/newsfirstlive-kannada/media/post_attachments/wp-content/uploads/2025/02/cumin_WATER.jpg)
ಬಹುತೇಕ ನಗರ ವಾಸಿಗಳು ಕುಳಿತಲ್ಲೇ ಹೆಚ್ಚಿನ ಕೆಲಸ ಮಾಡುವುದರಿಂದ ಹೊಟ್ಟೆಯಲ್ಲಿನ ಆಹಾರ ಕರಗುವುದು ಬಹುತೇಕ ಕಡಿಮೆ. ಇದಕ್ಕಾಗಿ ವಾಕಿಂಗ್, ವ್ಯಾಯಾಮ, ಯೋಗಾಸನ ಮಾಡಿದರೂ ಹೊಟ್ಟೆಯ ಅಜೀರ್ಣ ಕಾಡುತ್ತಲಿರುತ್ತದೆ. ತಜ್ಞ ವೈದ್ಯರ ಬಳಿಗೆ ಹೋಗಿ ಬಂದರೂ ಪರಿಹಾರ ಸಿಗಲ್ಲ. ಯಾರಿಗೆ ಅಜೀರ್ಣ ಕಾಡುತ್ತಿದೆಯೋ ಅವರು ಈ ರೀತಿ ಮಾಡಿದ್ರೆ ನಿಮ್ಮ ಹೊಟ್ಟೆಯಲ್ಲಿನ ಆಹಾರ ಜೀರ್ಣವಾಗುವುದು ಪಕ್ಕಾ.
ಜೀರಿಗೆ ನೀರನ್ನು ಕುಡಿಯುವುದರಿಂದ ದೇಹವನ್ನು ತಂಪಾಗಿಡುವ ಜೊತೆಗೆ ಜೀರ್ಣ ಕ್ರಿಯೆಯನ್ನು ಸುಲಭವಾಗುತ್ತದೆ. ಮಲಬದ್ಧತೆ ಸೇರಿದಂತೆ ನಿರ್ಜಲೀಕರಣ, ಆಹಾರದ ನಾರಿನ ಕೊರತೆಯನ್ನು ಈ ಜೀರಿಗೆ ನೀರು ಪರಿಹಾರವಾಗಲಿದೆ. ಜೀರಿಗೆಯನ್ನು ಅಡುಗೆಯಲ್ಲಿ ಬಳಸುವುದು ಸಾಮಾನ್ಯ. ಇದರಲ್ಲಿ ಆಹಾರದ ನಾರಿನಾಂಶ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ ಜೊತೆಗೆ ಹಲವಾರು ಆರೋಗ್ಯದ ಲಾಭವೂ ಆಗಿದೆ.
ಒಂದು ಲೋಟ ಜೀರಿಗೆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಆ ದಿನವು ತುಂಬಾ ಪರಿಣಾಮಕಾರಿ ಆಗಿರುತ್ತದೆ. ಆರೋಗ್ಯವಾಗಿಯೂ ಇರಬಹುದು. ಅಜೀರ್ಣ ಎನ್ನುವುದು ನಿಮ್ಮಿಂದ ದೂರವಾಗುವುದು ಖಂಡಿತ. ಜೀರಿಗೆ ನೀರಿನಿಂದ ಏನೇನು ಲಾಭ ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ.
/newsfirstlive-kannada/media/post_attachments/wp-content/uploads/2025/02/cumin.jpg)
ಒಂದು ಲೋಟ ನೀರು ಹಾಗೂ ಒಂದು ಸ್ಪೂನ್ ಜೀರಿಗೆಯನ್ನು ಉಗುರು ಬೆಚ್ಚಗಿನ ರೀತಿ ಬಿಸಿ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅಜೀರ್ಣತೆ ನಿವಾರಣೆ ಆಗುತ್ತದೆ. ಮಲಬದ್ಧತೆ ತೊಂದರೆಗಳು ಇರುವುದಿಲ್ಲ. ಅಥವಾ ರಾತ್ರಿ ಒಂದು ಲೋಟದಲ್ಲಿ ಒಂದು ಸ್ಪೂನ್ ಜೀರಿಗೆ ಹಾಕಿ ಇಟ್ಟು ಬೆಳಗ್ಗೆ ಕುಡಿಯಬಹುದು.
ಜೀರಿಗೆ ನೀರು ಕುಡಿಯುವುದರಿಂದ ಬಹಳ ಸಮಯ ಟಾಯ್ಲೆಟ್​ನಲ್ಲಿ ಕೂರುವುದು ಬೇಕಿಲ್ಲ. ಜೀರಿಗೆಯು ದೇಹದಲ್ಲಿನ ವಿಷವನ್ನು ಹೊರಗೆ ಹಾಕುವುದರ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಕೆಲ ಸಮಸ್ಯೆಗಳಾದ ಅಸಿಡಿಟಿ, ವಾಕರಿಕೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ನಿವಾರಣೆ ಆಗುತ್ತದೆ.
ಇದನ್ನೂ ಓದಿ: ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಲಾಭಗಳಿವೆ: ನಿಮಗೆ ಗೊತ್ತಿರದ ವಿಷಯ ಇಲ್ಲಿವೆ!
ಜೀರಿಗೆಯಲ್ಲಿ ಉನ್ನತವಾದ ವಿಟಮಿನ್ ಎ ಹಾಗೂ ಸಿ ಇದೆ. ಇವುಗಳು ಆಂಟಿಆಕ್ಸಿಡೆಂಟ್​ ಆಗಿ ಕೆಲಸ ಮಾಡಿ ಸೋಂಕು ವಿರುದ್ಧ ಹೋರಾಡುತ್ತವೆ.
ಜೀರಿಗೆಯು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮವಾಗಿಡುವುದರ ಜತೆಗೆ ಪ್ರತಿರೋಧಕ ಶಕ್ತಿಯನ್ನು ಉಂಟು ಮಾಡುತ್ತದೆ. ಕಬ್ಬಿನಾಂಶ ಮತ್ತು ಆಹಾರದ ನಾರಿನಾಂಶವನ್ನು ಹೊಂದಿದೆ.
ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿ ಇರುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ನಡೆಯುವುದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗಲಿದೆ.
ಜೀರಿಗೆಯಲ್ಲಿ ಕ್ಯಾಲರಿ ಕಡಿಮೆ ಇರುತ್ತದೆ. ದೇಹದ ಒಳಗೆ ಚಯಾಪಚಯವನ್ನು ಹೆಚ್ಚಿಸುವ ಮೂಲಕ ಕ್ಯಾಲರಿ ದಹಿಸುವಂತೆ ಮಾಡುತ್ತದೆ. ಇದು ವೇಗವಾಗಿ ದೇಹದ ತೂಕವನ್ನು ಇಳಿಸಲು ಸಹಕಾರಿಯಾಗುತ್ತದೆ.
ಕಫಗಟ್ಟುವುದನ್ನು ನಿವಾರಿಸುವಂತ ಅಂಶ ಜೀರಿಗೆಯಲ್ಲಿದೆ. ಉಸಿರಾಟದ ವ್ಯವಸ್ಥೆ ಸುಧಾರಿಸಿ ಕಫ ಕಟ್ಟುವುದುನ್ನು ತಡೆಯುವುತ್ತದೆ. ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣ ಹೊಂದಿರುವಂತಹ ಜೀರಿಗೆಯು ಉಸಿರಾಟದ ಸಮಸ್ಯೆಗೆ ಪರಿಣಾಮಕಾರಿ ಮನೆ ಮದ್ದು ಆಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us