Advertisment

‘ಅಪ್ಪ, ದೊಡ್ಡಪ್ಪ ಸೇರಿ ಕುಟುಂಬದಲ್ಲಿದ್ದ 16 ಜನ ಹೋಗಿದ್ವಿ..’ 13 ಮಂದಿ ತನ್ನವರ ಕಳ್ಕೊಂಡು ಬಾಲಕಿ ನರಳಾಟ..

author-image
Ganesh
Updated On
‘ಅಪ್ಪ, ದೊಡ್ಡಪ್ಪ ಸೇರಿ ಕುಟುಂಬದಲ್ಲಿದ್ದ 16 ಜನ ಹೋಗಿದ್ವಿ..’ 13 ಮಂದಿ ತನ್ನವರ ಕಳ್ಕೊಂಡು ಬಾಲಕಿ ನರಳಾಟ..
Advertisment
  • ಜೋರಾಗಿ ಸೌಂಡ್ ಬಂತು, ಕೂಗಲು ಶುರು ಮಾಡಿದ್ವಿ
  • ಆಮೇಲೆ ಗೊತ್ತಾಗಲಿಲ್ಲ, ಆಸ್ಪತ್ರೆಯಲ್ಲಿ ಪ್ರಜ್ಞೆ ಬಂತು
  • ಅಪಘಾತದ ಕ್ಷಣ ಬಿಚ್ಚಿಟ್ಟ ಸಾವು ಗೆದ್ದು ಬಂದ ಬಾಲಕಿ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್​ ಬಳಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿಯಾಗಿ 13 ಮಂದಿ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಚಿಂಚೊಳ್ಳಿ ಮಾಯಮ್ಮ ದೇವರ ದರ್ಶನ ಮುಗಿಸಿ ವಾಪಸ್ ಆಗ್ತಿದ್ದಾಗ ದುರ್ಘಟನೆ ಸಂಭವಿಸಿದೆ.

Advertisment

ಮೃತರೆಲ್ಲ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಮ್ಮಿಹಟ್ಟಿ ಅವರು ಎಂದು ತಿಳಿದುಬಂದಿದೆ. ಇದೀಗ ದುರಂತದಲ್ಲಿ ಬದುಕುಳಿದ ಓರ್ವ ಬಾಲಕಿ ದುರ್ಘಟನೆ ಬಗ್ಗೆ ಮಾತನಾಡಿದ್ದಾಳೆ. ಮೂರು ದಿನಗಳ ಹಿಂದೆ ದೇವರ ದರ್ಶನಕ್ಕೆ ನಾವೆಲ್ಲ ಹೋಗಿದ್ದೇವು. ಚಿಂಚೊಳ್ಳಿ ಮಾಯಮ್ಮ ದೇವಿಯ ದರ್ಶನ ಮುಗಿಸಿ ವಾಪಸ್ ಬರುವಾಗ ಜೋರಾಗಿ ಸೌಂಡ್ ಬಂತು. ಆಗ ಎಲ್ಲರೂ ಜೋರಾಗಿ ಚಿರಲು ಶುರುಮಾಡಿದ್ದಾರೆ.

ಇದನ್ನೂ ಓದಿ:‘ಮಗು ಅಮ್ಮಾ, ಅಮ್ಮಾ ಅಂತಾ ನರಳುತ್ತಿತ್ತು..’ ಹಾವೇರಿ ಅಪಘಾತದ ನರಕ ಬಿಚ್ಚಿಟ್ಟ ಆ್ಯಂಬುಲೆನ್ಸ್ ಡ್ರೈವರ್..

publive-image

ನನಗೆ ಏನಾಗಿದಿಯೋ ಗೊತ್ತಿಲ್ಲ, ಆಸ್ಪತ್ರೆಯಲ್ಲಿದ್ದಾಗ ಪ್ರಜ್ಞೆ ಬಂತು. ನಮ್ಮದು ಒಂದೇ ಕುಟುಂಬ. ಹದಿನಾರು ಜನರು ಹೋಗಿದ್ದೇವು. ನಮ್ಮ ಅಪ್ಪನ ಹೆಸರು ನಾಗೇಶ್. ಅಣ್ಣ-ತಮ್ಮರು, ಚಿಕ್ಕಪ್ಪ, ದೊಡ್ಡಪ್ಪ ಅವರ ಮಕ್ಕಳು ಎಲ್ಲಾ ಸೇರಿ ಹೋಗಿದ್ವಿ ಎಂದು ಸಾವನ್ನು ಗೆದ್ದು ಬಂದ ಅರ್ಪಿತಾ ಮಾಹಿತಿ ನೀಡಿದ್ದಾಳೆ. ಅರ್ಪಿತಾ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisment

ಇದನ್ನೂ ಓದಿ:‘ಮಗು ಅಮ್ಮಾ, ಅಮ್ಮಾ ಅಂತಾ ನರಳುತ್ತಿತ್ತು..’ ಹಾವೇರಿ ಅಪಘಾತದ ನರಕ ಬಿಚ್ಚಿಟ್ಟ ಆ್ಯಂಬುಲೆನ್ಸ್ ಡ್ರೈವರ್..

ಇದನ್ನೂ ಓದಿ:ಹಾವೇರಿಯಲ್ಲಿ ಭೀಕರ ಅಪಘಾತ 13 ಸಾವು.. ಮತ್ತಷ್ಟು ಸಾವು ನೋವಿನ ಆತಂಕ.. ಮೃತರ ಗುರುತು ಪತ್ತೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment