Advertisment

‘ರಾಜೀನಾಮೆ ಯಾಕೆ ಕೊಡಬೇಕು’- ಗವರ್ನರ್‌ ಪ್ರಾಸಿಕ್ಯೂಷನ್‌ಗೆ ಸಿಎಂ ಸಿದ್ದರಾಮಯ್ಯ ಖಡಕ್ ರಿಯಾಕ್ಷನ್!

author-image
Gopal Kulkarni
Updated On
‘ರಾಜೀನಾಮೆ ಯಾಕೆ ಕೊಡಬೇಕು’- ಗವರ್ನರ್‌ ಪ್ರಾಸಿಕ್ಯೂಷನ್‌ಗೆ ಸಿಎಂ ಸಿದ್ದರಾಮಯ್ಯ ಖಡಕ್ ರಿಯಾಕ್ಷನ್!
Advertisment
  • ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಸಿದ್ದು ಫಸ್ಟ್ ರಿಯಾಕ್ಷನ್
  • ‘ರಾಜ್ಯಪಾಲರಿಂದ ಈ ನಡೆಯನ್ನು ನಿರೀಕ್ಷಿಸಿರಲಿಲ್ಲ, ಇದೊಂದು ಷಡ್ಯಂತ್ರ’
  • ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯ ನಂತರ ಸಿದ್ದು ಹೇಳಿದ್ದೇನು?

ಬೆಂಗಳೂರು: ಮುಡಾ ಹಗರಣದ ವಿಚಾರದಲ್ಲಿ ಸಿಎಂ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡದ ಬಳಿಕ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಾಜೀನಾಮೆ ನೀಡುವ ಮಾತೇ ಇಲ್ಲ ಎಂದಿದ್ದಾರೆ.

Advertisment

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಡಬಲ್ ಶಾಕ್‌.. ಭೇಟಿಗೆ ರಾಜ್ಯಪಾಲರ ನಿರಾಕರಣೆ; ದೂರುದಾರರಿಂದ ಕೇವಿಯಟ್!

ನಗರದ ಅರಮನೆ ಮೈದಾನದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮ ಮುಗಿಸಿ ಹೊರಟ ಸಿಎಂ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿ ಹಾಗೂ ಜೆಡಿಎಸ್ ಸೇರಿ ನನ್ನ ವಿರುದ್ಧ ಷಡ್ಯಂತ್ರ ಮಾಡಿವೆ. ರಾಜಭವನ ರಾಜಕೀಯ ದಾಳವಾಗಿ ಉಪಯೋಗಿಸಲ್ಪಟ್ಟಿದೆ. ನಾನು ರಾಜೀನಾಮೆ ನೀಡುವ ಮಾತೇ ಇಲ್ಲ, ಕಾಂಗ್ರೆಸ್ ಹೈಕಮಾಂಡ್ ಮತ್ತು ಶಾಸಕರು, ಸಚಿವರು ನನ್ನ ಪರವಾಗಿ ಇದ್ದಾರೆ. ಕಾನೂನಾತ್ಮಕ ಹೋರಾಟ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ:ಸಿಎಂಗೆ ಕಾನೂನು ಸಂಕಷ್ಟ.. ದೆಹಲಿಯಿಂದ ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ದಿಢೀರ್ ಭೇಟಿ: ಮುಂದೇನು?

Advertisment

ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದರು. ಇದರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಜೀನಾಮೆ ನೀಡುವ ಮಾತೇ ಇಲ್ಲ. ಇದರಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ತಪ್ಪುಗಳು ಕೂಡ ಇವೆ, ಇದು ನನ್ನ ಮೇಲೆ ನಡೆದಿರುವ ಷಡ್ಯಂತ್ರ, ರಾಜ್ಯಪಾಲರಿಂದ ಈ ನಡೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

ನನಗೆ ಮೊದಲುನ ಶೋಕಾಸ್ ನೋಟಿಸ್ ನೀಡಿದಾಗಲೇ ನಾನು ಇದನ್ನು ನಿರೀಕ್ಷೆ ಮಾಡಿದ್ದೆ. ನಿರಾಣಿ, ಜೊಲ್ಲೆ, ರೆಡ್ಡಿ ಹಾಗೂ ಹೆಚ್​​ಡಿಕೆ ಮೇಲೆಯೂ ಪ್ರಾಸಿಕ್ಯೂಷನ್ ಬಾಕಿ ಇವೆ. ಅವರನ್ನು ಬಿಟ್ಟು ನನಗೆ ಕೊಟ್ಟಿದ್ದೇಕೆ ? ನಾನು ಕಾನೂನು ಅಡಿಯಲ್ಲಿ ಹೋರಾಟ ಮಾಡುತ್ತೇನೆ, ಅನೇಕ ರಾಜ್ಯಗಳಲ್ಲಿ ಸರ್ಕಾರ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಇಲ್ಲೂ ಹಾಗೆ ಮಾಡುತ್ತಿದ್ದಾರೆ. ರಾಜ್ಯಪಾಲರ ನಿರ್ಧಾರ ಸಂವಿಧಾನ ಬಾಹಿರ , ಹೀಗಾಗಿ ಕೋರ್ಟ್​ನಲ್ಲಿ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸುತ್ತೇವೆ, ರಾಜೀನಾಮೆ ಕೊಡುವ ತಪ್ಪು ಮಾಡಿಲ್ಲ ಎಂದು  ಸಿಎಂ ಸಿದ್ದರಾಮಯ್ಯ ಖಡಕ್ ಪ್ರತಿಕ್ರಿಯೆನ್ನು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment