newsfirstkannada.com

1977ರಲ್ಲಿ ಕಾಡಿಗೆ ಹೋಗಿ ಕಟ್ಟಿಗೆ ತಂದ ಮಹಿಳೆಯರಿಗೆ 2023ರಲ್ಲಿ ಸಿಕ್ತು ಶಿಕ್ಷೆ! 

Share :

19-07-2023

    ಬರೋಬ್ಬರಿ 46 ವರ್ಷಗಳ ಬಳಿಕ ಮಹಿಳೆಯರಿಗೆ ಶಿಕ್ಷೆ

    12 ಮಹಿಳೆಯರ ಮೇಲೆ 1977ರಲ್ಲಿ ಕೇಸ್​ ದಾಖಲಾಗಿತ್ತು

    ಕಾಡಿಗೆ ಹೋಗಿ ಕಟ್ಟಿಗೆ ತಂದದ್ದಕ್ಕೆ ಅರಣ್ಯಾಧಿಕಾರಿ ಕೇಸ್​​ ದಾಖಲಿಸಿದ್ರು

ಭಾರತದಲ್ಲಿ ಯಾರೇ ತಪ್ಪು ಮಾಡಿದ್ರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಷ್ಟು ಮಾತ್ರವಲ್ಲ, ಇಂದು ಮಾಡಿದ ತಪ್ಪಿಗೆ ಇಂದೇ ಶಿಕ್ಷೆ ಸಿಗಬೇಕೆಂದಿಲ್ಲ. ದಶಕಗಳ ಬಳಿಕವು ಶಿಕ್ಷೆ ಸಿಕ್ಕರೂ ಅಚ್ಚರಿಯಿಲ್ಲ. ಅದರಂತೆಯೇ ಐದು ದಶಕಗಳ ಬಳಿಕ ತಾವು ಮಾಡಿದ ತಪ್ಪಿಗೆ ಶಿಕ್ಷೆ ಸಿಕ್ಕ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಅಷ್ಟಕ್ಕೂ ಆ ತಪ್ಪೇನು ಗೊತ್ತಾ?

ಅಂದಹಾಗೆಯೇ ಇದು ಇಂದು ನಿನ್ನೆಯ ಘಟನೆಯಲ್ಲ. 1977ರಲ್ಲಿ ನಡೆದ ಘಟನೆ. ಆದರೆ ಶಿಕ್ಷೆಯಾಗಿದ್ದು ಮಾತ್ರ 2023ರಲ್ಲಿ. ಕಾಡಿಗೆ ಹೋದ ಮಹಿಳೆಯರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಇದೇ ಕಾರಣಕ್ಕೆ ಶಿಕ್ಷೆಯಾಗಿದೆ.

ಹೌದು. ರಾಜಸ್ಥಾನದ ಬುಂದಿ ಜಿಲ್ಲೆಯ ಹಿಂದೋಲಿ ಬ್ಲಾಕ್​ನಲ್ಲಿ ಮಹಿಳೆಯರು 1977ರಲ್ಲಿ ಕಾಡಿಗೆ ತೆರಳುತ್ತಾರೆ. ಕಾಡಿನಿಂದ ಕಟ್ಟಿಗೆ ತರುತ್ತಾರೆ. ಇದೇ ಕಾರಣಕ್ಕೆ ಅವರ ಮೇಲೆ  ಅರಣ್ಯಾಧಿಕಾರಿಯೊಬ್ಬರು ಕೇಸ್​​ ದಾಖಲಿಸುತ್ತಾರೆ. ಈ ಸಂಬಂಧ ಬರೋಬ್ಬರಿ 46 ವರ್ಷಗಳ ಬಳಿಕ ಆ ಮಹಿಳೆಯರಿಗೆ ಶಿಕ್ಷೆಯಾಗಿದೆ.

ಅಂದಹಾಗೆಯೇ 12 ಮಹಿಳೆಯರು ಈ ತಪ್ಪಿನಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಮೂವರು ಸಾವನ್ನಪ್ಪಿದ್ದರೆ, 7 ಮಹಿಳೆಯರನ್ನು ಬಂಧಿಸಿಲಾಗಿದೆ. ಮತ್ತಿಬ್ಬರನ್ನು ಗುರುತಿಸಲು ಸಾಧ್ಯವಾಗಿಲ್ಲ. ಹಾಗಾಗಿ ಈ  ಮಹಿಳೆಯರ ವಯಸ್ಸನ್ನು ಪರಿಗಣಿಸಿ ಅವರಿಗೆ  ಕೋರ್ಟ್​ ದಂಡ ವಿಧಿಸಿದೆ. ಆ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1977ರಲ್ಲಿ ಕಾಡಿಗೆ ಹೋಗಿ ಕಟ್ಟಿಗೆ ತಂದ ಮಹಿಳೆಯರಿಗೆ 2023ರಲ್ಲಿ ಸಿಕ್ತು ಶಿಕ್ಷೆ! 

https://newsfirstlive.com/wp-content/uploads/2023/07/Firewood.jpg

Load More