ಇನ್ನೂ 2 ದಿನ ಭಯಂಕರ ಸೆಕೆ; ಕರ್ನಾಟಕದ ಈ ಭಾಗದಲ್ಲಿ ಭಾರೀ ಬಿಸಿಲು; ಹವಾಮಾನ ಇಲಾಖೆ ಎಚ್ಚರಿಕೆ

author-image
Ganesh Nachikethu
Updated On
ಬೆಂಗಳೂರಿಗರೇ ಹುಷಾರ್‌.. ಇಂದಿನಿಂದ ಎಷ್ಟು ದಿನ ರಣ ಬಿಸಿಲು; ಹವಮಾನ ಇಲಾಖೆ ಎಚ್ಚರಿಕೆ ಏನು?
Advertisment
  • ಬಿಸಿಲಿನ ಜೊತೆ ಅಲ್ಲಲ್ಲಿ ಮಳೆ ಬರುವ ಸೂಚನೆ ನೀಡಿದ IMD
  • ದೇಶದ ಯಾವೆಲ್ಲ ರಾಜ್ಯಗಳು ಬಿಸಿಲಿಗೆ ಬೆಚ್ಚಿಬಿದ್ದಿದ್ದಾರೆ ಗೊತ್ತಾ?
  • ಕೇಂದ್ರ ಸಚಿವರು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ

ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿರು ಬಿಸಿಲಿನ ಜೊತೆ ಈಶಾನ್ಯ ಭಾಗಳಲ್ಲಿ ಮಾರ್ಚ್​​ 25ರವರೆಗೆ ಮಳೆಕೂಡ ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಎಲ್ಲೆಲ್ಲಿ ಬಿಸಿಲು..?

ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ, ಉತ್ತರ ಕರ್ನಾಟಕ, ಆಂಧ್ರ ಪ್ರದೇಶದ ಕರಾವಳಿ ಭಾಗ, ತೆಲಂಗಾಣದಲ್ಲಿ ಭಾರೀ ಬಿಸಿಲು ಇರಲಿದೆ. ತಮಿಳುನಾಡು, ಪುದಚೆರಿ, ಕೇರಳ, ಮೇಘಾಲಯ, ನಾಗಲ್ಯಾಂಡ್, ಮಣಿಪುರ, ತ್ರಿಪುರ, ಅರುಣಾಚಲಪ್ರದೇಶ, ಒಡಿಶಾ , ಪಶ್ಚಿಮ ಬಂಗಾಳದಲ್ಲಿ ಮಳೆಯಾಗಲಿದೆ ಎಂದಿದೆ.

ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಮುಂದಿನ 7 ದಿನಗಳ ಕಾಲ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ ಕೇಂದ್ರ ಸರ್ಕಾರ ಕೂಡ ಅಲರ್ಟ್​ ಆಗಿದ್ದು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಬಿಸಿಲಿನ ಬೇಗೆ ಮತ್ತು ಅದರ ಪರಿಣಾಮವನ್ನು ಎದುರಿಸಲು ಸಿದ್ಧರಾಗಿರುವಂತೆ ಆರೋಗ್ಯ ಇಲಾಖೆಗೆ ಕೇಂದ್ರ ಸಚಿವ ಮನ್ಸುಕ್ ಮಾಂಡವಿಯ ತಿಳಿಸಿದ್ದಾರೆ. ಅಲ್ಲದೇ ಬಿಸಿಲಿ ತಾಪದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜನರಲಿ ಜಾಗೃತಿ ಮೂಡಿಸಲು ಸರ್ಕಾರಗಳು ಅಲರ್ಟ್ ಆಗಬೇಕು ಎಂದು ಕೇಂದ್ರ ಸಚಿವರು ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ:ಮೊದಲ ಪಂದ್ಯದಲ್ಲೇ ಭರ್ಜರಿ ಜಯ; ಆರ್​​ಸಿಬಿಗೆ ತಂಡದ ಗೆಲುವಿಗೆ ಐದು ಪ್ರಮುಖ ಕಾರಣಗಳು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment