ಅಬ್ಬಾ.. ಬುರ್ಜ್ ಖಲೀಫಾಗೆ ಸೆಡ್ಡು; ಸೌದಿ ಅರೇಬಿಯಾದಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ದೊಡ್ಡ ಕಟ್ಟಡ! ಏನಿದರ ವಿಶೇಷ?

author-image
admin
Updated On
ಅಬ್ಬಾ.. ಬುರ್ಜ್ ಖಲೀಫಾಗೆ ಸೆಡ್ಡು; ಸೌದಿ ಅರೇಬಿಯಾದಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ದೊಡ್ಡ ಕಟ್ಟಡ! ಏನಿದರ ವಿಶೇಷ?
Advertisment
  • ವಿಶ್ವದ ಅತ್ಯಂತ ದೊಡ್ಡ ಕಟ್ಟಡ ನಿರ್ಮಾಣಕ್ಕೆ ಮುಂದಾದ ಸೌದಿ ಅರೇಬಿಯಾ
  • ಈ ಒಂದು ಕಟ್ಟಡ 20 ನ್ಯೂಯಾರ್ಕ್​ಗಳಿಗೆ ಸಮ ಎಂದು ಹೇಳುತ್ತಿರುವುದೇಕೆ?
  • ಎಷ್ಟು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮುಕಾಬ್ ಕಟ್ಟಡ ತಲೆ ಎತ್ತಲಿದೆ ಗೊತ್ತಾ?

ಸೌದಿ ಅರೇಬಿಯಾ ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಲ್ಲಿ ಹೆಸರುವಾಸಿ. ಕಣ್ಣು ಹಾಯಿಸಿದಲ್ಲೆಲ್ಲಾ ನಮಗೆ ಸಿಗುವುದು ಆಕಾಶಕ್ಕೆ ಚುಂಬಿಸುತ್ತಿವೆಯೆನೋ ಎನ್ನುವ ಕಟ್ಟಡಗಳ, ನುಣುಪಾದ ರಸ್ತೆಗಳು. ಐಷಾರಾಮಿ ಬದುಕು. ಈಗ ಇದೇ ಸೌದಿ ಅರೇಬಿಯಾ ವಿಶ್ವದ ಅತ್ಯಂತ ದೊಡ್ಡ ಕಟ್ಟಡವನ್ನು ನಿರ್ಮಿಸಲು ನೀಲನಕ್ಷೆಯನ್ನು ಎಳೆದುಕೊಂಡಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾಧನಲ್ಲಿ ಸದ್ಯದಲ್ಲಿಯೇ ತಲೆ ಎತ್ತಲಿರುವ ಅತ್ಯಂತ ದೊಡ್ಡ ಕಟ್ಟಡದಲ್ಲಿ ಸುಮಾರು 20 ನ್ಯೂಯಾರ್ಕ್​ನಂತಹ ನಗರಗಳನ್ನು ಕೂರಿಸಬಹುದು ಎಂದೇ ಹೇಳಲಾಗುತ್ತಿದೆ.

ಈ ಒಂದು ಕಟ್ಟಡಕ್ಕೆ ಮುಕಾಬ್ ಎಂದು ಹೆಸರಿಡಲಾಗಿದೆ. ಇದರ ಎತ್ತರ ಬರೋಬ್ಬರಿ 1,300 ಅಡಿ ಎಂದೇ ಹೇಳಲಾಗುತ್ತಿದೆ. ಇಲ್ಲಿಯವರೆಗೂ ದುಬೈನಲ್ಲಿ ನಿರ್ಮಾಣವಾಗಿರುವ ಬುರ್ಜ್ ಖಲೀಫಾವೇ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿಯನ್ನು ಪಡೆದಿತ್ತು. ವಿಶ್ವದಲ್ಲಿ ಅತ್ಯಂತ ಎತ್ತರವಾದ ಬುರ್ಜ್​ ಖಲೀಫಾ ಕಟ್ಟದ ಎತ್ತರ 2722 ಫೀಟ್ ಇದೆ. ಅದನ್ನು ಹಿಂದೆ ಹಾಕುವ ನಿಟ್ಟಿನಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ. ಇದು ರಿಯಾಧ ಸಿಟಿಯಲ್ಲಿ 11 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ. ಅಂದ್ರೆ ಸುಮಾರು 20 ಲಕ್ಷ ಸ್ಕೇರ್​ ಮೀಟರ್​ ಜಾಗದಲ್ಲಿ ಈ ಒಂದು ಕಟ್ಟಡ ನಿರ್ಮಾಣವಾಗಲಿದೆ. ಅದರ ವಿಶೇಷತೆಗಳನ್ನು ಗಮನಿಸುವುದಾದ್ರೆ.

‘ಮುಕಾಬ್’ ಹೇಗಿರುತ್ತೆ?

  • ಈ ಕಟ್ಟಡದ ನಿರ್ಮಾಣದ ವೆಚ್ಚ ಸುಮಾರು 50 ಬಿಲಿಯನ್ ಡಾಲರ್ ಎಂದೇ ಹೇಳಲಾಗುತ್ತಿದೆ. ಅದು ಭಾರತೀಯ ರೂಪಾಯಿಗಳಲ್ಲಿ 42 ಲಕ್ಷ ಕೋಟಿಗಿಂತಲೂ ಹೆಚ್ಚು. ಇದು ಮತ್ತೊಂದು ಜಿಲ್ಲಾ ನಗರಿಯಾಗಿ ನ್ಯೂ ಮುರಬ್ಬಾ ಎಂಬ ಹೆಸರಿನಲ್ಲಿ ಕಂಗೊಳಿಸಲಿದೆ.
  • 2.5 ಲಕ್ಷ ಸ್ಕೇರ್ ಮೀಟರ್​ನಲ್ಲಿ ನಿರ್ಮಾಣವಾಗಲಿರುವ ಈ ಒಂದು ಯೋಜನೆಯಲ್ಲಿ ಸುಮಾರು 1,04,000 ಮನೆಗಳು ಇರಲಿವೆ ಎಂದು ಹೇಳಲಾಗಿದೆ.
  • ಈ ಒಂದು ಕಟ್ಟಡ ಸಗಟು ವ್ಯಾಪಾರ, ಕಾರ್ಪೊರೇಟ್ ವಲಯ ಹಾಗೂ ಸಾಂಸ್ಕೃತಿಕ ಅನುಭವಗಳ ಸಂಯೋಜಕವಾಗಿ ನಿಲ್ಲಲಿದೆ ಎಂದು ಹೇಳಲಾಗುತ್ತಿದೆ.

ಹೀಗೆ ಹತ್ತು ಹಲವು ಪ್ರಯೋಜನಗಳ ಜೊತೆ ಈ ಒಂದು ಗಗನಚುಂಬಿ ಕಟ್ಟಡ ಬರುವ ವರ್ಷಗಳಲ್ಲಿ ಸೌದಿ ಅರೇಬಿಯಾದಲ್ಲಿ ನಿರ್ಮಾಣವಾಗಲಿದೆ. ಸೌದಿಯ ಶ್ರೀಮಂತಿಕೆಯ ಮುಕುಟಕ್ಕೆ ಮತ್ತೊಂದು ಗರಿಯಾಗಿ ಈ ಕಟ್ಟಡ ಗುರುತಿಸಿಕೊಳ್ಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment