newsfirstkannada.com

ಭಿಕ್ಷೆ ಬೇಡಿ ₹7.5 ಕೋಟಿ ಗಳಿಸಿದ ಭೂಪ.. ಈ ಶ್ರೀಮಂತ ಭಿಕ್ಷುಕನ ಡೈಲಿ ಆದಾಯ ಎಷ್ಟು ಅಂತಾ ಕೇಳಿದ್ರೆ ನೀವು ಶಾಕ್ ಆಗ್ತೀರಾ!

Share :

Published July 6, 2023 at 10:02pm

Update July 6, 2023 at 10:06pm

    ಭಿಕ್ಷೆ ಬೇಡುತ್ತಲೇ ಕೋಟಿ, ಕೋಟಿ ಸಂಪಾದಿಸಿ ಶ್ರೀಮಂತನಾದ ಬೆಗ್ಗರ್‌!

    1.2 ಕೋಟಿಯ 2 ಬೆಡ್‌ರೂಮ್‌ನ ಫ್ಲಾಟ್‌, ಹಲವು ಮಳಿಗೆಯ ಓನರ್

    ದಿನದಲ್ಲಿ 10 ರಿಂದ 12 ಗಂಟೆವರೆಗೂ ದುಡಿಯುವ ಶ್ರೀಮಂತ ಭಿಕ್ಷುಕ

ಮುಂಬೈ: ದಿನವೆಲ್ಲಾ ದುಡಿದ್ರೂ ವರ್ಷಕ್ಕೆ ಲಕ್ಷ, ಲಕ್ಷ ರೂಪಾಯಿ, ಸಾಯುವಷ್ಟರಲ್ಲಿ ಕೋಟಿ, ಕೋಟಿ ಸಂಪಾದಿಸೋದು ಕಷ್ಟ. ಒಂದು ವೇಳೆ ಕೋಟ್ಯಾಧಿಪತಿಯಾಗಬೇಕಾದ್ರೆ ದೇವಲೋಕದಿಂದ ಕುಬೇರ ಧರೆಗಿಳಿದು ಬಂದು ಸಾಲ ಕೊಡಬೇಕು. ಇಲ್ಲದಿದ್ರೆ ಬಂಪರ್ ಲಾಟರಿನೇ ಹೊಡಿಬೇಕು. ಆದರೆ ಭಿಕ್ಷೆ ಬೇಡಿ ತಿಂಗಳಿಗೆ 60 ಸಾವಿರ ರೂಪಾಯಿ ಇಂದ 75 ಸಾವಿರ ರೂಪಾಯಿವರೆಗೂ ಸಂಪಾದಿಸಬಹುದು ಅಂದ್ರೆ ನಂಬ್ತೀರಾ. ಯಾರು ನಂಬಲ್ಲ ಬಿಡಿ. ನೀವು ನಂಬಲೇಬೇಕಾದ ಜಗತ್ತಿನ ಶ್ರೀಮಂತ ಭಿಕ್ಷುಕನೊಬ್ಬ ಮುಂಬೈ ಮಾಯನಗರಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ಭಿಕ್ಷುಕನ ಬಂಗಲೆ, ಇವನ ಸಂಪತ್ತಿನ ಮೌಲ್ಯ, ತಿಂಗಳ ಬಾಡಿಗೆ, ಪ್ರತಿ ದಿನದ ಆದಾಯ ಮೊತ್ತ ಕೇಳಿ ಎಲ್ರೂ ಬೆಚ್ಚಿ ಬಿದ್ದಿದ್ದಾರೆ.

ಅಬ್ಬಾ.. ಇವನು ಜಗತ್ತಿನಲ್ಲೇ ಶ್ರೀಮಂತ ಭಿಕ್ಷುಕ ಕಣ್ರೀ.. ಇವನ ಹೆಸ್ರು ಭರತ್ ಜೈನ್ ಅಂತಾ. ಮುಂಬೈ ಗಲ್ಲಿ, ಗಲ್ಲಿಗಳಲ್ಲಿ ಭಿಕ್ಷೆ ಬೇಡುವ ಭರತ್ ಜೈನ್ ಕೋಟಿ, ಕೋಟಿಗೆ ಒಡೆಯ. ಪ್ರತಿದಿನ ಭಿಕ್ಷೆ ಬೇಡುವ ಈತನ ತಿಂಗಳ ಆದಾಯ ₹60,000, 75,000. ಭಿಕ್ಷೆ ಬೇಡೋದ್ರಿಂದ ಅಲ್ಲದೇ ಭರತ್ ಜೈನ್‌ಗೆ ಮುಂಬೈ ನಗರದಲ್ಲಿ ಪ್ರತಿ ತಿಂಗಳು 30,000 ಬಾಡಿಗೆಯೂ ಬರುತ್ತೆ ಅನ್ನೋದು ಮತ್ತೊಂದು ವಿಶೇಷ.

ಬಡತನದಲ್ಲೇ ಬೆಳೆದ ಭರತ್ ಜೈನ್ ಬಾಲ್ಯದಲ್ಲೇ ಶಾಲೆಗೆ ಹೋಗಿ ಓದಲು ಆಗಲಿಲ್ಲ. ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸಕ್ಕೆ ಗುಡ್‌ ಬೈ ಹೇಳಿದ ಭರತ್ ಜೈನ್ ಭಿಕ್ಷೆ ಬೇಡಿಕೊಂಡಿ ಜೀವನ ಸಾಗಿಸಿದ. ಭಿಕ್ಷೆ ಬೇಡಿ ಕೋಟಿ, ಕೋಟಿ ಸಂಪಾದಿಸಿರೋ ಭರತ್ ಜೈನ್ ಮುಂಬೈನಲ್ಲಿ ಅತಿ ದೊಡ್ಡ ಬಂಗಲೆಯನ್ನು ಹೊಂದಿದ್ದಾನೆ. ಹೆಂಡತಿ, ಇಬ್ಬರು ಮಕ್ಕಳು, ಸಹೋದರ, ತಂದೆಯ ಜೊತೆ ಐಷಾರಾಮಿಯ ಜೀವನ ಸಾಗಿಸುತ್ತಿದ್ದಾರೆ. ತಾನು ಓದಲು ಸಾಧ್ಯವಾಗದಕ್ಕೆ ಭರತ್ ಜೈನ್ ತನ್ನ ಇಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುತ್ತಿದ್ದಾನೆ.

ಇದನ್ನೂ ಓದಿ: ‘ನಾವು ಹೆಣ್ಣಾಗಬೇಕು’- ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ಅವಕಾಶ ಕೊಡಿ ಎಂದು ಬೇಡಿಕೆಯಿಟ್ಟ ಲೋಕೋ ಪೈಲಟ್​​ಗಳು

ಭರತ್ ಜೈನ್ ಮೂಲತಃ ಮುಂಬೈನವರೇ. ಮುಂಬೈನಲ್ಲೇ ಹುಟ್ಟಿ ಬೆಳೆದ ಭರತ್, ಭಿಕ್ಷೆ ಬೇಡುತ್ತಲೇ ಜೀವನದಲ್ಲಿ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದಾರೆ. ಭರತ್ ಜೈನ್ ಸದ್ಯ ಮುಂಬೈನಲ್ಲಿ 1.2 ಕೋಟಿ ರೂಪಾಯಿ ಬೆಲೆ ಬಾಳುವ 2 ಬೆಡ್‌ರೂಮ್‌ನ ಫ್ಲಾಟ್ ಹೊಂದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಬಂಡವಾಳ ಹೂಡಿಕೆ ಮಾಡಿರುವ ಭರತ್ ಜೈನ್, ಥಾಣೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಈ ಶಾಪ್‌ಗಳ ಬಾಡಿಗೆಯಿಂದಲೇ ಬರೋಬ್ಬರಿ 30 ಸಾವಿರ ರೂಪಾಯಿ ಬಾಡಿಗೆ ಗಳಿಸುತ್ತಾರೆ. ಇವನ ವಾಣಿಜ್ಯ ಮಳಿಗೆಗಳು ಮುಂಬೈನ ಪ್ರತಿಷ್ಠಿತ ಛತ್ರಪತಿ ಶಿವಾಜಿ ಟರ್ಮಿನ್ಸ್‌ ಬಳಿಯೇ ಇದೆಯಂತೆ.

ಅಂದ ಹಾಗೆ ಶ್ರೀಮಂತ ಭಿಕ್ಷುಕ ಭರತ್ ಜೈನ್ ದಿನದಲ್ಲಿ 10 ರಿಂದ 12 ಗಂಟೆವರೆಗೂ ಮುಂಬೈನ ಹಲವು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾರೆ. ಈ ಸಮಯದಲ್ಲಿ ಪ್ರತಿದಿನ 2000-2500 ರೂಪಾಯಿಗಳಿಸುತ್ತಾರೆ. ಬಹಳ ಕರುಣೆಯಿಂದ ಭಿಕ್ಷೆ ಹಾಕುವ ಮುಂಬೈ ಜನರಿಗೆ ಭರತ್ ಜೈನ್ ಖುಣಿಯಾಗಿದ್ದೇನೆ ಎನ್ನುತ್ತಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಿಕ್ಷೆ ಬೇಡಿ ₹7.5 ಕೋಟಿ ಗಳಿಸಿದ ಭೂಪ.. ಈ ಶ್ರೀಮಂತ ಭಿಕ್ಷುಕನ ಡೈಲಿ ಆದಾಯ ಎಷ್ಟು ಅಂತಾ ಕೇಳಿದ್ರೆ ನೀವು ಶಾಕ್ ಆಗ್ತೀರಾ!

https://newsfirstlive.com/wp-content/uploads/2023/07/Richest-Beggar-1.jpg

Load More