newsfirstkannada.com

RCB v/s CSK ಮ್ಯಾಚ್​ ಕೇವಲ ₹5 ಕೊಟ್ಟು ವೀಕ್ಷಿಸಿದ ಅಭಿಮಾನಿಗಳು.. ಹೇಗೆ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

Share :

Published March 27, 2024 at 9:00pm

Update March 27, 2024 at 8:47pm

  ಬೆಂಗಳೂರು-ಚೆನ್ನೈ ನಡುವಿನ ಪಂದ್ಯವೆಂದರೆ ಫ್ಯಾನ್ಸ್​ಗೆ ಕುತೂಹಲ

  ಮಾರ್ಚ್​ 22ರಂದು ಚೆನ್ನೈನ ಚಪಾಕ್ ಮೈದಾನದಲ್ಲಿ ನಡೆದ ಪಂದ್ಯ

  ಅಭಿಮಾನಿಗಳು ಎಲ್ಲಿ ನಿಂತುಕೊಂಡು ಪಂದ್ಯ ನೋಡಿದ್ದಾರೆ ಗೊತ್ತಾ?

ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವಿನ ಐಪಿಎಲ್ ಪಂದ್ಯ ವೀಕ್ಷಣೆ ಮಾಡುವುದು ಎಂದರೆ ಫ್ಯಾನ್ಸ್​ಗೆ ಎಲ್ಲಿಲ್ಲದ ಕುತೂಹಲ. 2024ರ ಐಪಿಎಲ್​ ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಚೆನ್ನೈನ ಚೆಪಾಕ್​ ಸ್ಟೇಡಿಯಂನಲ್ಲಿ ನಡೆಸಲಾಯಿತು. ಈ ಮ್ಯಾಚ್​ನಲ್ಲಿ ಆರ್​ಸಿಬಿ ಸೋತಿರುವುದು ಫ್ಯಾನ್ಸ್​ಗೂ ಭಾರೀ ನಿರಾಸೆ ತಂದಿತ್ತು. ಮಾರ್ಚ್​ 22 ರಂದು ನಡೆದ ಈ ಮ್ಯಾಚ್​ನ್ನ ಕೇವಲ 5 ರೂಪಾಯಿ ಕೊಟ್ಟು ಅಭಿಮಾನಿಗಳು ನೋಡಿದ್ದಾರೆ ಎನ್ನುವುದು ಇದೀಗ ಗೊತ್ತಾಗಿದೆ.

ಇದನ್ನೂ ಓದಿ: 6,6,6,6,6,6,4,4; ಕೇವಲ 16 ಬಾಲ್​ನಲ್ಲಿ 50 ರನ್​ ಚಚ್ಚಿದ ಅಭಿಶೇಕ್​ ಶರ್ಮಾ!

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಸಿಎಸ್​ಕೆ ಜೊತೆಗಿನ ಆರ್​ಸಿಬಿಯ ಪಂದ್ಯವನ್ನು ಅಭಿಮಾನಿಗಳು ಚೆಪಾಕ್ ರೈಲ್ವೆ ನಿಲ್ದಾಣದ ಮೂಲಕ ನೋಡಿದ್ದಾರೆ. 15 ಸಾವಿರದಿಂದ ಪಂದ್ಯ ನೋಡಲು ದರ ನಿಗದಿ ಮಾಡಲಾಗಿತ್ತು. ಅಷ್ಟೊಂದು ಹಣ ಇಲ್ಲದವರು ಪಂದ್ಯ ಪ್ರಾರಂಭವಾಗುತ್ತಿದ್ದಂತೆ ಚೆನ್ನೈ ಚೆಪಾಕ್ ರೈಲ್ವೆ ನಿಲ್ದಾಣದ ಕಡೆ ದೌಡಾಯಿಸಿದ್ದಾರೆ. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ 5 ರೂಪಾಯಿಯ ಪ್ಲಾಟ್​ ಫಾರ್ಮ್​ ಟಿಕೆಟ್​ ಪಡೆದುಕೊಂಡು ಒಳಗೆ ಹೋಗಿ ಅಲ್ಲಿಂದ ಮ್ಯಾಚ್ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

​ಸದ್ಯ ಫ್ಯಾನ್ಸ್ ಚೆಪಾಕ್ ರೈಲ್ವೆ ನಿಲ್ದಾಣದ ಮೂಲಕ ಪಂದ್ಯವನ್ನು ವೀಕ್ಷಣೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚೆನ್ನೈ ಅಪ್​ಡೇಟ್ ಎನ್ನುವ ಇನ್​ಸ್ಟಾದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು ವಿಡಿಯೋ ನೋಡಿದಂತವರು ಫನ್ನಿ ಕಾಮೆಂಟ್​ಗಳನ್ನ ಮಾಡುತ್ತಿದ್ದಾರೆ. ಬೆಂಗಳೂರು ಮತ್ತು ಚೆನ್ನೈ ನಡುವಿನ ಮ್ಯಾಚ್ ಎಂದರೆ ಅಧಿಕ ಸಂಖ್ಯೆಯಲ್ಲಿ ಫ್ಯಾನ್ಸ್​ ವೀಕ್ಷಣೆ ಮಾಡುತ್ತಾರೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB v/s CSK ಮ್ಯಾಚ್​ ಕೇವಲ ₹5 ಕೊಟ್ಟು ವೀಕ್ಷಿಸಿದ ಅಭಿಮಾನಿಗಳು.. ಹೇಗೆ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/03/RCB-3-2.jpg

Load More