/newsfirstlive-kannada/media/post_attachments/wp-content/uploads/2025/03/ramya5.jpg)
ಬೆಂಗಳೂರು: ನಟಿ ರಮ್ಯಾ ಅವರ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಅಶ್ಲೀಲ ಮೆಸೇಜ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಮಹಿಳಾ ಆಯೋಗ ಸುಮೊಟೋ ಕೇಸ್ ದಾಖಲಿಸಿಕೊಂಡಿತ್ತು. ಇದೀಗ ಮತ್ತೊಂದು ಮಹತ್ವದ ಹೆಜ್ಜೆಗೆ ಮಹಿಳಾ ಆಯೋಗ ನಿರ್ಧರಿಸಿದೆ.
ಇದನ್ನೂ ಓದಿ: ಪಂತ್ ಭಾವುಕ ಸಂದೇಶ.. ಟೆಸ್ಟ್ನಿಂದ ಹೊರಬಿದ್ದ ಬೆನ್ನಲ್ಲೇ ತಂಡಕ್ಕೆ ಬಿಗ್ ಮೆಸೇಜ್..!
ಮಹಿಳಾ ಆಯೋಗದ ಪ್ಲಾನ್ ಏನು?
- ರಮ್ಯಾ ಕೇಸ್ ಬೆನ್ನಲ್ಲೇ ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ತಯಾರಿ
- ಪ್ರತಿ ಜಿಲ್ಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನೇತೃತ್ವದಲ್ಲಿ ಜಾಗೃತಿ
- ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ಜಾಗೃತಿ
- ಕೆಟ್ಟ ಕೆಟ್ಟ ಕಾಮೆಂಟ್ ಹಾಕಿದರೆ ಏನೇನು ಕಾನೂನು ತೊಡಕು ಆಗುತ್ತೆ
- ಈ ಬಗ್ಗೆ ವಿಶೇಷ ಉಪನ್ಯಾಸ ಮಾಡಲಿರುವ ಮಹಿಳಾ ಆಯೋಗದ ಅಧ್ಯಕ್ಷೆ
- ಬಹುತೇಕ ಜನರು ಜಾಲತಾಣದಲ್ಲಿ ಅವಾಚ್ಯ ಪದ ಬಳಕೆ ಜಾಸ್ತಿ ಮಾಡ್ತಿದ್ದಾರೆ
- ಮನನೊಂದು ದೂರು ಕೊಟ್ಟು FIR ಆದ್ರೆ, ಮುದ್ದೆ ಮುರಿಯುವುದು ಗ್ಯಾರಂಟಿ
ಅಶ್ಲೀಲ ಮೆಸೇಜ್ ಹಾಕುವವರ ವಿರುದ್ಧ ಆಯೋಗ ಕಣ್ಣಿಡಲಿದ್ದು, ಕ್ರಮ ಫಿಕ್ಸ್
ಆ ಮೂಲಕ ಕೆಟ್ಟಕೆಟ್ಟ ಕಾಮೆಂಟ್ಸ್ ಮಾಡೋದ್ರಿಂದ ಆಗುವ ಅನಾಹುತಗಳನ್ನ ತಡೆಯಲು ಪ್ಲಾನ್ ಮಾಡಿದೆ. ಇನ್ಮುಂದೆ ಸೋಷಿಯಲ್ ಮೀಡಿಯಾಗಲ್ಲಿ ಕಣ್ಣಿಡಲು ಸೈಬರ್ ಪೊಲೀಸರ ಮೊರೆ ಹೋಗಲಿದೆ. ಅದರ ಜೊತೆಗೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲು ಪ್ಲಾನ್ ಮಾಡಿಕೊಂಡಿದೆ.
ಇದನ್ನೂ ಓದಿ: ಐ ಲವ್ ಯೂ ಹೇಳೋದ್ರಲ್ಲಿ ತಪ್ಪಿಲ್ಲ -ಪೋಕ್ಸೋ ಕೇಸ್ಗೆ ಸಂಬಂಧಿಸಿ ಹೈಕೋರ್ಟ್ನಿಂದ ಮಹತ್ವದ ತೀರ್ಪು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ