/newsfirstlive-kannada/media/post_attachments/wp-content/uploads/2024/10/ICMR-HOMEMADE-FOOD-1.jpg)
'ದಿ ಎಕ್ಸಪಿಯಂಟಲ್ ಫೂಡ್ ಅಂಡ್ ಟ್ರಾವೆಲ್ ಗೈಡ್' ಇತ್ತೀಚಿಗೆ 20024-25ರ ಪ್ರಶಸ್ತಿಯನ್ನು ಘೋಷಿಸಿದೆ ಇದರಲ್ಲಿ ಭಾರತದ ತಿನಿಸು ಹಾಗೂ ಆಹಾರಗಳಿಗೂ ಕೂಡ ಸ್ಥಾನ ದೊರಕಿದೆ. ಹಲವು ವಿಭಾಗಗಳಲ್ಲಿ ಭಾರತೀಯ ತಿನಿಸು ಹಾಗೂ ಆಹಾರಗಳಿಗೂ ಕೂಡ ಇಲ್ಲಿ ಮಾನ್ಯತೆ ನೀಡಲಾಗಿದೆ. . ಅದರಲ್ಲೂ ಭಾರತದ ಪ್ರಮುಖ 4 ಆಹಾರ ಖಾದ್ಯಗಳು ಸ್ಥಾನ ಗಳಿಸಿವೆ ಮತ್ತು ಇವೆಲ್ಲವೂ ಕೂಡ ಮಾಂಸಾಹಾರ ಖಾದ್ಯಗಳಾಗಿವೆ.
ವಿಶ್ವದ 100 ಪ್ರಮುಖ ನಗರಗಳ ಲಿಸ್ಟ್ನಲ್ಲಿ ಮುಂಬೈ ಐದನೇ ಸ್ಥಾನವನ್ನು ಗಳಿಸಿರುವುದು ಇಲ್ಲಿ ಗಮನಾರ್ಹ. ಮುಂಬೈ ಅಂದ ತಕ್ಷಣ ನಮಗೆಲ್ಲಾ ನೆನಪಿಗೆ ಮೊದಲು ಬರೋದೆ ವಡಾಪಾವ್. ವಡಾಪಾವ್ ಕೂಡ ಈ ತಿಂಡಿ ತಿನುಸುಗಳ ಸ್ಪರ್ಧೆಯಲ್ಲಿ ಪ್ರಮಖ ಸ್ಥಾನ ಪಡೆದುಕೊಂಡಿದೆ. ಬೇಲ್ಪುರಿ, ಪಾವ್ ಭಾಜಿ, ವಡಾಪಾವ್, ರಗ್ಡಾ ಪಟ್ಟಿಸ್ ಇವೆಲ್ಲವೂ ಮುಂಬೈನ ಆಹಾರ ಸಂಸ್ಕೃತಿಯನ್ನು ಈ ಟಾಪ್ ತಿನಿಸುಗಳಲ್ಲಿ ಸೇರಿಕೊಳ್ಳುವ ಮೂಲಕ ಮತ್ತಷ್ಟು ಶ್ರೀಮಂತಗೊಳಿಸಿವೆ. ಇವುಗಳೊಂದಿಗೆ ಅವು ಸಿದ್ಧಗೊಂಡು ಜನಪ್ರಿಯಗೊಂಡ ಹೋಟೆಲ್ಗಳು ಕೂಡ ಹೆಸರು ಗಳಿಸಿವೆ. ರಾಮ ಆಶ್ರಯ, ಶ್ರೀ ಠಾಕೆರ್ ಭೋಜನಾಲಯ ಮತ್ತು ಕೆಫೆ ಮದ್ರಾಸ್ ಮುಂಬೈನ ಪಾಕಲೋಕದಲ್ಲಿ ಅವುಗಳ ಕೊಡುಗೆಯನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಲಾಗಿದೆ.
View this post on Instagram
ಇದನ್ನೂ ಓದಿ:ನಾನ್ ವೆಜ್ ಪ್ರಿಯರಿಗೆ ಗುಡ್ನ್ಯೂಸ್; ಬರ್ತಿದೆ ‘ಬೊಂಬಾಟ್ ಬಾಡೂಟ’.. ಯಾವಾಗ ಗೊತ್ತಾ?
ಇನ್ನೂ 100 ನಗರಗಳ ಪಟ್ಟಿಯಲ್ಲಿ ಅಮೃತಸರ್ ಕೂಡ ಇದೆ. ಇದು 43ನೇ ಸ್ಥಾನದಲ್ಲಿ ಮಿಂಚಿದ್ದು. ಭಾರತೀಯ ಪಾಕಶಾಲೆಯ ಕೌಶಲ್ಯತೆಯ ಪರಿಚಯವನ್ನು ಈ ಮೂಲಕ ಜಗತ್ತಿಗೆ ಪರಿಚಯ ಮಾಡಿಕೊಟ್ಟಿದೆ. ಅಮೃತಸರ್ದ ಕುಲ್ಚಾ, ಚಿಕ್ಕನ್ ಟಿಕ್ಕಾ, ಶಾಹಿ ಪನ್ನೀರ್, ತಂದೂರಿ ಮುರ್ಘಾ ಮತ್ತು ಸಾಗ್ ಪನ್ನೀರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು. ಭಾರತೀಯ ಆಹಾರ ಪದ್ಧತಿಯ ಹಿರಿಮೆಗೆ ಮತ್ತೊಂದು ಗರಿಯನ್ನು ಮೂಡಿಸಿದೆ.
ಇದನ್ನೂ ಓದಿ:ಮಾರುಕಟ್ಟೆಗೆ ಹೋದಾಗ ಮೆಂತೆ ಸೊಪ್ಪು ಖರೀದಿ ಮಾಡೋದು ಮರಿಯಲೇಬೇಡಿ; ಚಳಿಗಾಲಕ್ಕೆ ಎಷ್ಟು ಉಪಯೋಗ ಗೊತ್ತಾ?
50ನೇ ಱಂಕಿನೊಳಗಡೆ ಹೊಸ ದೆಹಲಿ ಹಾಗೂ ಹೈದ್ರಾಬಾದ್ ಕೂಡ ಸ್ಥಾನ ಪಡೆದಿವೆ. 45ನೇ ಸ್ಥಾನ ನವದೆಹಲಿ ಪಡೆದಿದ್ದರೆ. 50ನೇ ಸ್ಥಾನವನ್ನು ಹೈದ್ರಾಬಾದ್ ಪಡೆದುಕೊಂಡಿದೆ. ಈ ಎರಡು ನಗರಿಗಳು ಅತಿಹೆಚ್ಚು ಗಮನ ಸೆಳೆದಿದ್ದು ಸ್ಟ್ರೀಟ್ ಫುಡ್ಗಳ ವಿಚಾರದಲ್ಲಿ ಇನ್ನು ಕೊಲ್ಕತ್ತಾ ಹಾಗೂ ಚೆನ್ನೈ ಕೂಡ 71 ಹಾಗೂ 75ನೇ ಸ್ಥಾನವನ್ನು ಗಳಿಸಿಕೊಂಡಿವೆ.
ಇನ್ನೂ ಟಾಪ್ 100 ನಗರಗಳಲ್ಲಿ ಮೊದಲನೇ ಸ್ಥಾನವನ್ನು ಇಟಲಿಯ ನೆಪಲ್ಸ್ ತನ್ನ ಪ್ರಸಿದ್ಧ ನಿಯೊಪೊಲಿಟಿನ್ ಫಿಜ್ಜಾಗಾಗಿ ಪಡೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ