಆಗಿದೆ. ಬಿದರಹಳ್ಳಿ, ನಂಜನಾಥಪುರ, ತೆರಣಿಮಂಟಿ, ಬಸಾಪುರ, ಉಯ್ಯಂಬಳ್ಳಿ, ಕಳಸೂರು, ಕೆಂಚನಹಳ್ಳಿ,‌ ಕಾಳೇನಹಳ್ಳಿ, ಬುಂಡೇನಹಳ್ಳಿ, ಬೋರೆದೇವರ ಮಂಟಿ, ಸೋಮದೇವರಮಂಟಿ, ಭೀಮನಕೊಳ್ಳಿ, ಬ್ರಹ್ಮಗಿರಿಹಾಡಿ, ಗೆಂಡತ್ತೂರು ಹಾಡಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಜನರ ಓಡಾಟ, ದ್ವಿಚಕ್ರ ವಾಹನಗಳಿಗೆ ಮಾತ್ರ ಸೇತುವೆ ಮೇಲೆ ಅವಕಾಶ ಇದೆ. ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

publive-image

ಡ್ಯಾಂ ಭರ್ತಿಗೆ 3 ಅಡಿ ನೀರು ಬೇಕು..

ಕಬಿನಿ ಡ್ಯಾಂ‌ ಭರ್ತಿಗೆ ಕೇವಲ ಮೂರು ಅಡಿ ಮಾತ್ರ ಬಾಕಿ ಇದೆ. ಜಲಾಶಯದ‌ ಇಂದಿನ ನೀರಿನ ಮಟ್ಟ 81 ಅಡಿಗಳು. ಜಲಾಶಯದ ಒಟ್ಟು ಎತ್ತರ 84 ಅಡಿಗಳು. ಜಲಾಶಯದಲ್ಲಿ ಒಳಹರಿವಿನ ಪ್ರಮಾಣ 21,500 ಕ್ಯೂಸೆಕ್ಸ್ ಇದೆ. ಜಲಾಶಯದ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಿ ಪೊಲೀಸರ ನಿಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: ಕೊಂಚ ರಿಲ್ಯಾಕ್ಸ್​ ಕೊಟ್ಟ ಮಳೆರಾಯ.. ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ..

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment