newsfirstkannada.com

ದರ್ಶನ್ ವಿರುದ್ಧ ಪೊಲೀಸರಿಗೆ ಸಿಕ್ಕಿರೋ ಸಾಕ್ಷ್ಯಗಳಿವು.. ದಾಸನಿಗೆ ಅಂಟಿದ ರಕ್ತದ ಕಲೆಯ ಸುತ್ತ ಒಂದು ನೋಟ

Share :

Published September 4, 2024 at 2:01pm

    ದರ್ಶನ್​ ಕುರಿತಾಗಿ ಸಿಕ್ಕಿವೆ ಹಲವು ಸಾಕ್ಷಿಗಳು

    ಶೆಡ್​ನಿಂದ ಪಬ್​​ನವರೆಗೆ ಸಿಕ್ಕಿವೆ ದರ್ಶನ್​ ಸಾಕ್ಷಿಗಳು

    A2 ಆರೋಪಿ ಮೇಲಿವೆ ಇವಿಷ್ಟು ಬಲವಾದ ಸಾಕ್ಷಿಗಳು

ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿ ಪೊಲೀಸರ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದೆ. ದರ್ಶನ್​ ಮತ್ತು ಗ್ಯಾಂಗ್​ ಅನ್ನು ಸರಿಯಾಗಿ ತನಿಖೆ ನಡೆಸಿದ್ದು, ಇಂದು ಚಾರ್ಜ್​ ಶೀಟ್​​ ಸಲ್ಲಿಕೆಯಾಗಿದೆ. ಆರೋಪಿ ದರ್ಶನ್​ ಕುರಿತಾಗಿಯೂ ಪೊಲೀಸರಿಗೆ ಹಲವಾರು ಸಾಕ್ಷಿಗಳು ಸಿಕ್ಕಿವೆ. ಸದ್ಯ ಈ ಕುರಿತಾಗಿ ಅಭಿಮಾನಿಗಳಿಗೆ ಭಾರೀ ಕುತೂಹಲತೆ ಹುಟ್ಟಿಕೊಂಡಿದ್ದು, ದರ್ಶನ್​​ ವಿರುದ್ಧ ಸಿಕ್ಕಿರುವ ಸಾಕ್ಷಿಗಳೇನಿರಬಹುದು ಎಂಬ ಅನುಮಾನವಿದೆ.

ಪೋಲಿಸರು  ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಪಾತ್ರವನ್ನು ತನಿಖೆಯಲ್ಲಿ ದೃಢಪಡಿಸಿದ್ದಾರೆ. 17 ಜನರ ವಿರುದ್ಧದ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳು ಲಭ್ಯವಾಗಿವೆ. ದರ್ಶನ್​ ಈ ಕೇಸ್​ನಲ್ಲಿ A2 ಆರೋಪಿಯಾಗಿದ್ದು, ಪೊಲೀಸರು ದರ್ಶನ್​ ವಿರುದ್ಧದ ಇಂಚಿಂಚೂ ಸಾಕ್ಷ್ಯಗಳನ್ನು ನಮೂದಿಸಿದ್ದಾರೆ. ಈ ಕುರಿತಾಗಿ ಮಾಹಿತಿ ಇಲ್ಲಿದೆ

ಇದನ್ನೂ ಓದಿ: 231 ಸಾಕ್ಷಿದಾರರು.. 3991 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ.. ದರ್ಶನ್​ಗೆ ಭೀತಿ, ರೇಣುಕಾಸ್ವಾಮಿಗೆ ಸಿಗುತ್ತಾ ಮುಕ್ತಿ?​​

ದರ್ಶನ್ ವಿರುದ್ಧ ಪೊಲೀಸರಿಗೆ ಸಿಕ್ಕಿರೋ ಸಾಕ್ಷ್ಯಗಳೇನು?

1. ಪವನ್​ಗೆ ಹೇಳಿ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆಸಿರೋದು
2. ಪವನ್ ರಾಘವೇಂದ್ರಗೆ ಹೇಳಿ ರೇಣುಕಾ ಕಿಡ್ನಾಪ್ ಮಾಡಿರೋದು
3. ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ
4. ಪವನ್​​ ಪವಿತ್ರಾ ಮನೆಗೆ ಹೋಗಿದ್ದು
5. ಪವಿತ್ರಾ ಕರೆದುಕೊಂಡು ಪಟ್ಟಣಗೆರೆ ಶೆಡ್​​ಗೆ ಹೋಗಿದ್ದು
6. ಶೆಡ್​ನಲ್ಲಿ ರೇಣುಕಾ ಮೇಲೆ ಹಲ್ಲೆ ಮಾಡಿ ಪಬ್​ಗೆ ಬಂದಿದ್ದು
7. ಪಬ್​ನಲ್ಲಿ ಇರುವಾಗ ರೇಣುಕಾಸ್ವಾಮಿ ಫೋಟೋ ಬಂದಿದ್ದು
8. ಮತ್ತೆ ಪಬ್​ನಿಂದ ಪಟ್ಟಣಗೆರೆ ಶೆಡ್​​ಗೆ ಹೋಗಿದ್ದು
9. ಪಬ್​​ನಿಂದ RR ನಗರ ಮನೆಗೆ ಬಂದು ಬಟ್ಟೆ ಬದಲಿಸಿದ್ದು
10. ಬೆಳಗ್ಗೆ ಬನಶಂಕರಿಯ ವಿಜಯಲಕ್ಷ್ಮಿ ಮನೆಗೆ ಹೋಗಿದ್ದು
11. ವಿಜಯಲಕ್ಷ್ಮಿ ಮನೆಯಲ್ಲಿ ಪೂಜೆಯಲ್ಲಿ ಭಾಗಿಯಾಗಿದ್ದು
12. ವಿಜಯಲಕ್ಷ್ಮಿ ಮನೆಯಲ್ಲಿ ಶೂ ಬಿಟ್ಟು ಹೋಗಿದ್ದು
13. ನಂತರ ಮೈಸೂರಿನ ಫಾರ್ಮ್​​​ಹೌಸ್​​ಗೆ, ಅಲ್ಲಿಂದ ಹೋಟೆಲ್
14. ಹೋಟೆಲ್​ನಿಂದ ಶೂಟಿಂಗ್​ಗೆ ಹೋಗಿದ್ದು, ಮತ್ತೆ ಹೋಟೆಲ್​ಗೆ ಬಂದಿದ್ದು
15. ಇದೆಲ್ಲದರ ಸಿಸಿಟಿವಿ, ಟವರ್ ಲೊಕೇಷನ್ ತನಿಖೆಯಲ್ಲಿ ಸಿಕ್ಕಿವೆ
16. ಸಿಸಿಟಿವಿ ದೃಶ್ಯಗಳಿಗೂ ಟವರ್ ಲೊಕೇಷನ್​ಗಳಿಗೂ ಮ್ಯಾಚ್ ಆಗಿದೆ
17. ಪ್ರತಿ ಹಂತದಲ್ಲೂ ದರ್ಶನ್ ನೋಡಿದ್ದ ಐವಿಟ್ನೇಸ್ ಹೇಳಿಕೆಗಳು
18. ನಟ ಚಿಕ್ಕಣ್ಣ ಸೇರಿದಂತೆ ಅನೇಕ ಸಾಕ್ಷಿಗಳ ಹೇಳಿಕೆಗಳು ಉಲ್ಲೇಖ
19. ದರ್ಶನ್ ವಿರುದ್ಧ ಆರೋಪಿಯೊಬ್ಬ ಹೇಳಿಕೆ ನೀಡಿರೋದು
20. ಪ್ರದೋಶ್ ಮೊಬೈಲ್​ನಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ
21. ಫೋನ್ ಕಾಲ್, ಚಾಟಿಂಗ್​ನಲ್ಲಿ ಸಂಚಿನ ಬಗ್ಗೆ ಮಾಹಿತಿ ಸಿಕ್ಕಿದೆ
22. ಸರೆಂಡರ್ ಮಾಡಿಸಲು ಮನವೊಲಿಸಿದ್ದು ಮತ್ತು ಹಣ ಕೊಟ್ಟಿರೋದು ದೃಢವಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ವಿರುದ್ಧ ಪೊಲೀಸರಿಗೆ ಸಿಕ್ಕಿರೋ ಸಾಕ್ಷ್ಯಗಳಿವು.. ದಾಸನಿಗೆ ಅಂಟಿದ ರಕ್ತದ ಕಲೆಯ ಸುತ್ತ ಒಂದು ನೋಟ

https://newsfirstlive.com/wp-content/uploads/2024/06/darshan47.jpg

Load More