/newsfirstlive-kannada/media/post_attachments/wp-content/uploads/2025/03/BHIMA-AND-HIDAMBA-1.jpg)
ನಮಗೆ ಭಾರತದಲ್ಲಿ ಎಲ್ಲಾ ಕಡೆ ರಾಮಾಯಣ ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ದೇಗುಲಗಳು ಕಾಣ ಸಿಗುತ್ತವೆ. ಆ ಪುರಾಣಗಳಲ್ಲಿ ಬರುವ ಪುಣ್ಯ ಪುರುಷರ ದೇವಸ್ಥಾನಗಳು ಕೂಡ ಸಿಗುತ್ತವೆ. ನೀವು ದೇಶದ ಅನೇಕ ಕಡೆ ರಾಮ, ಲಕ್ಷ್ಮಣ, ಸೀತೆ, ಹನುಮಂತನ ದೇವಸ್ಥಾನಗಳು ಪ್ರತಿ ಬೀದಿ ಪ್ರತಿ ಗಲ್ಲಿಯಲ್ಲೂ ಸಿಗುತ್ತವೆ. ಇನ್ನೂ ಕೃಷ್ಣನ ದೇವಸ್ಥಾನಗಳು ಅಷ್ಟೇ ನಮಗೆ ಎಲ್ಲಾ ಕಡೆ ನೋಡಲು ಸಿಗುತ್ತವೆ. ದ್ರೌಪದಿಯ ದೇವಾಲಯಗಳು ಇವೆ. ಆದ್ರೆ ಮಹಾಭಾರತದಲ್ಲಿ ಬರುವ ಭೀಮ ಹಾಗೂ ಹಿಡಂಬಾರ ದೇವಸ್ಥಾನ ನೀವು ಎಲ್ಲಿಯಾದರೂ ನೋಡಿದ್ದೀರಾ? ಇಂತಹ ದೇವಸ್ಥಾನ ಇರಲು ಸಾಧ್ಯವಾ? ಮಾನವ ದಾನವರ ನಡುವಿನ ವಿವಾಹವದು. ಆ ಜೋಡಿಯನ್ನು ಪೂಜಿಸಲು ಸಾಧ್ಯವಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದ್ರೆ ಅಂತಹದೊಂದು ಏಕೈಕ ದೇವಸ್ಥಾನ ಭಾರತದಲ್ಲಿದೆ.
ಇಂತಹದೊಂದು ಮಂದಿರ ರಾಜಸ್ಥಾನದ ರಾಜಧಾನಿ ಜೈಪುರದಿಂದ ಸುಮಾರು 85 ಕಿಲೋಮೀಟರ್ ದೂರದಲ್ಲಿರುವ ವಿರಾಟನಗರದ ಪಂಚಖಂಡ ಪರ್ವತದಲ್ಲಿ ಕಾಣ ಸಿಗುತ್ತದೆ. ಪಾಂಡವರು ತಮ್ಮ ಅಜ್ಞಾತವಾಸ ಕಾಲದಲ್ಲಿ ಕೆಲವು ದಿನಗಳನ್ನು ಇಲ್ಲಿಯೇ ಕಳೆದಿದ್ದರು ಎಂಬ ಉಲ್ಲೇಖಗಳು ಇವೆ. ಇದೇ ಸಮಯದಲ್ಲಿ ಭೀಮಸೇನನ ಪತ್ನಿ ಹಿಡಂಬೆಯೂ ಕೂಡ ಇಲ್ಲಿಯೇ ಕೆಲವು ದಿನಗಳ ಕಾಲ ಇದ್ದಳು ಎಂಬ ನಂಬಿಕೆಯೂ ಕೂಡ ಇದೆ.
/newsfirstlive-kannada/media/post_attachments/wp-content/uploads/2025/03/BHIMA-AND-HIDAMBA-2.jpg)
ಈ ಮಂದಿರದ ಪೀಠಾಧಿಕಾರಿ ಆಚಾರ್ಯ ಸೋಮೇಂದ್ರನಾಥ್ ಅವರು ಹೇಳುವ ಪ್ರಕಾರ ದೇಶದಲ್ಲಿ ಈ ಒಂದು ಪ್ರದೇಶದಲ್ಲಿ ಮಾತ್ರ ಭೀಮಸೇನ ಹಾಗೂ ಹಿಡಂಬಾಳ ದೇವಸ್ಥಾನವಿದೆ. ಇದರ ಹೊರತಾಗಿ ದೇಶದ ಯಾವ ಮೂಲೆಯಲ್ಲಿಯೂ ಕೂಡ ಇಂತಹ ದೇವಸ್ಥಾನ ನೋಡಲು ಸಿಗುವುದಿಲ್ಲ. ಇಲ್ಲಿ 11 ಅಡಿ ಎತ್ತರದ ಭೀಮಸೇನನ ಹಾಗೂ 6 ಅಡಿ ಎತ್ತರದ ಹಿಡಂಬೆ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಮಹಾಭಾರತದಲ್ಲಿ ಭೀಮನ ಎತ್ತರವು ಸುಮಾರು 11 ಅಡಿ ಇತ್ತು ಎಂದು ಉಲ್ಲೇಖವಾಗಿದೆ. ಹೀಗಾಗಿ ಅದೇ ಎತ್ತರದ ಪ್ರಮಾಣದ ಭೀಮನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪನೆಗೊಂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿವೆ ಅತ್ಯಂತ ನಿಗೂಢ ಶಕ್ತಿಯ 3 ಕಾಡುಗಳು.. ಇಲ್ಲಿಗೆ ಹೋಗಲು ಜನ ಬೆಚ್ಚಿ ಬೆವರುವುದು ಯಾಕೆ?
ಪಂಚಖಂಡ ಪರ್ವತದಲ್ಲಿರುವ ಭೀಮ ಹಾಗೂ ಹಿಡಂಬೆ ದೇವಿಯ ಮೂರ್ತಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ತಮ್ಮ ಮನೋಕಾಮನೆಯನ್ನು ಈಡೇರಿಸುವಂತೆ ಈ ಜೋಡಿ ಮೂರ್ತಿಯ ಮುಂದೆ ಕೈಮುಗಿದು ಕುಳಿತುಕೊಳ್ಳುತ್ತಾರೆ. ಈ ದೇವಸ್ಥಾನದಲ್ಲಿ ಮಹಾಶಿವರಾತ್ರಿಯಂದು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಉಳಿದ ಸಮಯದಲ್ಲಿ ಸಂತರು ಹಾಗೂ ಅಘೋರಿಗಳು ಈ ಪರ್ವತದ ಮೇಲೆ ಬಂದು ತಪಸ್ಸು ಹಾಗೂ ಸಾಧನೆಗಳನ್ನು ಮಾಡುತ್ತಾರೆ.
ಇದನ್ನೂ ಓದಿ:ಗಣಿತ ಇಸ್ಲಾಂನ ಆವಿಷ್ಕಾರವಂತೆ! ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾದ ಶಮಾ ಮೊಹಮ್ಮದ್!
ಆಚಾರ್ಯ ಸೋಮೇಂದ್ರನಾಥ್ ಅವರು ಹೇಳುವ ಪ್ರಕಾರ ಈ ಜಾಗದಲ್ಲಿರುವ ಸುಮಾರು 700 ಅಡಿ ಅಗಲದ ಗುಹೆಯಲ್ಲಿ ಪಂಚ ಪಾಂಡವರು ಕೆಲವು ದಿನಗಳ ವಾಸ ಮಾಡಿದ್ದರು ಮತ್ತು ಒಂದು ಶಿವಲಿಂಗವನ್ನು ಕೂಡ ಪ್ರತಿಷ್ಠಾಪನೆ ಮಾಡಿದ್ದರು. ಹೀಗಾಗಿ ಇಲ್ಲಿ ನಾವು 7 ಅಡಿ ಎತ್ತರದ ಶಿವಲಿಂಗವನ್ನು ಕೂಡ ಪ್ರತಿಷ್ಠಾಪನೆ ಮಾಡಿದ್ದೇವೆ. ನಿಮಗೆ ಇಡೀ ಭಾರತದಲ್ಲಿಯೇ 6 ಟನ್​ ಭಾರವಿರುವಂತಹ ಶಿವಲಿಂಗ ನೋಡಲು ಸಿಗುವುದು ಇಲ್ಲಿ ಮಾತ್ರ ಎಂದು ಆಚಾರ್ಯರು ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us