ಪುಷ್ಪ- 2 ಮೂವಿ ನೋಡುವಾಗ ಕಿವಿ ಕಚ್ಚಿದ ಮಾಲೀಕ.. FIR ದಾಖಲು, ಅಸಲಿ ಕಾರಣವೇನು?

author-image
Bheemappa
Updated On
ಪುಷ್ಪ- 2 ಮೂವಿ ನೋಡುವಾಗ ಕಿವಿ ಕಚ್ಚಿದ ಮಾಲೀಕ.. FIR ದಾಖಲು, ಅಸಲಿ ಕಾರಣವೇನು?
Advertisment
  • ತನ್ನ ಮೂವರು ಸಹಚರರ ಜೊತೆ ಹಲ್ಲೆ ಮಾಡಿರುವ ಓನರ್
  • ಥಿಯೇಟರ್​ನಲ್ಲಿ ಸಿನಿಮಾ ನೋಡುವಾಗ ಅಸಲಿಗೆ ಏನಾಯ್ತು?
  • 1000 ಕೋಟಿ ರೂಪಾಯಿ ಗಳಿಕೆ ಮಾಡಿರುವ ಪುಷ್ಪ ಸಿನಿಮಾ

ಗ್ವಾಲಿಯರ್: ಪುಷ್ಪ 2 ದಿ ರೂಲ್ ಸಿನಿಮಾವನ್ನು ನೋಡುವಾಗ ಥಿಯೇಟರ್​ ಕ್ಯಾಂಟೀನ್ ಮಾಲೀಕ, ಪ್ರೇಕ್ಷಕರೊಬ್ಬರ ಕಿವಿ ಕಿಚ್ಚಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ನಗರದ ಇಂದರ್‌ಗಂಜ್ ಪ್ರದೇಶದ ಕೈಲಾಶ್ ಥಿಯೇಟರ್​ನಲ್ಲಿ ಈ ಘಟನೆ ನಡೆದಿದೆ.

ಶಬ್ಬೀರ್ ಎನ್ನುವ ವ್ಯಕ್ತಿ ಪುಷ್ಪ 2 ಮೂವಿ ನೋಡಲೆಂದು ಥಿಯೇಟರ್​ಗೆ ಹೋಗಿದ್ದನು. ಸಿನಿಮಾದ ಅರ್ಧದಲ್ಲಿ ವಿರಾಮದ ಸಮಯದಲ್ಲಿ ಥಿಯೇಟರ್​ ಕ್ಯಾಂಟೀನ್​ಗೆ ಹೋಗಿ ರಾಜುವಿನಿಂದ ಕೆಲ ಸ್ನ್ಯಾಕ್ಸ್ ಖರೀದಿಸಿ ತಂದು ತಿನ್ನುತ್ತಿದ್ದನು. ಆದರೆ ಇದಕ್ಕೆ ಹಣ ಕೊಟ್ಟಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಥಿಯೇಟರ್​ ಒಳಗೆ ಬಂದ ರಾಜು ಶಬ್ಬೀರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಗಲಾಟೆ ಅತಿರೇಕಕ್ಕೆ ಹೋಗಿದ್ದರಿಂದ ರಾಜು ತನ್ನ ಮೂವರು ಸಹಚರರನ್ನು ಕರೆಸಿದ್ದಾನೆ.

ಇದನ್ನೂ ಓದಿ: ಖದೀಮರು ಆನ್​ಲೈನ್ ವಂಚನೆ ಹೇಗೆಲ್ಲಾ ಮಾಡುತ್ತಾರೆ.. ಟಾಪ್- 10 ಪಾಯಿಂಟ್ಸ್ ಇಲ್ಲಿವೆ

publive-image

ಎಲ್ಲರೂ ಸೇರಿ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ರಾಜು ಹಲ್ಲೆ ಮಾಡುವಾಗ ಶಬ್ಬೀರ್​ನ ಕಿವಿ ಕಚ್ಚಿದ್ದು ಗಾಯಗೊಂಡು ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು ಎಫ್​​ಐಆರ್​ನಲ್ಲಿ ಕಿವಿ ಕಚ್ಚಿದ್ದಾನೆ ಎಂದು ನಮೂದಿಸಲಾಗಿದೆ.

ಕೇವಲ 6 ದಿನದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ದೀ ರೂಲ್ 1,000 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಇದೊಂದು ದೊಡ್ಡ ಮೈಲುಗಲ್ಲಾಗಿದ್ದು ಹಿಂದಿ ಸಿನಿಮಾಗಳಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ 2021ರಲ್ಲಿ ಪಾರ್ಟ್​- 1 ರಿಲೀಸ್ ಆಗಿತ್ತು. ಇದೀಗ ಭಾಗ-2 ಪ್ರದರ್ಶನ ಕಾಣುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment