Advertisment

ನಾಳೆಯಿಂದ 2 ದಿನ ಈ ಭಾಗಗಳಲ್ಲಿ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

author-image
Ganesh Nachikethu
Updated On
ದೇಶಾದ್ಯಂತ ಮಳೆಗೆ ತತ್ತರಿಸಿದ ಜನ; ಒಪ್ಪತ್ತಿನ ಊಟ, ಕುಡಿಯುವ ನೀರಿಗೂ ಪರದಾಟ
Advertisment
  • ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಅಬ್ಬರ
  • ಭೀಕರ ಚಳಿ ನಡುವೆಯೂ ಹಲವೆಡೆ ಮುಂದುವರೆದ ಮಳೆ
  • ಮುಂದಿನ 2 ದಿನಗಳ ಕಾಲ ಈ ಭಾಗಗಳಲ್ಲಿ ವರುಣ ಆರ್ಭಟ

ನವದೆಹಲಿ: ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಇದರ ಜತೆಗೆ ಭೀಕರ ಚಳಿ ನಡುವೆಯೂ ಹಲವೆಡೆ ಮಳೆ ಮುಂದುವರೆದಿದೆ. ಮುಂದಿನ 2 ದಿನಗಳ ಕಾಲ ಈ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisment

ಎಲ್ಲೆಲ್ಲಿ ಮಳೆ?

ನಾಳೆ ಮತ್ತು ನಾಡಿದ್ದು ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಮದ ಜೊತೆಗೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಉತ್ತರಾಖಂಡದಲ್ಲಿ ಸಾಧಾರಣ ಮಳೆ ಇದೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ತಡರಾತ್ರಿ ಮಳೆ ಬೀಳಲಿದ್ದು, ಮಂಜು ಕೂಡ ಇರಲಿದೆ.

ದೆಹಲಿಯಲ್ಲೂ ಮಳೆ ಅಬ್ಬರ

ಇನ್ನು, ದೆಹಲಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಬೆಳಗ್ಗೆಯಿಂದಲೇ ಗಾಳಿ ಸಮೇತ 4 ಕಿಲೋ ಮೀಟರ್​ ವೇಗದಲ್ಲಿ ಮಳೆ ಬೀಳಲಿದೆ. ಮಧ್ಯಾಹ್ನದ ವೇಳೆಗೆ ಗಾಳಿಯು 8-10 ಕಿಲೋ ಮೀಟರ್‌ವರೆಗೆ ಬೀಸಲಿದೆ.

ಹಿಮಾಚಲ ಪ್ರದೇಶದ ಶಿಮ್ಲಾ, ಕಿನ್ನೌರ್, ಲಾಹೌಲ್ ಮತ್ತು ಸ್ಪಿತಿ, ಚಂಬಾ, ಕಂಗ್ರಾ, ಕುಲು ಮತ್ತು ಮಂಡಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ. ಭಾರೀ ಮಳೆ ಹಿನ್ನೆಲೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

Advertisment

ಇದನ್ನೂ ಓದಿ:ಆರ್​​ಸಿಬಿ ಕ್ಯಾಪ್ಟನ್​​ ಆಗಲು ಇವರು ಸಮರ್ಥ ಆಟಗಾರ; ಸ್ಟಾರ್​ ಪ್ಲೇಯರ್​​ಗೆ ಬಂಪರ್​ ಆಫರ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment