ಚೀನಾ, ಅಮೆರಿಕಾದಲ್ಲೂ ಇಲ್ಲ.. ಈ ಮೂರು ಇಸ್ಲಾಂ ರಾಷ್ಟ್ರಗಳಲ್ಲಿದೆ ವಿಶ್ವದ ಹೈಸ್ಪೀಡ್‌ ಮೊಬೈಲ್​ ಇಂಟರ್ನೆಟ್? ಯಾವುವು?

author-image
Gopal Kulkarni
Updated On
ಚೀನಾ, ಅಮೆರಿಕಾದಲ್ಲೂ ಇಲ್ಲ.. ಈ ಮೂರು ಇಸ್ಲಾಂ ರಾಷ್ಟ್ರಗಳಲ್ಲಿದೆ ವಿಶ್ವದ ಹೈಸ್ಪೀಡ್‌ ಮೊಬೈಲ್​ ಇಂಟರ್ನೆಟ್? ಯಾವುವು?
Advertisment
  • ವಿಶ್ವದಲ್ಲಿ ವೇಗದ ಮೊಬೈಲ್​ ಇಂಟರ್​ನೆಟ್​ ಸೇವೆ ನೀಡುವ ದೇಶಗಳಾವುವು
  • ಈ ಮೂರು ಇಸ್ಲಾಂ ರಾಷ್ಟ್ರಗಳಲ್ಲಿ ಇದೆ ಅತಿವೇಗದ ಮೊಬೈಲ್​ ಇಂಟರ್​ನೆಟ್ ಸೇವೆ
  • ಚೀನಾ, ಅಮೆರಿಕಾವನ್ನು ಹಿಂದಿಕ್ಕುತ್ತೆ ಈ ಮೂರು ದೇಶಗಳ ಇಂಟರ್​ನೆಟ್ ಸೇವೆ

ಇಂದಿನ ಕಾಲದಲ್ಲಿ ಇಂಟರ್​ನೆಟ್ ಇಲ್ಲದೇ ಜೀವನನ್ನು ಕಲ್ಪಿಸಿಕೊಳ್ಳಲು ಆಗುವುದಿಲ್ಲ. ಅತಿವೇಗದ ಇಂಟರ್​ನೆಟ್ ಸೇವೆ ನೀಡುವುದರಲ್ಲಿ ಬಹುದೊಡ್ಡ ಸ್ಪರ್ಧೆಯೊಂದು ಈಗ ವಿಶ್ವದಲ್ಲಿ ಜಾರಿಯಲ್ಲಿದೆ. ಇಂಟರ್​ನೆಟ್ ನೀಡುವ ಪ್ರತಿಯೊಂದು ಸಂಸ್ಥೆಯೂ ತನ್ನ ಗ್ರಾಹಕರ ತೃಪ್ತಿಯನ್ನು ಗಮನದಲ್ಲಿಟ್ಟುಕೊಂಡು ಅಂತರ್ಜಾಲದ ಸೌಕರ್ಯವನ್ನು ಕಲ್ಪಿಸುತ್ತವೆ. ಎಲ್ಲ ಕಂಪನಿಗಳ ಉದ್ದೇಶವೊಂದೇ ಹೈಸ್ಪೀಡ್ ಇಂಟರ್​ನೆಟ್ ಕೊಡಬೇಕು ಎಂಬುದು. ಭಾರತವೂ ಕೂಡ ಅತಿ ಹೆಚ್ಚು ಮೊಬೈಲ್ ಡಾಟಾ ಬಳಸುವ ದೇಶಗಳಲ್ಲಿ ಒಂದು. ಅದರಲ್ಲೂ ಕಡಿಮೆ ದರದಲ್ಲಿ ಸಮರ್ಪಕವಾದ ಸೇವೆಯನ್ನು ಇಲ್ಲಿಯ ಕಂಪನಿಗಳು ನೀಡುತ್ತಿವೆ. ಆದರೆ ನಿಮಗೆ ಗೊತ್ತಾ ಯಾವ ದೇಶಗಳಲ್ಲಿ ಮೊಬೈಲ್ ಇಂಟರ್​ನೆಟ್​ ಸ್ಪೀಡ್ ಅತಿಹೆಚ್ಚು ಇದೆ ಅಂತ

ಇದನ್ನೂ ಓದಿ:ಗ್ರಾಹಕರಿಗೆ ಬಿಗ್ ಆಫರ್ ಕೊಟ್ಟ BSNL.. ಕೇವಲ ₹999 ರೀಚಾರ್ಜ್ ಮಾಡಿಸಿದ್ರೆ ಏನೆಲ್ಲಾ ಸಿಗುತ್ತೆ ಗೊತ್ತಾ?

ಇಲ್ಲಿ ನಾವು ಅತ್ಯಂತ ಹೈಸ್ಪೀಡ್ ಮೊಬೈಲ್​ ಇಂಟರ್​ನೆಟ್​ ಹೊಂದಿರುವ ಮೂರು ಮುಸ್ಲಿಂ ದೇಶಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೇವೆ. ಬಹುಬೇಗ ಸಂಪರ್ಕ ಕಲ್ಪಿಸುವ, ಬೇಗನೆ ಅಪ್​ಲೋಡ್​ ಡೌನ್​ಲೋಡ್ ಮಾಡಿಕೊಳ್ಳಲು ಬೇಕಾಗುವ ಹೈಸ್ಪೀಡ್ ಇಂಟರ್​ನೆಟ್​ ಸರ್ವಿಸ್​ನ್ನು ಈ ದೇಶಗಳಲ್ಲಿ ನೀಡಲಾಗುತ್ತದೆ.

ಯುಎಇ: ಯುನೈಟೆಡ್​ ಅರಬ್ ಎರಿಮೆಟ್ಸ್ ಇದರಲ್ಲಿ ಮೊದಲ ಸಾಲಿನಲ್ಲಿ ಬಂದು ನಿಲ್ಲುತ್ತದೆ. ಈ ದೇಶ ತನ್ನ ನಾಗರಿಕರಿಗೆ 291.85ಎಂಬಿಪಿಎಸ್​ ವೇಗದಲ್ಲಿ ಮೊಬೈಲ್​ ಇಂಟರ್​ನೆಟ್ ಸ್ಪೀಡ್ ನೀಡುತ್ತದೆ. ಇದು ಅಲ್ಲಿನ ನಾಗರಿಕರಿಗೆ ಬಹುಬೇಗ ಡೌನ್​ಲೋಡ್ ಅಪ್​ಲೋಡ್ ಜೊತೆಗೆ ಅತ್ಯದ್ಭುತ ಆನ್​ಲೈನ್ ಅನುಭವವನ್ನು ನೀಡುತ್ತದೆ.

ಕತಾರ್: ಅತಿವೇಗದ ಇಂಟರ್​ನೆಟ್ ಸೇವೆ ನೀಡುವಲ್ಲಿ ಕತಾರ್ ಎರಡನೇ ಱಂಕ್​ನಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಕತಾರ್ ಸದಾ ಮುಂದೆ ಇರುತ್ತದೆ. ಇದು ತನ್ನ ದೇಶದ ನಾಗರಿಕರಿಗೆ 244.34ಎಂಬಿಪಿಎಸ್​ ನಷ್ಟು ವೇಗದ ಇಂಟರ್​ನೆಟ್​ ಸೇವೆಯನ್ನು ಈ ದೇಶದ ಜನರು ಪಡೆಯುತ್ತಾರೆ.

ಕುವೈತ್: ಕುವೈತ್​ನಲ್ಲಿ ಅಂತರ್ಜಾಲದ ವೇಗದ ವಿಷಯದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಸುಮಾರು 239.83 ಮೆಗಾ ಬೈಟ್ಸ್ ಪರ್ ಸೆಕೆಂಡ್​ ವೇಗದಲ್ಲಿ ಜನರು ಮೊಬೈಲ್​ ಇಂಟರ್​ನೆಟ್​ ಸೇವೆಯನ್ನು ಅನುಭವಿಸುತ್ತಾರೆ.

ಇದನ್ನೂ ಓದಿ:ಹೊಸ ಕಾರು ಖರೀದಿಸುವವರಿಗೆ ಬಿಗ್ ಶಾಕ್‌.. ಹೊಸ ವರ್ಷಕ್ಕೆ ದುಬಾರಿ ದುನಿಯಾ! ಯಾವ ಕಾರಿಗೆ ಎಷ್ಟು ಹೆಚ್ಚಳ?

ಇನ್ನು ಅಮೆರಿಕಾದಲ್ಲಿ ಇರುವ ಇಂಟರ್​ನೆಟ್​ ಸ್ಪೀಡ್​ 219 ಎಂಬಿಪಿಎಸ್​ನಷ್ಟಿದ್ದರೆ. ಚೀನಾದಲ್ಲಿ 232.41ನಷ್ಟು ಇದೆ. ಡೆನ್ಮಾರ್ಕ್​ನಲ್ಲಿ 130.5, ನಾರ್ವೆಯಲ್ಲಿ 128.77, ಸೌದಿ ಅರೆಬಿಯಾದಲ್ಲಿ 122.28, ಬಲ್ಗೇರಿಯಾದಲ್ಲಿ 117.64 ಮತ್ತು ಲಕ್ಸಂಬರ್ಗ್​ನಲ್ಲಿ 144.42 ಮೆಗಾ ಬೈಟ್ಸ್ ಪರ್ ಸೆಕೆಂಡ್​ ವೇಗದಲ್ಲಿ ಇಂಟರ್​ನೆಟ್ ಸೇವೆಯನ್ನು ನೀಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment