/newsfirstlive-kannada/media/post_attachments/wp-content/uploads/2025/04/reels-stars.jpg)
ಸೋಷಿಯಲ್​ ಮೀಡಿಯಾ ಅನ್ನೋದೆ ಹಾಗೇ ಯಾರು, ಯಾವಾಗ ಹೇಗೆ ಫೇಮಸ್​ ಆಗುತ್ತಾರೆ ಅಂತ ಹೇಳೋದಕ್ಕೆ ಆಗೋದಿಲ್ಲ. ಒಂದು ಸಾರಿ ಫೇಮಸ್​ ಆದ್ರೆ ಮುಗಿತು ದೊಡ್ಡ ಮಟ್ಟದಲ್ಲಿ ಮಿಂಚೋಕೆ ಸಜ್ಜಾಗುತ್ತಾರೆ. ಅಲ್ಲದೇ ಆ ನೇಮ್​, ಫೇಮ್​ಯಿಂದ ಡೈರೆಕ್ಟರ್ಸ್​ಗಳೆಲ್ಲಾ ಸೀರಿಯಲ್​ಗಾಗಿ ಆಫರ್​ ಕೊಡುತ್ತಾರೆ.
/newsfirstlive-kannada/media/post_attachments/wp-content/uploads/2023/07/kannada-serial.jpg)
ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ರೀಲ್ಸ್​ ಮಾಡುತ್ತಲೇ ಇರುತ್ತಾರೆ. ಹೀಗೆ ರೀಲ್ಸ್​ ಮಾಡೋಕೆ ನೋಡೋಕೆ ಚೆನ್ನಾಗಿದ್ದರೇ ಸಾಕು ಅವರನ್ನು ಸೀರಿಯಲ್​ಗೆ ಹಾಕಿಕೊಳ್ಳಬಹುದು ಅಂತ ಡೈರೆಕ್ಟರ್ಸ್​ ಚರ್ಚೆ ಮಾಡಿ ಆಡಿಷನ್​ಗೆ ಕರೆದು ಚೆನ್ನಾಗಿ ನಟಿಸಿದ್ರೆ ಅವರನ್ನ ಸೆಲೆಕ್ಟ್ ಮಾಡಿಕೊಂಡು ಬಿಡ್ತಾರೆ.
ಇದನ್ನೂ ಓದಿ: ವಾರ್ನಿಂಗ್ ಕೊಟ್ರು ಬುದ್ಧಿ ಕಲಿಯದ ಬುಜ್ಜಿ.. ರಜತ್ ಕಿಶನ್ ಮತ್ತೆ ಮಾಡಿಕೊಂಡ ಯಡವಟ್ಟು ಏನು?
ಅದೇ ರೀತಿ ಕನ್ನಡ ಸೀರಿಯಲ್​ ಲೋಕಕ್ಕೆ ಕೆಲವಂದಿಷ್ಟು ಯುವ ನಟಿಯರು ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ ಟಾಪ್​ 5 ಅಂತ ನೋಡೋದಾದ್ರೆ, ಭವ್ಯಾ ಗೌಡ, ಪ್ರಿಯ ಜೆ ಆಚಾರ್​, ವರುಣ್ ಆರಾಧ್ಯ, ಮಧುಶ್ರೀ ಭೈರಪ್ಪ ಹಾಗೂ ಪ್ರತಿಮಾ. ಈ ಐದು ಮಂದಿ ಸದ್ಯಕ್ಕೆ ಹಲ್​ ಚಲ್​ ಸೃಷ್ಟಿಸಿರೋ ನಟ ನಟಿಯರಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/04/bhavya-gowda.jpg)
ನಟಿ ಭವ್ಯಾ ಗೌಡ
ಟಿಕ್‌ಟಾಕ್ ಮೂಲಕ ಖ್ಯಾತಿ ಗಳಿಸಿದ್ದ ಭವ್ಯಾ ಗೌಡ ಕನ್ನಡ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದು ಅಚ್ಚರಿ ವಿಚಾರ. ಕಲರ್ಸ್​ ಕನ್ನಡದ ಸೂಪರ್ ಹಿಟ್ ಧಾರಾವಾಹಿ ಎಂದರೆ ಅದು ಗೀತಾ. ಇದೇ ಸೀರಿಯಲ್​ ಮೂಲಕ ಕಿರುತೆರೆ ಲೋಕಕ್ಕೆ ನಾಯಕಿಯಾಗಿ ಕಾಲಿಟ್ಟರು ಭವ್ಯಾ ಗೌಡ. ಗೀತಾ ಸೀರಿಯಲ್​ ಮೂಲಕ ಸಖತ್​ ಫೇಮಸ್​ ಆಗಿದ್ದ ಭವ್ಯಾ ಗೌಡ ಅವರು ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿದ್ದರು. ಸದ್ಯ ಜೀ ಕನ್ನಡದ ಕರ್ಣ ಸೀರಿಯಲ್​ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸೋಕೆ ಸಜ್ಜಾಗಿದ್ದಾರೆ.
/newsfirstlive-kannada/media/post_attachments/wp-content/uploads/2025/04/reels-stars1.jpg)
ಪ್ರಿಯ ಜೆ ಆಚಾರ್
ಗಟ್ಟಿಮೇಳ ಧಾರಾವಾಹಿ ಮೂಲಕ ಅದಿತಿಯಾಗಿ ಕಿರುತೆರೆ ಲೋಕಕ್ಕೆ ಕಾಲಿಟ್ಟ ನಟಿ ಪ್ರಿಯಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಗಟ್ಟಿಮೇಳ ಧಾರಾವಾಹಿ ಜೊತೆಗೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ಪ್ರಿಯಾ ನಟಿಸುತ್ತಿದ್ದಾರೆ. ಇವರು ಕೂಡ ರೀಲ್ಸ್ ವಿಡಿಯೋಗಳಿಂದಲೇ ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಪಡೆದವರು. ಅಲ್ಲದೇ ಪಾರು ಧಾರಾವಾಹಿ ಖ್ಯಾತಿಯ ಸಿದ್ದು ಮೂಲಿಮನಿ ಅವರು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಕೊಂಚ ಬ್ರೇಕ್​ ಬಳಿಕ ಸೀರಿಯಲ್ ಲೋಕಕ್ಕೆ ಮತ್ತೆ ಕಾಲಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/09/varun5.jpg)
ವರುಣ್ ಆರಾಧ್ಯ
ಸೋಷಿಯಲ್ ಮೀಡಿಯಾ ಬಳಕೆ ಮಾಡುವವರಿಗೆ ವರುಣ್ ಆರಾಧ್ಯ ಯಾರು ಅನ್ನೋದು ಚೆನ್ನಾಗಿ ಗೊತ್ತಿದೆ. ರೀಲ್ಸ್, ವಿಡಿಯೋಸ್​​ ಮೂಲಕ ವರುಣ್ ಸೋಷಿಯಲ್ ಮೀಡಿಯಾದ ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ಟಿಕ್‌ಟಾಕ್, ರೀಲ್ಸ್ ವಿಡಿಯೋಗಳಿಂದ ಜನಪ್ರಿಯತೆ ಗಳಿಸಿದ್ದ ವರುಣ್ ಆರಾಧ್ಯ, 2023ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ, ರಾಮ್​ಜಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಬೃಂದಾವನ' ಸೀರಿಯಲ್‌ನಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಈ ಧಾರಾವಾಹಿಯಲ್ಲಿ ಆಕಾಶ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು.
/newsfirstlive-kannada/media/post_attachments/wp-content/uploads/2025/04/reels-stars2.jpg)
ಪ್ರತಿಮಾ
ಸದ್ಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದ ಪ್ರತಿಮಾ ಕಲರ್ಸ್ ಕನ್ನಡದ 'ದೊರೆಸಾನಿ' ಸೀರಿಯಲ್‌ನಲ್ಲಿ ನಾಯಕಿ ಸಹೋದರಿಯಾಗಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟರು. ಆನಂತರ ಅಂತರಪಟ ಸೀರಿಯಲ್‌ನಲ್ಲಿ ನಾಯಕಿಯ ತಂಗಿ 'ಸಿರಿ' ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ರು. ಇದಾದ ಬಳಿಕ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟ ಪ್ರತಿಮಾ, ಜೆಮಿನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಿವಂಗಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಲ್ಲದೇ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಮುದ್ದು ಸೊಸೆ ಧಾರಾವಾಹಿಯಲ್ಲಿ ವಿದ್ಯಾ ಪ್ರಾತಕ್ಕೆ ಬಣ್ಣ ಹಚ್ಚಿದ್ದಾರೆ.
/newsfirstlive-kannada/media/post_attachments/wp-content/uploads/2025/02/Madhushree-Byrappa.jpg)
ಮಧುಶ್ರೀ ಭೈರಪ್ಪ
ಬಿಗ್‌ಬಾಸ್ ಸೀಸನ್ 11 ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡದಲ್ಲಿ 'ಯಜಮಾನ' ಎಂಬ ಹೊಸ ಧಾರಾವಾಹಿ ಮೂಲಕ ಮಧುಶ್ರೀ ಭೈರಪ್ಪ ಎಂಟ್ರಿ ಕೊಟ್ಟಿದ್ದಾರೆ. ಮಧುಶ್ರೀ ಭೈರಪ್ಪ ಅವರು ಇನ್‌ಸ್ಟಾಗ್ರಾಮ್ ಇನ್‌ಪ್ಲುಯೆನ್ಸರ್ ಆಗಿದ್ದರು. ಈ ಧಾರಾವಾಹಿಯಲ್ಲಿ ಮಧುಶ್ರೀ ಗಂಡಸರನ್ನು ದ್ವೇಶಿಸುವ 'ಜಾನ್ಸಿ' ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಗತ್ತಿನ ಪಾತ್ರ ಇದಾಗಿದ್ದು, ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us