/newsfirstlive-kannada/media/post_attachments/wp-content/uploads/2024/11/Guruprasad-Problems.jpg)
ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇ*ಣು ಹಾಕಿಕೊಂಡು ಜೀವ ಕಳೆದುಕೊಂಡಿರುವ ಗುರುಪ್ರಸಾದ್ ಒಬ್ಬ ಅಪ್ಪಟ ಪ್ರತಿಭಾವಂತ ನಿರ್ದೇಶಕ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಅದ್ಭುತ ಬರಹಗಾರ, ಓದುಗ, ಶ್ರಮಜೀವಿ ಹೀಗೆ ಹಲವು ಆಯಾಮಗಳಲ್ಲಿ ಜನರಿಗೆ ಗುರುಪ್ರಸಾದ್ ಪರಿಚಯವಿದೆ. ಆದ್ರೆ ಅದರಾಚೆಯೂ ಗುರುಪ್ರಸಾದ್ರದ್ದು ಒಂದು ಬದುಕು ಇತ್ತು. ಅವರನ್ನು ಅಸಲಿಗೆ ತಿಂದು ಹಾಕಿದ್ದೇ ಆರ್ಥಿಕ ಸಂಕಷ್ಟ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಬೆಳ್ಳಿ ತೆರೆಯ ಜೊತೆಗೆ ಕಿರು ತೆರೆಯಲ್ಲಿಯೂ ಗುರುತಿಸಿಕೊಂಡಿದ್ದ ಗುರು; ಹೇಗಿತ್ತು ಕಿರುತೆರೆಯ ಜರ್ನಿ?
ಗುರುಪ್ರಸಾದ್ ಜೀವ ಕಳೆದುಕೊಳ್ಳಲು,ಇಂತಹ ದುರಂತವೊಂದಕ್ಕೆ ಕಾರಣವಾಗಲು ಹಲವು ಕಾರಣಗಳಿವೆ. ಕಳೆದ ಕೆಲವು ವರ್ಷಗಳಿಂದ ಗುರುಪ್ರಸಾದ್ ವಿಪರೀತ ಎನ್ನುವಷ್ಟು ಆರ್ಥಿಸ ಸಂಕಷ್ಟ ಎದುರಿಸುತ್ತಿದ್ದರು ಎಂದು ಸದ್ಯ ಹೇಳಲಾಗುತ್ತಿದೆ. ಸಾಲು ಸಾಲು ಸಿನಿಮಾಗಳ ಸೋಲುವ ಅವರನ್ನು ಕಂಗೆಡಿಸಿತ್ತು. ಹಲವು ಚಟಗಳಿಗೆ ಗುರುಪ್ರಸಾದ್ ದಾಸರಾಗಿ ಹೋಗಿದ್ದರು ಎಂದು ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವರೇ ಹೇಳುತ್ತಾರೆ. ಅವರ ಸಿನಿಮಾಗಳಿಂದ ಹಲವಾರು ನಿರ್ಮಾಪಕರಿಗೂ ಕೂಡ ಭಾರೀ ನಷ್ಟ ಉಂಟಾಗಿದ್ದರ ಬಗ್ಗೆ ಮಾಹಿತಿಗಳಿವೆ.
ಇದನ್ನೂ ಓದಿ:ನಿರ್ದೇಶಕ ಗುರುಪ್ರಸಾದ್ ಯಾವ್ಯಾವ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು..?
ಇದು ಮಾತ್ರವಲ್ಲ ಗುರು ಪ್ರಸಾದ್, ಒಂದೇ ವರ್ಷದಲ್ಲಿ ಮೂರು ಮನೆ ಬದಲಿಸಿದ್ದರು. ಸಾಲಗಾರರ ಕಾಟಕ್ಕೆ ಪದೇ ಪದೇ ಮನೆ ಚೇಂಜ್ ಮಾಡ್ತಿದ್ರು. ಗುರುಪ್ರಸಾದ್ ವಿರುದ್ಧ ಹಲವರಿಂದ ಪೊಲೀಸ್ ಕಂಪ್ಲೆಂಟ್ ಕೂಡ ದಾಖಲಾಗಿದ್ದವು. ಬಸವೇಶ್ವರನಗರ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಗುರುಪ್ರಸಾದ್ ನಂತರ ಜಯನಗರದ ಕನಕಪಾಳ್ಯದ ಬಳಿ ವಾಸವಾಗಿದ್ದರು. ನಂತರ ಕೆಲ ದಿನಗಳ ಕಾಲ ಹೋಟೆಲ್ನಲ್ಲೂ ರೂಮ್ ಮಾಡಿದ್ದರು. ಕೆಲವೇ ತಿಂಗಳ ಹಿಂದೆಯಷ್ಟೇ ಹೆವೆನ್ ಅಪಾರ್ಟ್ಮೆಂಟ್ಗೆ ಗುರುಪ್ರಸಾದ್ ಶಿಫ್ಟ್ ಆಗಿದ್ದರು. ಅಚ್ಚರಿ ಅಂದ್ರೆ ಫ್ಲ್ಯಾಟ್ ಬಗ್ಗೆ ಯಾರಿಗೂ ಕೂಡ ಹೆಚ್ಚಿನ ಮಾಹಿತಿ ನೀಡಿರಲಿಲ್ಲವಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ