/newsfirstlive-kannada/media/post_attachments/wp-content/uploads/2024/09/JOB_SBI-1.jpg)
ದೇಶದ ಜನರ ಆರ್ಥಿಕ ಸ್ಥಿತಿ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಮಹತ್ವಾಕಾಂಕ್ಷೆ ಯೋಜನೆಗಳು ಜಾರಿಗೆ ತಂದಿತ್ತು. ಈ ಪೈಕಿ ಒಂದು ಯೋಜನೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ. ಜನ್ ಧನ್ ಯೋಜನೆ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಉಚತ ಬ್ಯಾಂಕ್ ಅಕೌಂಟ್ ತೆರೆಯುವ ಸೌಲಭ್ಯ ಒದಗಿಸಲಾಗಿತ್ತು.
ಇನ್ನು, ನಾಗರಿಕರು ಯಾವುದೇ ರೀತಿಯ ಸರ್ಕಾರದ ಸಹಾಯಧನ ಪಡೆಯೋದಾದ್ರೆ ನೇರ ಜನ್ ಧನ್ ಖಾತೆಗೆ ಹಣ ಜಮಾ ಆಗಲಿದೆ. ಇದು ಬ್ರೋಕರ್ಗಳ ಹಾವಳಿಯನ್ನು ಕಡಿಮೆ ಮಾಡಿದೆ. ಈ ಮಹತ್ವದ ಯೋಜನೆ ಜಾರಿಯಾಗಿ ಬರೋಬ್ಬರಿ 10 ವರ್ಷಗಳಾಗಿವೆ. ಇದರ ಮಧ್ಯೆ ಕೇಂದ್ರ ಸರ್ಕಾರ ಮತ್ತೊಮ್ಮೆ ಅಗತ್ಯವಿರೋ ದಾಖಲೆಗಳೊಂದಿಗೆ KYC ಅಪ್‌ಡೇಟ್ ಮಾಡಬೇಕು ಎಂದು ಜನರಿಗೆ ಸೂಚನೆ ನೀಡಿದೆ.
KYC ಅಪ್ಡೇಟ್ಗೆ ಬೇಕಿರೋ ದಾಖಲೆಗಳೇನು?
ಕೈವೈಸಿ ಅಪ್ಡೇಟ್ಗೆ ಆಧಾರ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಸರ್ಕಾರದ ಯಾವುದಾದ್ರೂ ಒಂದು ಐಡಿ ಕಾರ್ಡ್ ಬೇಕು. ಅಡ್ರೆಸ್ ಪ್ರೂಫ್ಗಾಗಿ ಕರೆಂಟ್ ಬಿಲ್, ಬ್ಯಾಂಕ್ ಸ್ಟೇಟ್ಮೆಂಟ್ ಆಧಾರ್, ವೋಟರ್ ಐಡಿ, ಪಾಸ್ ಪೋರ್ಟ್ ನೀಡಬಹುದು.
ಖಾತೆ KYC ಮಾಡಲೇಬೇಕು
ನಿಮ್ಮ ಖಾತೆ ಯಾವುದೇ ಬ್ಯಾಂಕ್ನಲ್ಲಿದ್ರೂ KYC ಮಾಡಲೇಬೇಕು. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಈಗಾಗಲೇ KYC ಕೆಲಸ ಶುರು ಮಾಡಿವೆ. ಉಳಿದ ಬ್ಯಾಂಕ್ಗಳು ಸದ್ಯದಲ್ಲೇ ಶುರು ಮಾಡಲಿವೆ. ನೀವು KYC ಮಾಡಲು ಬೇಕಾದ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಬ್ರ್ಯಾಂಚ್ಗೆ ಭೇಟಿ ನೀಡಬೇಕು. ನೀವು KYC ಅಪ್ಡೇಟ್ ಮಾಡದಿದ್ರೆ ಬ್ಯಾಂಕ್ ಖಾತೆ ರದ್ದಾಗಲಿದೆ.
ಇದನ್ನೂ ಓದಿ: 6,6,6,4,4,4,4,4; ಮೆಗಾ ಆಕ್ಷನ್ಗೆ ಮುನ್ನ ಅಬ್ಬರ; RCB ಸ್ಟಾರ್ ಬ್ಯಾಟಿಂಗ್ಗೆ ಬೆಚ್ಚಿಬಿದ್ದ ಪಾಕ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್