9 ದೇಶಗಳಲ್ಲಿ ಹರಿದು ಹೋಗುತ್ತದೆ ಈ ನದಿ.. ಆದರೂ ಕೂಡ ಒಂದೇ ಒಂದು ಸೇತುವೆ ಕಟ್ಟಿಲ್ಲ ಏಕೆ?

author-image
Gopal Kulkarni
Updated On
9 ದೇಶಗಳಲ್ಲಿ ಹರಿದು ಹೋಗುತ್ತದೆ ಈ ನದಿ.. ಆದರೂ ಕೂಡ ಒಂದೇ ಒಂದು ಸೇತುವೆ ಕಟ್ಟಿಲ್ಲ ಏಕೆ?
Advertisment
  • ಜಗತ್ತಿನ ಅತಿದೊಡ್ಡ ನದಿಗೆ ಒಂದೇ ಒಂದು ಸೇತುವೆಯಿಲ್ಲ ಕಾರಣವೇನು?
  • 9 ದೇಶಗಳಲ್ಲಿ ನಿರಂತರವಾಗಿ ಹರಿಯುವ ನದಿಗೆ ಸೇತುವೆ ಕಟ್ಟಿಲ್ಲವೇಕೆ ಗೊತ್ತಾ?
  • ಈ ನದಿಯ ಮಣ್ಣು ಹಾಗೂ ದಟ್ಟ ಕಾಡುಗಳು ಸೇತುವೆ ಕಟ್ಟಲು ದೊಡ್ಡ ಅಡ್ಡಿ

ಅಮೆಜಾನ್ ನದಿ ಜಗತ್ತಿನ ಅತಿದೊಡ್ಡ ಶುದ್ಧ ನೀರು ಹೊಂದಿರುವ ನದಿ ಎಂದು ಕರೆಯಲಾಗುತ್ತದೆ. ಇದು ಒಟ್ಟು 9 ದೇಶಗಳಲ್ಲಿ ಹರಿಯುತ್ತದೆ.ಕೋಟ್ಯಾಂತರ ಜನರ ದಾಹವನ್ನು ನೀಗಿಸುತ್ತದೆ.ಭೂಮಿಗೆ ನೀರು ಒದಗಿಸುತ್ತದೆ. ಈ ಒಂದು ಅಮೆಜಾನ್ ನದಿ ಈಗಾಗಲೇ ಹೇಳಿದಂತೆ 9 ದೇಶಗಳ ನಡುವೆ ಹಾದು ಹೋಗುತ್ತದೆ. ಬ್ರೆಜಿಲ್, ಪೇರು, ಬೊಲಿವಿಯಾ, ಕೊಲಂಬಿಯಾ, ವೆನುಜುವೆಲಾ, ಎಕುಡೊರಾ,ಗಯಾನಾ ಮತ್ತು ಸುರಿನಾಮಾ ದೇಶಗಳಲ್ಲಿ ಹರಿಯುತ್ತದೆ.

ಈ 9 ದೇಶಗಳಲ್ಲಿ ಹರಿಯುವ ಈ ನದಿ ಅಮೆರಿಕಾದ ಮಹಾದ್ವೀಪದಲ್ಲಿಯೂ ಹರಿಯುತ್ತದೆ. ಪೇರುವಿನ ಎಂಡಿಸ್​ ಪರ್ವತಗಳಲ್ಲಿ ಹರಿಯುವ ಈ ನದಿ ಅಂಟ್ಲಾಂಟಿಕಾ ಮಹಾಸಾಗರವನ್ನು ಹೋಗಿ ಸೇರುತ್ತದೆ. ಜಗತ್ತಿನ ಅತಿದೊಡ್ಡ ನದಿ, ಪರಿಶುದ್ಧ ಕುಡಿಯುವ ನೀರನ್ನು ಒದಗಿಸುವ ಈ ಅಮೆಜಾನ್​ ನದಿಯ ಒಟ್ಟು ಉದ್ದ ಸುಮಾರು 6800 ಕಿಲೋ ಮೀಟರ್​, ಮತ್ತು ಇದರ ಅಗಲ 11 ಕಿಲೋ ಮೀಟರ್ ಎಂದು ಹೇಳಲಾಗುತ್ತದೆ.

publive-image

ಇಷ್ಟು ದೇಶಗಳಲ್ಲಿ ಹರಿಯುವ ಈ ನದಿಗೆ ಇಂದಿಗೂ ಕೂಡ ಯಾವ ದೇಶದಲ್ಲಿಯೂ ಕೂಡ ಸೇತುವೆ ಕಟ್ಟುವ ಕೆಲಸವನ್ನು ಮಾಡಿಲ್ಲ. ಇದಕ್ಕೆ ಸೇತುವೆ ಕಟ್ಟುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿ ಇಂದಿಗೂ ಕೂಡ ನಿಂತಿದೆ. ಇದಕ್ಕೆ ಪ್ರಮುಖ ಕಾರಣ ಅಮೆಜಾನ್ ನದಿಯ ತಟದಲ್ಲಿರುವ ಮಣ್ಣು. ಅತಿಯಾದ ಮೃದುವಾದ ಮಣ್ಣನ್ನು ಈ ನದಿಯ ತಟವು ಹೊಂದಿರುವುದರಿಂದ ಇಲ್ಲಿ ಸೇತುವೆ ಕಟ್ಟುವುದು ಅಪಾಯಕಾರಿ ಅಷ್ಟೇ ಸವಾಲಿನ ಕೆಲಸವೇ ಸರಿ. ಅದು ಅಲ್ಲದೇ ಅಮೆಜಾನ್ ನದಿ ಅತ್ಯಂತ ದಟ್ಟ ಕಾಡುಗಳಲ್ಲಿ ಸಾಗುವುದರಿಂದ ಈ ನದಿಗೆ ಸೇತುವೆ ನಿರ್ಮಾಣ ಮಾಡುವುದು ಅಷ್ಟು ಸರಳವಲ್ಲ .

ಇದನ್ನೂ ಓದಿ:ಇವು ಜಗತ್ತಿನಲ್ಲಿಯೇ ನಡೆದ ಅತಿ ಸುದೀರ್ಘ ಯುದ್ಧಗಳು; ಸತತ 604 ವರ್ಷ ನಡೆದ ಆ ಯುದ್ಧ ಯಾವುದು ?

ಇನ್ನು ಸೇತುವೆ ಕಟ್ಟಲು ಸಾಧ್ಯವಾಗದಿರಲು ಮತ್ತೊಂದು ಕಾರಣ ಅಂದ್ರೆ ಈ ನದಿಯ ಪದೇ ಪದೇ ತನ್ನ ಹರಿಯುವ ಮಾರ್ಗವನ್ನು ಬದಲಿಸುತ್ತದೆ. ಇನ್ನು ಅಮೆಜಾನ್​ ನದಿಗೆ ಸೇತುವೆ ಕಟ್ಟುವ ಅನಿವಾರ್ಯವೂ ಕೂಡ ಇಲ್ಲ ಏಕೆಂದರೆ ಇದು ಅತಿ ಕಡಿಮೆ ಜನಸಂಖ್ಯೆ ಇರುವ ದೇಶಗಳ ನಡುವೆ ಹರಿಯುತ್ತದೆ ಮತ್ತು ದಟ್ಟ ಕಾಡು ಹಾಗೂ ಬೆಟ್ಟಗುಡ್ಡಗಳ ಮೇಲೆ ಹರಿಯುತ್ತದೆ ಹೀಗಾಗಿ ಇದಕ್ಕೆ ಸೇತುವೆ ಕಟ್ಟುವ ಅನಿವಾರ್ಯತೆ ಸೃಷ್ಟಿಯಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment