/newsfirstlive-kannada/media/post_attachments/wp-content/uploads/2025/03/UNIC-AIRPORT-1.jpg)
ಬಾಸೆಲ್ ಮಲ್ಹೌಸ್ ಫ್ರೀಬರ್ಗ್ ಎಂಬ ಏರ್ಪೋರ್ಟ್ ಫ್ರಾನ್ಸ್ನಲ್ಲಿ ನಿರ್ಮಿಸಲಾಗಿದೆ. ಈ ಏರ್ಪೋರ್ಟ್ನಲ್ಲಿ ಇಳಿದವರಿಗೆ ಫ್ರಾನ್ಸ್, ಜರ್ಮನ್ ಹಾಗೂ ಸ್ವಿಟ್ಜರ್ಲೆಂಡ್ಗೂ ಕೂಡ ದಾರಿಯನ್ನು ತೋರಿಸುತ್ತದೆ. ಈ ರೀತಿ ಮೂರು ದೇಶಗಳಿಗೆ ದಾರಿಯನ್ನು ತೋರಿಸುವ ಜಗತ್ತಿನ ಏಕೈಕ ಏರ್ಪೋರ್ಟ್ ಅಂದ್ರೆ ಬಾಸೆಲ್ ಮಲ್ಹೌಸ್ ಫ್ರೀಬರ್ಗ್ ಏರ್ಪೋರ್ಟ್. ಜರ್ಮನಿ, ಫ್ರಾನ್ಸ್ ಹಾಗೂ ಸ್ವಿಟ್ಜರ್ಲೆಂಡ್ನ ಗಡಿರೇಖೆಯ ಬಳಿಯೇ ಇದು ನಿರ್ಮಾಣವಾಗಿದೆ.
ಈ ಏರ್ಪೋರ್ಟ್ನಲ್ಲಿ ನಿಮಗೆ ಹಲವು ಎಕ್ಸಿಟ್ ಅಂದ್ರೆ ನಿರ್ಗಮನದ ದ್ವಾರಗಳಿವೆ. ಒಂದು ದ್ವಾರದಿಂದ ನೀವು ಸ್ವಿಟ್ಜರ್ಲೆಂಡ್ ಭೂಮಿಯೊಳಗೆ ಕಾಲಿಡಬಹುದು ಮತ್ತೊಂದು ದ್ವಾರದ ಮೂಲಕ ಫ್ರಾನ್ಸ್ಗೆ ಹೋಗಬಹುದು ಈ ರೀತಿಯಾದ ಏರ್ಪೋರ್ಟ್ ಜಗತ್ತಿನಲ್ಲಿ ನೋಡಲು ನಿಮಗೆ ಎಲ್ಲಿಯೂ ಕೂಡ ಸಿಗುವುದಿಲ್ಲ.
ಈ ಒಂದು ವಿಮಾನ ನಿಲ್ದಾಣ ಫ್ರಾನ್ಸ್ನ ಮಲೌಸ್, ಸ್ವಿಟ್ಜರ್ಲೆಂಡ್ನ ಬೇಸಲ್ ಹಾಗೂಬ ಜರ್ಮನಿಯ ಫ್ರಿಬರ್ಗ್ಗಳನ್ನು ಜೋಡಿಸುತ್ತದೆ. ಇದು ಮೂರು ದೇಶಗಳಿಗೆ ಒಂದು ರೀತಿಯಲ್ಲಿ ವರದಾನವಾಗಿದೆ. ಈ ವಿಮಾನ ನಿಲ್ದಾಣ ಫ್ರಾನ್ಸ್ನಲ್ಲಿದ್ದರೂ ಕೂಡ ಸ್ವಿಸ್ ಮತ್ತು ಫ್ರಾನ್ಸ್ನ ಕಸ್ಟಮ್ಸ್ ಮತ್ತು ಕಾನೂನುಗಳು ಬೇರೆ ಬೇರೆ ರೀತಿಯಾಗಿ ನಡೆಯುತ್ತವೆ. ಇದು ಉಭಯ ರಾಷ್ಟ್ರಗಳ ಜಗತ್ತನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ:ತಾಲಿಬಾನ್ನಲ್ಲಿ AK47 ಹಿಡಿದು ನಿಂತ ನೀಲಿ ಚಿತ್ರತಾರೆ.. ಆಕ್ರೋಶದ ಸುರಿಮಳೆ; ಯಾಕೆ?
ಇನ್ನೂ ಅಕ್ರಮ ವಲಸಿಗರು ಸರಳವಾಗಿ ಎಲ್ಲಿಯೂ ನುಸಳದಂತೆ ಫ್ರಾನ್ಸ್ನ ಭದ್ರತಾ ಸಂಸ್ಥೆಗಳು ಈ ಬಗ್ಗೆ ಸಂಪೂರ್ಣ ಸುರಕ್ಷತೆಯ ನಿರ್ವಹಣೆಯನ್ನು ಮಾಡುತ್ತವೆ. ಕೆಲವೊಮ್ಮೆ ನಡುರಸ್ತೆಯಲ್ಲಿಯೇ ದಿಢೀರ್ ಅಂತ ಚೆಕ್ಕಿಂಗ್ ನಿಂತು ಬಿಡುತ್ತಾರೆ.
ಇನ್ನು ಇತ್ತ ಸ್ವಿಟ್ಜರ್ಲೆಂಡ್ನ ನೆಲದಲ್ಲಿ ತನ್ನದೇ ಆದ ಕಾನೂನು, ಪೊಲೀಸರು ಹಾಗೂ ನೀತಿ ನಿಯಮಗಳನ್ನು ಅಳವಡಿಸಿಕೊಂಡಿದೆ. ಈ ವ್ಯವಸ್ಥೆ ತನ್ನ ದೇಶದೊಳಗೆ ಕಾಲಿಡುವವರ ಮೇಲೆ ಸಂಪೂರ್ಣವಾಗಿ ನಿಗಾ ಇಟ್ಟುಕೊಂಡಿರುತ್ತದೆ. ಇನ್ನೂ ಇಲ್ಲಿಂಗ ಅಂಗಡಿಗಳಲ್ಲಿ ಫ್ರಾನ್ಸ್ನ ಯುರೋ ಹಾಗೂ ಸ್ವಿಸ್ನ ಫ್ರ್ಯಾಂಕ್ ಕರೆನ್ಸಿಗಳನ್ನು ಕೂಡ ನಾವು ಬಳಸಬಹುದು. ಅಂದ್ರೆ ಎರಡು ದೇಶಗಳ ಕರನ್ಸಿಯನ್ನು ನಾವು ಒಂದೇ ಜಾಗದಲ್ಲಿ ಉಪಯೋಗಿಸಬಹುದು. 1930ರಲ್ಲಿ ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್ ಈ ಒಂದು ಏರ್ಪೋರ್ಟ್ನ್ನು ನಿರ್ಮಿಸಲು ಸಜ್ಜಾಗಿದ್ದವು ಆದ್ರೆ ಆ ಕಾಲದಲ್ಲಿ ನಡೆದ ಎರಡನೇ ವಿಶ್ವಯುದ್ಧ ಇದಕ್ಕೆ ತಡೆಯಾಗಿತ್ತು. ನನಂತರ 1946ರಲ್ಲಿ ಈ ನಿಟ್ಟಿನಲ್ಲಿ ಮತ್ತೆ ಕಾರ್ಯ ಕೈಗೆತ್ತಿಕೊಳ್ಳಲಾಯಿತು.
ಇದನ್ನೂ ಓದಿ:ಹಾಲಿವುಡ್ ಸ್ಟಾರ್ ನಟಿ, ಬೇವಾಚ್ ಖ್ಯಾತಿಯ ಪಮೇಲಾ ಬಾಚ್ ದುರಂತ ಅಂತ್ಯ; ಆಗಿದ್ದೇನು?
ಈ ಏರ್ಪೋರ್ಟ್ ನಿರ್ಮಾಣಕ್ಕೆ ಸ್ವಿಸ್ ಸಿಕ್ಕಾಪಟ್ಟೆ ಹಣವನ್ನು ವ್ಯಯಿಸಿತು ಈ ಕಡೆ ಫ್ರಾನ್ಸ್ ತನ್ನ ನೆಲವನ್ನು ಬಿಟ್ಟುಕೊಟ್ಟಿತು. ಎರಡನೇ ಮಹಾಯುದ್ಧದ ಮುಕ್ತಾಯದ ನಂತರ ಈ ಒಂದು ಏರ್ಪೋರ್ಟ್ ಈ ಉಭಯ ರಾಷ್ಟ್ರಗಳ ಸ್ನೇಹ ಹಾಗೂ ಸಹಯೋಗವನ್ನು ಹೆಚ್ಚಿಸುವಲ್ಲಿ ಸಾಕ್ಷಿಯಾಗಿ ನಿಂತಿತು.
ಈ ವಿಮಾನ ನಿಲ್ದಾಣದ ಮ್ಯಾನೆಜ್ಮೆಂಟ್ ಬೋರ್ಡ್ನಲ್ಲಿ ಸ್ವಿಸ್ ಹಾಗೂ ಫ್ರಾನ್ಸ್ ಒಟ್ಟು 88 ಸಿಬ್ಬಂದಿಗಳು ಇರುತ್ತಾರೆ ಹಾಗೂ ಇಬ್ಬರು ಸಲಹಾಕಾರರು ಇರುತ್ತಾರೆ. ಇವರಿಂದಾಗಿ ಈ ಒಂದು ಜಾಗ ಮೂರು ದೇಶಗಳ ಸಮ್ಮಿಲನದ ಜಾಗವನ್ನಾಗಿ ಚಿತ್ರಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ