/newsfirstlive-kannada/media/post_attachments/wp-content/uploads/2024/10/MANGO-LEAF-2.jpg)
ಮಾವು ಹಣ್ಣುಗಳ ರಾಜ ಎಂದೇ ನಮ್ಮ ದೇಶದಲ್ಲಿ ಕರೆಯಲಾಗುತ್ತದೆ. ಅದು ಬರುವ ಸೀಸನ್​ಗಾಗಿಯೇ ಅದೆಷ್ಟೊ ಜನರು ಕಾದು ಕುಳಿತಿರುತ್ತಾರೆ. ಅದರ ಸವಿಯನ್ನು ಸವಿಯಲು ಕಾತರದಿಂದ ಕಾಯುತ್ತಿರುತ್ತಾರೆ. ಇನ್ನು ಮಾವಿನ ಮರವನ್ನು ಕೂಡ ನಾವು ಅನೇಕ ಕಾರಣಗಳಿಂದ ಪೂಜ್ಯ ಭಾವನೆಯಲ್ಲಿ ನೋಡುತ್ತೇವೆ. ಹಬ್ಬ, ಹರಿದಿನ, ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆದಾಗ ಅದರ ಎಲೆಯಿಂದಲೇ ತೋರಣ ಮಾಡಿ ಬಾಗಿಲಿಗೆ ಹಾಕುತ್ತೇವೆ. ಆದರೆ ಆ ಮಾವಿನ ಎಲೆಯಿಂದ ಎಷ್ಟು ಆರೋಗ್ಯದ ಪ್ರಯೋಜನಗಳಿವೆ ಅನ್ನೋದು ಬಹುತೇಕ ಜನರಿಗೆ ಗೊತ್ತಿಲ್ಲ. ಮಾವಿನ ಎಲೆಯಲ್ಲಿ ಸಕ್ಕರೆ ರೋಗ ನಿಯಂತ್ರಣ ಮಾಡುವ ಶಕ್ತಿಯಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳನ್ನೂ ಕೂಡ ದೂರ ಮಾಡುವ ಔಷಧಿಯ ಗುಣವಿದೆ.
ಇದನ್ನೂ ಓದಿ:ಏನಿದು ಸದ್ದು ಮಾಡುತ್ತಿರುವ ಮಿತವಾದ ಮದ್ಯಪಾನದ ಟ್ರೆಂಡ್? ಭಾರತಕ್ಕೆ ಈ ಪದ್ಧತಿ ಒಗ್ಗುತ್ತಾ?
/newsfirstlive-kannada/media/post_attachments/wp-content/uploads/2024/10/MANGO-LEAF-1.jpg)
ಮಾವಿನ ಎಲೆಯಲ್ಲಿ ಅತ್ಯಂತ ಶ್ರೀಮಂತ ಪೋಷಕಾಂಶಗಳು ಎನಿಸಿಕೊಳ್ಳುವ ವಿಟಮಿನ್ ಸಿ, ಬಿ ಹಾಗೂ ಎಗಳಿವೆ ಎಂದರೆ ನೀವು ನಂಬಲೇಬೇಕು. ಮಾವಿನ ಎಲೆಗಳನ್ನು ನಾವು ಜ್ಯೂಸ್ ಮಾಡಿಕೊಂಡು ಸೇವಿಸುವುದರಿಂದ, ಇಲ್ಲವೇ ಪುಡಿ ಮಾಡಿ ಸೇವಿಸುವುದರಿಂದ ತುಂಬಾ ಲಾಭಗಳು ಇವೆ. ಅದರಲ್ಲಿ ನಮ್ಮ ದೇಹದಲ್ಲಿನ ಇನ್ಸೂಲೀನ್ ಪ್ರೊಡಕ್ಷನ್ ಹೆಚ್ಚು ಮಾಡುವ ಶಕ್ತಿ ಇದೆ. ಹೀಗಾಗಿ ಇದು ಸಕ್ಕರೆ ಕಾಯಿಲೆಯನ್ನು ಸರಳವಾಗಿ ನಿಯಂತ್ರಿಸುತ್ತದೆ. ಸಕ್ಕರೆ ರೋಗ ಆರಂಭಿಕ ಹಂತದಲ್ಲಿದ್ದಾಗ ಈ ಮಾವಿನ ಎಲೆಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
ಮಾವಿನ ಎಲೆಗಳಲ್ಲಿ ಆ್ಯಂಟಿಆಕ್ಸಿಡಂಟ್​ನಂತಹ ಅಂಶಗಳಿದ್ದು ಇವು ರಕ್ತನಾಳವನ್ನು ಶಕ್ತಿಯುತಗೊಳಿಸುತ್ತವೆ. ಇದರಿಂದ ಬಿಪಿ ಅಂದ್ರೆ ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರ ಇರಬಹುದು. ಹೃದಯ ಸಂಬಂಧಿ ಕಾಯಿಲೆಗಳಿಂದಲೂ ಕೂಡ ದೂರ ಇರಬಹುದು.ಮಾವಿನ ಎಲೆ ಸೇವಿಸುವುದರಿಂದ ಚಯಾಪಚಯ ಕ್ರಿಯೆಯೂ ಸರಳವಾಗುತ್ತದೆ. ತೂಕ ಇಳಿಸಬೇಕು ಎಂದು ನಿರ್ಧರಿಸಿದವರು ಮಾವಿನ ಎಲೆಗಳ ಬಳಕೆ ಉತ್ತಮ ಎಂದು ಹೇಳಲಾಗುತ್ತದೆ. ಇದು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕರಗಿಸುವಲ್ಲಿ ತುಂಬಾ ಸಹಾಯಕವಾಗುತ್ತದೆ.
/newsfirstlive-kannada/media/post_attachments/wp-content/uploads/2024/10/MANGO-LEAF.jpg)
ಇದನ್ನೂ ಓದಿ:ಗಂಡಂದಿರಿಗಾಗಿ ಈ ಏಳು ಗುಟ್ಟುಗಳು; ಈ ಮಾತುಗಳನ್ನು ನಿಮ್ಮ ಪತ್ನಿಯೆದರು ಹೇಳಲೇಬೇಡಿ!
ಉಸಿರಾಟದ ತೊಂದರೆ ಇದ್ದವರಿಗೆ ಮಾವಿನ ಎಲೆಯನ್ನು ಸೇವಿಸುವಂತೆ ಹೇಳಲಾಗುತ್ತದೆ. ಅಸ್ತಮಾ, ಶೀತದಿಂದ ಬಳಲುತ್ತಿದ್ದವರು ಮಾವಿನ ಎಲೆಯನ್ನು ಬಳಸುವುದರಿಂದ ಸಂಪೂರ್ಣ ಗುಣಮುಖರಾಗುತ್ತಾರೆ. ಥ್ರೋಟ್ ಇನ್ಫೆಕ್ಷನ್​ನಂತಹ ಸಮಸ್ಯೆಗಳಿಗೂ ಕೂಡ ಮಾವಿನ ಎಲೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಪಚನ ಕ್ರಿಯೆ ಉತ್ತಮವಾಗಲು, ಊರಿಯೂತದಂತಹ ಸಮಸ್ಯೆಗಳು, ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಮಾವಿನ ಎಲೆ ತುಂಬಾ ಸಹಾಯಕಾರಿ ಎಂದೇ ಹೇಳಲಾಗುತ್ತದೆ. ಮಾವಿನ ಹಣ್ಣು ಮಾತ್ರವಲ್ಲ ಮಾವಿನ ಎಲೆಯೂ ಕೂಡ ಅದರಷ್ಟೇ ಆರೋಗ್ಯಕರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us