/newsfirstlive-kannada/media/post_attachments/wp-content/uploads/2025/05/MODI-SHARIF.jpg)
ಯುದ್ಧ ಕಾರ್ಮೋಡ ಆವರಿಸಿರುವ ಮಧ್ಯೆಯೇ ನಾಳೆ ದೇಶಾದ್ಯಂತ ಮಾಕ್ ಡ್ರಿಲ್ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಈ ನಡುವೆ ಯುದ್ಧಕ್ಕೂ ಮೊದಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಭಾರತದ ಬೆನ್ನಿಗೆ ನಿಂತಿದೆ. ಹಾಗಿದ್ರೆ ಯಾವೆಲ್ಲ ದೇಶಗಳು ಯಾರಿಗೆ ಬೆಂಬಲಿಸಿವೆ ಅನ್ನೋದಕ್ಕೆ ಇಲ್ಲಿದೆ ರಿಪೋರ್ಟ್.
ಭಾರತ ಈಗ ಹಿಂದಿನ ಭಾರತವಾಗಿಲ್ಲ. ಇದು ಮುಂದಿನ ದಿನಗಳಲ್ಲಿ ದೊಡ್ಡಣ್ಣನಿಗೆ ಎದಿರೇಟು ಕೊಡುವಂತ ಭಾರತ. ವಿಶ್ವ ಬ್ಯಾಂಕ್ಗೆ ಸಾಲ ಕೊಡುವ ಸಾಮರ್ಥ್ಯ ಹೊಂದಿದ ಭರತಭೂಮಿ. ಸದ್ಯ ಭರತಖಂಡಕ್ಕೆ ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನದ ಜೊತೆ ಯುದ್ಧ ಕಾರ್ಮೋಡ ಆವರಿಸಿದೆ. ಈ ನಡುವೆ ಸಿಹಿ ಸುದ್ದಿ ಏನಪ್ಪ ಅಂದ್ರೆ ಯುದ್ಧದಲ್ಲಿ ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಬೆಂಬಲ ನೀಡಿದೆ. ಪಹಲ್ಗಾಮ್ ದಾಳಿ 2 ರಾಷ್ಟ್ರಗಳ ರಾಜಕೀಯ ಬಿಕ್ಕಟ್ಟಲ್ಲ. ಅಂತಾರಾಷ್ಟ್ರೀಯ ಭಯೋತ್ಪಾದನೆ ಅಂತ ಭಾರತ ವಾದಿಸಿದೆ. ಈ ಅಂಶವನ್ನೇ 13 ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಪ್ರಸ್ತಾಪಿಸಿ ಬೆಂಬಲ ನೀಡಿವೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಹಾಗೂ ಆ ಮೂಲಕ ನಾಗರಿಕರನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಹೇಳಿದ್ದಾರೆ.
ಇದನ್ನೂ ಓದಿ: ಬ್ಯಾನ್ ಆದ ಮೇಲೂ ಕ್ಷಮೆ ಕೇಳದ ಸೋನು ನಿಗಮ್.. ಕನ್ನಡಿಗರ ಬಗ್ಗೆ ಹೊಸ ಪೋಸ್ಟ್; ಏನಂದ್ರು?
ಭಾರತಕ್ಕೆ 13 ರಾಷ್ಟ್ರಗಳ ಬೆಂಬಲ
- ಭದ್ರತಾ ಮಂಡಳಿಯ 15 ರಾಷ್ಚ್ರಗಳ ಪೈಕಿ ಭಾರತಕ್ಕೆ 13 ರಾಷ್ಟ್ರಗಳ ಬೆಂಬಲ
- 5 ಖಾಯಂ ಸದಸ್ಯ ರಾಷ್ಟ್ರಗಳ ಪೈಕಿ 4 ಸದಸ್ಯ ರಾಷ್ಟ್ರಗಳು ಭಾರತಕ್ಕೆ ಸಾಥ್
- ಚೀನಾ, ಪಾಕಿಸ್ತಾನ ಹೊರತುಪಡಿಸಿ ಉಳಿದ 13 ರಾಷ್ಟ್ರಗಳ ಬೆಂಬಲ
- ಖಾಯಂ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ರಷ್ಯಾ, ಇಂಗ್ಲೆಂಡ್, ಅಮೆರಿಕ
- ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳಾದ ಅಲ್ಜೀರಿಯಾ, ಡೆನ್ಮಾರ್ಕ್, ಗಯಾನಾ
- ಪನಾಮಾ, ರಿಪಬ್ಲಿಕ್ ಆಫ್ ಕೊರಿಯಾ, ಸಿಯೆರಾ ಲಿಯೋನ್, ಸ್ಲೊವೇನಿಯಾ
- ಸೊಮಾಲಿಯಾ, ಗ್ರೀಸ್ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ದೇಶಗಳು
- ಭಾರತಕ್ಕೆ ಸಂಪೂರ್ಣ ಬೆಂಬಲ ಎಂದ ರಷ್ಯಾ ಅಧ್ಯಕ್ಷ ಪುಟಿನ್
ಇದನ್ನೂ ಓದಿ: IPL 2025: ಹೈದರಾಬಾದ್ ಆಸೆಗೆ ತಣ್ಣೀರು.. ಪ್ಲೇ ಆಫ್ ರೇಸ್‌ನಿಂದಲೇ SRH ಕಿಕ್ ಔಟ್!
ಅತ್ತ ಪಾಕ್ಗೆ ಚೀನಾ ಬೆಂಬಲಿಸಿದ್ರೆ ಇತ್ತ ಭಾರತಕ್ಕೆ ರಷ್ಯಾ ಸಾಥ್ ಕೊಟ್ಟಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಪಹ್ಲಗಾಮ್ ಉಗ್ರರ ದಾಳಿಯನ್ನು ಪುಟಿನ್ ಬಲವಾಗಿ ಖಂಡಿಸಿದ್ದಾರೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪುಟಿನ್ ಹೇಳಿದ್ದಾರೆಂದು ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಭಾರತ ವರ್ಸಸ್ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ದಟ್ಟವಾಗಿದೆ. ಯುದ್ಧವಂದ್ರೆ ಕೆಲ ದೇಶಗಳು ಒಂದು ದೇಶಕ್ಕೆ ಮತ್ತೆ ಕೆಲವು ತಮ್ಮಿಷ್ಟದ ದೇಶಕ್ಕೆ ಬೆಂಬಲಿಸುವುದು ಸಾಮಾನ್ಯ. ಸದ್ಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 13 ರಾಷ್ಟ್ರಗಳೇ ಭಾರತಕ್ಕೆ ಬೆಂಬಲಿಸಿದ್ದು ಭಾರತಕ್ಕೆ ಭಾರೀ ಬಲ ಬಂದಂತಾಗಿದೆ.
ಇದನ್ನೂ ಓದಿ: ನಾಗರಿಕರ ಸ್ವಯಂ ರಕ್ಷಣೆಗಾಗಿ ಮಾಕ್ ಡ್ರಿಲ್.. ದೇಶದಲ್ಲಿ ನಾಳೆ ಏನೆಲ್ಲ ನಡೆಯಲಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ