newsfirstkannada.com

ಅನಿರೀಕ್ಷಿತ ಪ್ಲೇಯರ್ಸ್​ ಅಸಾಧ್ಯವಾದ​​​​​​ ಆಟ; ಈ ತ್ರಿಮೂರ್ತಿಗಳು ಪರ್ಫಾಮೆನ್ಸ್​ಗೆ ಸಲಾಂ ಹೇಳಲೇಬೇಕು 

Share :

Published June 1, 2023 at 7:03am

Update September 27, 2023 at 10:37pm

    ಇವರ ಪರ್ಫಾಮೆನ್ಸ್​ ನೆಕ್ಸ್ಟ್​ ಲೆವೆಲ್

    ಈ ಪ್ಲೇಯರ್ಸಿದ್ದು ಅನ್​ಬಿಲೀವೇಬಲ್​​​​​​​ ಆಟ

    ಪಂದ್ಯ ಗೆಲ್ಲಿಸಲು ಇವ್ರು ಪರೋಕ್ಷ ಕಾರಣ

ಇವರು ಯಾರ ಲಿಸ್ಟ್​​ನಲ್ಲೂ ಇರಲಿಲ್ಲ. ಒಂಥರ ಹತ್ತರಲ್ಲಿ ಹನ್ನೊಂದು ಅಂತರಲ್ಲ ಹಾಗೇ. ಆದ್ರೆ 16ನೇ ಐಪಿಎಲ್​ ಸೀಸನ್ ಮುಗಿದ ಮೇಲೆ ಗೊತ್ತಾಗಿದ್ದು, ಇವರ ಪರ್ಫಾಮೆನ್ಸ್​ ನೆಕ್ಸ್ಟ್​ ಲೆವೆಲ್​ ಅಂತ. ಅನ್​​ಎಕ್ಸ್​​​ಪೆಕ್ಟೆಡ್​​​ ಪ್ಲೇಯರ್ಸ್​ ಅನ್​ಬಿಲೀವೇಬಲ್​​​​​​​ ಆಟವಾಡಿ ಸೈ ಅನ್ನಿಸಿಕೊಂಡಿದ್ರು.

16ನೇ ಐಪಿಎಲ್ ಸೀಸನ್​​​​​​​​​​​​​​​ ಮುಗಿದಿದೆ..ಚೆನ್ನೈ ಸೂಪರ್ ಕಿಂಗ್ಸ್​​ ಚಾಂಪಿಯನ್ ಆಗಿದ್ದು ನೋಡಾಯ್ತು..! ಮುಗಿದ ಐಪಿಎಲ್ ಚಾಪ್ಟರ್​​ ತೆರೆದು ನೋಡಿದ್ರೆ ಕೆಲ ಇಂಟ್ರೆಸ್ಟಿಂಗ್​​​ ಸಂಗತಿಗಳು ನಮ್ಮ ಕಣ್ಣ ಬಂದು ನಿಲ್ಲುತ್ತವೆ..ಆ ಪೈಕಿ ಅನ್​​ಎಕ್ಸ್​​ಪೆಕ್ಟೆಟೆಡ್​​​ ಪರ್ಫಾಮೆನ್ಸ್ ಚಾಪ್ಟರ್ ಅದ್ಭುತ ಮತ್ತು ಅನಿರೀಕ್ಷಿತ.

ಪಂದ್ಯಾವಳಿ ಮುಗಿದ ನಂತ್ರ ಎಲ್ಲರಿಂದ ಜೈಕಾರ, ಶಹಬ್ಬಾಸ್ಗಿರಿ

ಹೇಳಿಕೇಳಿ ಐಪಿಎಲ್​​​​​​​​​​​ ಹೊಡಿಬಡಿ ಆಟ. ಇಲ್ಲಿ ಕೊನೆ ಬಾಲ್​​ವರೆಗೂ ರಿಸಲ್ಟ್​ ನಿಗೂಢ. ಅಂತೆಯೇ ಪ್ಲೇಯರ್ಸ್​ ಪರ್ಫಾಮೆನ್ಸ್ ಕೂಡ. ಮೋಹಿತ್ ಶರ್ಮಾ, ಶಿವಂ ದುಬೆ ಹಾಗೂ ಅಜಿಂಕ್ಯಾ ರಹಾನೆ. ಈ ಮೂವರ ಹೆಸರು ಇಂದು ಹಾಟ್​ಟಾಫಿಕ್​​​. ಆದ್ರೆ ನಿಮಗೆ ನೆನಪಿರಲಿ. ಟೂರ್ನಿ ಆರಂಭಕ್ಕೂ ಮುನ್ನ ಮೂವರು ಶೂನ್ಯ. ಆದ್ರೆ ಇವರೇ ಬೊಂಬಾಟ್ ಪರ್ಫಾಮೆನ್ಸ್​​​ ನೀಡಿ ಎಲ್ಲರ ಒಪಿನಿಯನ್ ಬದಲಿಸಿಬಿಟ್ರು.

ಅನಿರೀಕ್ಷಿತ ಆಟಗಾರರಿಂದ ನಂಬಲಾಗದ ಪರ್ಫಾಮೆನ್ಸ್​​​​​..!

ಈ ಮೂವರನ್ನ ಅನ್​ಎಕ್ಸ್​ಪೆಕ್ಟೆಟೆಡ್​ ರಾಕಿಂಗ್​ ಸ್ಟಾರ್ ಅಂತ ಕರೆಯಲೇಬೇಕು. ಯಾಕಂದ್ರೆ ಆಗಲೇ ಹೇಳಿದ ಆಗೇ ಮೂವರ ಮೇಲೆ ಯಾವ ನಿರೀಕ್ಷೆಗಳೂ ಇರಲಿಲ್ಲ. ಜಸ್ಟ್​​​​ 10 ರಲ್ಲಿ ಹನ್ನೊಂದನೆಯವರಾಗಿ ಟೂರ್ನಿ ಮುಗಿಸ್ತಾರೆ ಎಂದು ಎಲ್ಲರು ಭಾವಿಸಿದ್ರು. ಆದ್ರೆ ಹಾಗಾಲಿಲ್ಲ, ಅನ್​​ಎಕ್ಸ್​ಪೆಕ್ಟೆಟೆಡ್​ ಪ್ಲೇಯರ್ಸ್​, ಅನ್​​​​ಬಿಲೀವ್​ಯೇಬಲ್​​​ ಪರ್ಫಾಮೆನ್ಸ್ ನೀಡಿ ಎಲ್ಲರಿಂದ ಜೈಕಾರ, ಶಹಬ್ಬಾಸ್​ಗಿರಿ ಗಿಟ್ಟಿಸಿಕೊಂಡ್ರು.

2ನೇ ಗರಿಷ್ಠ ವಿಕೆಟ್​​ ಪಡೆದ ನೆಟ್ಬೌಲರ್ಮೋಹಿತ್ ಶರ್ಮಾ..!

ಮೋಹಿತ್ ಶರ್ಮಾ, ಈ ಹರ್ಯಾಣ ಮೀಡಿಯಂ ಪೇಸರ್​​​​​​ ಕಥೆ ನಿಜಕ್ಕೂ ಎಂತವರಿಗೂ ಸ್ಫೂರ್ತಿ. ಇವರು ಕಳೆದ ವರ್ಷ ಗುಜರಾತ್ ಟೈಟನ್ಸ್​​ ತಂಡಕ್ಕೆ ನೆಟ್ ಬೌಲರ್ ಆಗಿದ್ರು. ಇಂಪ್ರೆಸ್​​​ ಆದ ಗುಜರಾತ್​​​​​ ಕೊನೆಗೆ ಆಕ್ಷನ್​​ನಲ್ಲಿ ತೆಕ್ಕೆಗೆ ಹಾಕಿಕೊಳ್ತು..ಆಗಲೂ ಮೋಹಿತ್ ಮೇಲೆ ಹೆಚ್ಚೇನು ಭರವಸೆ ಇರರ್ಲಿಲ್ಲ.

ಆದ್ರೆ ಎಂತಹ ವಿಚಿತ್ರ ನೋಡಿ ಇದೇ ಮೋಹಿತ್ ಶರ್ಮಾ ಈ ಸೀಸನ್​​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ರು. ಆಡಿದ 14 ಪಂದ್ಯಗಳಿಂದ 27 ವಿಕೆಟ್ ಕಬಳಿಸಿ ಎಲ್ಲರನ್ನ ದಂಗು ಬಡಿಸಿದ್ದು ಸುಳ್ಳಲ್ಲ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ 16ನೇ ಐಪಿಎಲ್​​ನ ಸೆಕೆಂಡ್​​​​ ಹೈಯೆಸ್ಟ್ ವಿಕೆಟ್ ಟೇಕರ್ ಕೂಡ ಇವರೇ. ನಿಜಕ್ಕೂ ಅನ್​​​ ಅನ್​ಬಿಲೀವ್​​ಯೇಬಲ್​​​​ ಪರ್ಫಾಮೆನ್ಸೆ ಬಿಡಿ.

ಮಾತು ಸುಳ್ಳಾಗಿಸಿ ಚೆನ್ನೈಗೆ ಕಪ್ ಗೆಲ್ಲಿಸಿಕೊಟ್ಟ ದುಬೆ.

ಇನ್ನು ಕಳೆದ ಸೀಸನ್​​ನಲ್ಲಿ ಶಿವು ದುಬೆ ಭಾರೀ ನಿರಾಸೆ ಮೂಡಿಸಿದ್ರು. ಹೀಗಾಗಿ ಈ ಸಲ ಶಿವಂ ದುಬೆ ಮೇಲೆ ಯಾರಿಗೂ ಭರವಸೆ ಅನ್ನೋದೆ ಇರ್ಲಿಲ್ಲ. ಬಟ್​​​ ಶಿವಂ ದುಬೆಯ ಶಿವತಾಂಡವ  ರೂಪಕ್ಕೆ ಕ್ರಿಕೆಟ್ ಪ್ರಿಯರು ಬೆಚ್ಚಿ ಬಿದ್ದರು. ದುಬೆ ಆರ್ಭಟ ಎಷ್ಟಿತ್ತೆಂದರೆ ಒಂದೇ ಸೀಸನ್​​ನಲ್ಲಿ 35 ಸಿಕ್ಸರ್ ಚಚ್ಚಿದ್ರು..ಡುಪ್ಲೆಸಿ ಬಳಿಕ ಇವರೇ ಹೆಚ್ಚಿನ ಸಿಕ್ಸರ್​​​ ಸಿಡಿಸಿದ್ದು. ಇನ್ನು 418 ರನ್​ ಗಳಿಸಿ ಚೆನ್ನೈ ಟ್ರೋಫಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ರು.

ಟಿ20 ಸ್ಪೆಶಲಿಸ್ಟ್ ಆಗಿ ಬದಲಾದ್ರು ಟೆಸ್ಟ್ ಸ್ಪೆಶಲಿಸ್ಟ್ ರಹಾನೆ!

ಅಜಿಂಕ್ಯಾ ರಹಾನೆ ಟೆಸ್ಟ್ ಕ್ರಿಕೆಟ್​ಗೆ ಹೇಳಿಮಾಡಿಸಿದ ಆಟಗಾರ. ಹೀಗಾಗಿ ಆಕ್ಷನ್​​ನಲ್ಲಿ ರಹಾನೆಯನ್ನ ಖರೀದಿಸಲು ಚೆನ್ನೈ ಬಿಟ್ಟು ಉಳಿದ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಆದ್ರೆ ರಹಾನೆ  ಸಿಎಸ್​​​ಕೆ ಕ್ಯಾಂಪ್ ಸೇರಿದ ಬಳಿಕ ಟಿ20 ಸ್ಪೆಶಲಿಸ್ಟ್ ಆಗಿ ಬದಲಾದ್ರು. ಚುಟುಕು ಮಾದರಿಗೆ ಸೂಟ್​ ಅಲ್ಲ ಅಂದೋರಿಗೆ ಸರಿಯಾಗೇ ಕಪಾಳ ಮೋಕ್ಷ ಮಾಡಿದ್ರು. 172 ರ ಸ್ಟ್ರೈಕ್​ರೇಟ್​​ನಲ್ಲಿ 326 ರನ್​ ಚಚ್ಚಿ 2.0 ರಹಾನೆಯನ್ನ ನೋಡುವಂತೆ ಮಾಡಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಅನಿರೀಕ್ಷಿತ ಪ್ಲೇಯರ್ಸ್​ ಅಸಾಧ್ಯವಾದ​​​​​​ ಆಟ; ಈ ತ್ರಿಮೂರ್ತಿಗಳು ಪರ್ಫಾಮೆನ್ಸ್​ಗೆ ಸಲಾಂ ಹೇಳಲೇಬೇಕು 

https://newsfirstlive.com/wp-content/uploads/2023/06/IPL2023-2.jpg

Load More