ಸೀರೆಗೆ ಅವಮಾನ..!! ಭಾರತೀಯರ ಕಣ್ಣು ಕೆಂಪಾಗಿಸಿದ ನಾರಿ ಸ್ಯಾರಿ ಗಲಾಟೆ..

author-image
Ganesh
Updated On
ಸೀರೆಗೆ ಅವಮಾನ..!! ಭಾರತೀಯರ ಕಣ್ಣು ಕೆಂಪಾಗಿಸಿದ ನಾರಿ ಸ್ಯಾರಿ ಗಲಾಟೆ..
Advertisment
  • ಸೀರೆ.. ಭಾರತೀಯ ಸಂಸ್ಕೃತಿಯ ಪ್ರತೀಕ.. ಏನಿದು ಗಲಾಟೆ..?
  • ಸೀರೆ ವಿಷಯದಲ್ಲಿ ಕಿಡಿ ಹೊತ್ತಿಸಿದ ವರ್ಡ್ ಮ್ಯಾಗ್​ಜೀನ್
  • ಸೀರೆ ಎಲ್ಲರಿಗೂ ಸೇರಿದ್ದು ಎಂದ ವರ್ಡ್ ಮ್ಯಾಗ್​ಜೀನ್

ಕಳೆದೊಂದು ವಾರದ ಹಿಂದೆ ಪಂಚೆಗೆ ಅವಮಾನ ಅನ್ನೋ ಹೋರಾಟ ರಾಜ್ಯಾದ್ಯಂತ ನಡೆದಿತ್ತು. ಮಾಲ್​ನಲ್ಲಿ ಪಂಚೆಯುಟ್ಟ ರೈತನಿಗೆ ಪ್ರವೇಶ ನೀಡಲಿಲ್ಲ ಅಂತಾ ಇಂಥದ್ದೊಂದು ಕಿಚ್ಚಿಗೆ ಕರುನಾಡು ಸಾಕ್ಷಿಯಾಗಿತ್ತು. ಈ ಬೆನ್ನಲ್ಲೇ ಸೀರೆಗೆ ಅವಮಾನ ಅನ್ನೋ ಹೋರಾಟ ಶುರುವಾಗಿದೆ. ಇಡೀ ದೇಶಾದ್ಯಂತ ಇಂಥದ್ದೊಂದು ಕಿಡಿ ಹೊತ್ತಿದೆ.

ಸೀರೆ.. ಭಾರತೀಯ ಸಂಸ್ಕೃತಿಯ ಪ್ರತೀಕ.. ನಮ್ಮ ದೇಶದ ಸಂಪ್ರದಾಯದಲ್ಲಿ ಸೀರೆಗೆ ಅದರದ್ದೇ ಆದ ಮಹತ್ವದ ಇದೆ. ಈ ದೇಶದ ಹೆಣ್ಮಕ್ಕಳಿಗೂ ಸೀರೆಯ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಹಬ್ಬ-ಹರಿದಿನಗಳಲ್ಲಿ, ಮದುವೆ ಕಾರ್ಯಕ್ರಮಗಳಲ್ಲಿ ಸೀರೆಗೆ ಮೊದಲ ಆದ್ಯತೆ. ಸೀರೆ ಶಕ್ತಿಯ ಪ್ರತೀಕ ಅನ್ನೋ ನಂಬಿಕೆಯೂ ಇದೆ. ಹೀಗಾಗಿಯೇ ದೇವತೆಗಳನ್ನೂ ಸೀರೆಯಲ್ಲೇ ಕಾಣುವ ಸಂಪ್ರದಾಯ ನಮ್ಮದು. ಮಹಭಾರತದ ದ್ರೌಪದಿಯೂ ಸೀರೆ ಉಡುತಿದ್ದ ಬಗ್ಗೆ ಕಥಾನಕಗಳಿವೆ. ಹೀಗೆ ದೊಡ್ಡ ಪರಂಪರೆ, ಇತಿಹಾಸವನ್ನೇ ಹೊಂದಿರೋ ಸೀರೆಗೆ ಅವಮಾನ ಆಗ್ತಿದೆ ಅನ್ನೋ ಕೂಗು ಶುರುವಾಗಿದೆ. ಅದಕ್ಕೆ ಕಾರಣ.. ಅದೊಂದು ಮ್ಯಾಗ್​ಜೀನ್​ನ ಕವರ್​ ಪೇಜ್​.

ಇದನ್ನೂ ಓದಿ:Landslide: 5 ವರ್ಷದ ಹಿಂದೆ ಕೇರಳ ಪುತ್ತುಮಲೆ ದುರಂತ.. ಅದೇ ಜಾಗದಿಂದ 2 ಕಿಮೀ ದೂರದಲ್ಲಿ ಪರ್ವತ ಪ್ರವಾಹ..!

publive-image

ಇತ್ತೀಚೆಗೆ ಪ್ರಸಿದ್ಧ ವರ್ಡ್ ಮ್ಯಾಗ್​ಜೀನ್ ತನ್ನ ಕವರ್​ಪೇಜ್​ನಲ್ಲಿ ಸೀರೆಯನ್ನಟ್ಟಿರೋ ಒಂದಷ್ಟು ಪುರುಷರ ಫೋಟೋವನ್ನ ಹಾಕಿತ್ತು. ಎಲ್​ಜಿಬಿಟಿ ಸಮುದಾಯದ ಕರಣ್, ಪುಷ್ಪಕ್, ವರುಣ್, ಜಯಂತ್, ಕೋಕೋ ಸೇರಿದಂತೆ ಒಂದಷ್ಟು ಮೆನ್ ಮಾಡೆಲ್​ಗಳು ಸೀರೆಯೊಟ್ಟು ಪೋಸ್​ ಕೊಟ್ಟಿದ್ದರು. ಇದೇ ಫೋಟೋವನ್ನ ವರ್ಡ್ ಮ್ಯಾಗ್​ಜೀನ್ ತನ್ನ ಕವರ್​ಪೇಜ್​ನಲ್ಲಿ ಪ್ರಕಟಿಸಿದೆ. ಅಲ್ಲದೇ The sari belongs to everyone. ಅಂತಾ ಕ್ಯಾಪ್ಶನ್ ಕೊಟ್ಟಿತ್ತು. ಅಂದ್ರೆ ಸೀರೆ ಎಲ್ಲರಿಗೂ ಸೇರಿದ್ದು ಅನ್ನೋ ಕ್ಯಾಪ್ಶನ್ ಕೊಟ್ಟಿತ್ತು. ಇಲ್ಲಿಂದಲೇ ನೋಡಿ ವಿವಾದದ ಕಿಡಿ ಹೊತ್ತಿಕೊಂಡಿದ್ದು.

publive-image

ಯಾವಾಗ ವರ್ಡ್ ಮ್ಯಾಗ್​ಜೀನ್ ಕವರ್​ಪೇಜ್​ನಲ್ಲಿನ ಸ್ಯಾರಿ ಸೀರಿಸ್​ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ ಸಂಪ್ರದಾಯಬದ್ಧ ಭಾರತೀಯರ ಕಣ್ಣನ್ನ ಕೆಂಪಾಗುವಂತೆ ಮಾಡಿದೆ. ಸೀರೆ ಎಲ್ಲರಿಗೂ ಸೇರಿದ್ದಲ್ಲ ಅದು ಮಹಿಳೆಯರಿಗೆ ಮಾತ್ರ ಸೇರಿದ್ದು ಅನ್ನೋ ಕೂಗು ದೊಡ್ಡ ಮಟ್ಟದಲ್ಲಿ ಶುರುವಾಗಿದೆ. ಇದು ಸೀರೆಗೆ ಮಾಡಿದ ಅವಮಾನ ಅನ್ನೋ ಚರ್ಚೆಯೂ ಜಾಲತಾಣದಲ್ಲಿ ನಡೀತಿದೆ. ಈ ನಡುವೆ ಭಾರತಕ್ಕೆ ವೋಕ್ ಕಲ್ಚರ್ ಬರೋದನ್ನ ತಡೆಯಬೇಕು ಅನ್ನೋ ಅಭಿಯಾನವೇ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ.

ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!

publive-image

ಪಾಶ್ಚಿಮಾತ್ಯ ದೇಶಗಳಲ್ಲಿ ವೋಕ್ ಕಲ್ಚರ್ ಅನ್ನೋ ಪರಿಕಲ್ಪನೆ ಇದೆ. ಜನಾಂಗಿಯ ಸಮಾನತೆ ಹಾಗೂ ಲಿಂಗ ಸಮಾನತೆ ಕಾಪಾಡಿಕೊಳ್ಳುವ ಉದ್ದೇಶ ಇದರದ್ದಾಗಿದೆ. ಎಲ್​ಜಿಬಿಟಿ ಸಮುದಾಯದವರಿಗೆ ಸಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸಮಾನ ಹಕ್ಕು ಸಿಗಬೇಕು ಅನ್ನೋ ಮನಸ್ಥಿತಿಯ ಜನ ವೋಕ್ ಕಲ್ಚರ್​ನ್ನ ಪಾಲಿಸ್ತಾರೆ. ಅಮೆರಿಕಾದಂತ ದೇಶಗಳಲ್ಲಿ ಇದು ಸಾಮಾನ್ಯ. ಆದ್ರೆ ಇದೇ ಕಲ್ಚರ್ ಇದೀಗ ಸೀರೆಯನ್ನ ಪುರುಷರೂ ಧರಿಸೋ ಮೂಲಕ ಭಾರತಕ್ಕೆ ಬರ್ತಿದೆ ಅನ್ನೋ ಕಿಡಿ ಹೊತ್ತಲು ಕಾರಣವಾಗಿದೆ.

publive-image

ನಮ್ಮದು ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಬಹಳ ಪ್ರಾಮುಖ್ಯತೆ ನೀಡುವ ದೇಶ.. ಹೀಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿರೋ ಈ ವೋಕ್ ಕಲ್ಚರ್​ನ್ನ ಒಪ್ಪದವರು ಇದನ್ನ ವೋಕ್ ವೈರಸ್​ ಅಂತಾ ಕರೀತಾರೆ. ಹೀಗಾಗಿ ಸೀರೆಯ ವೇಷಧಲ್ಲಿ ವೋಕ್ ವೈರಸ್ ಭಾರತಕ್ಕೆ ಬರ್ತಿದೆ. ಇದನ್ನ ತಡೆಯಬೇಕು ಅನ್ನೋ ಕೂಗು ಶುರುವಾಗಿದೆ. ಅಲ್ಲದೇ ಸೀರೆಯ ಮಹತ್ವವನ್ನ, ಅದರ ಘನತೆಯನ್ನ ಕಾಪಾಡಬೇಕು ಅನ್ನೋ ಚರ್ಚೆಗೂ ಇದು ಕಾರಣವಾಗಿದೆ.

ಇದನ್ನೂ ಓದಿ:ನಾಯಿ ಹೊಟ್ಟೆಗೆ ಜಾಸ್ತಿ ಹಾಕಿದ್ರೆ ಜೈಲಿಗೆ ಹೋಗ್ತೀರಿ ಹುಷಾರ್.. ಮಹಿಳೆಗೆ 2 ತಿಂಗಳ ಜೈಲು ಶಿಕ್ಷೆ ಕೊಟ್ಟ ಕೋರ್ಟ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment