newsfirstkannada.com

ರಾಮ ಮಂದಿರ ಉದ್ಘಾಟನೆ ದಿನ ಯಾವ್ಯಾವ ರಾಜ್ಯಗಳು ಶಾಲೆ, ಕಚೇರಿಗಳಿಗೆ ರಜೆ ಘೋಷಣೆ ಮಾಡಿವೆ..?

Share :

Published January 17, 2024 at 1:10pm

    ಜನವರಿ 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ

    ಕೆಲವು ರಾಜ್ಯಗಳಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧ

    ಕರ್ನಾಟಕದಲ್ಲಿ ರಜೆ ಘೋಷಣೆ ಮಾಡಲಾಗಿದೆಯಾ..?

ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ಜೋರಾಗಿವೆ. ಪವಿತ್ರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ದೇಶದ ಬಹುತೇಕ ಗಣ್ಯರು ಭಾಗಿ ಆಗುತ್ತಿದ್ದಾರೆ. ‘55 ದೇಶಗಳ ಸಂಸದರು, ರಾಯಭಾರಿಗಳು ಹಾಗೂ 100ಕ್ಕೂ ಹೆಚ್ಚು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಜೊತೆಗೆ ಎಲ್ಲಾ ರಾಜ್ಯಗಳ ಋಷಿಗಳು, ಸಂತರು ಸೇರಿದಂತೆ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಭದ್ರತೆಗಾಗಿ ಸಂಪೂರ್ಣ ತಯಾರಿ ನಡೆಸ್ತಿದೆ.

ಈ ಹಿನ್ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳು ಜನವರಿ 22 ರಂದು ಸಾರ್ವಜನಿಕ ರಜೆ ಘೋಷಣೆ ಮಾಡಿವೆ. ರಜೆ ಘೋಷಣೆ ಮಾಡಿದ ಮೊದಲ ರಾಜ್ಯ ಉತ್ತರ ಪ್ರದೇಶವಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಿ ರಜೆ ಘೋಷಣೆ ಮಾಡಿದ್ದು, ಆ ದಿನ ಹಳ್ಳಿ ಮತ್ತು ನಗರ, ಪಟ್ಟಣಗಳಲ್ಲಿ ದೀಪಾವಳಿ ರೀತಿಯಲ್ಲಿ ಆಚರಣೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಗೋವಾದಲ್ಲೂ ರಜೆ
ಗೋವಾದಲ್ಲೂ ಕೂಡ ಸಾರ್ವಜನಿಕ ರಜೆ ಘೋಷಣೆ ಮಾಡಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶ ನೀಡಿದ್ದಾರೆ. ಜನವರಿ 22 ರಂದು ರಾಜ್ಯದಲ್ಲಿ ಸಂಭ್ರಮ ಮೇಳೈಸಬೇಕು. ಹೀಗಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಕಚೇರಿಗಳಲ್ಲೂ ಯಾವುದೇ ಕೆಲಸ ಮಾಡುವುದು ಬೇಡ. ದೀಪಾವಳಿಯಂತೆ ಆ ದಿನವನ್ನು ಆಚರಿಸಿ ಎಂದು ಸಾವಂತ್ ಹೇಳಿದ್ದಾರೆ.

ಮಧ್ಯ ಪ್ರದೇಶ

ಮಧ್ಯ ಪ್ರದೇಶದಲ್ಲೂ ರಜೆ ಘೋಷಣೆ ಮಾಡಿ ಮೋಹನ್ ಯಾದವ್ ಆದೇಶ ನೀಡಿದ್ದಾರೆ. ರಾಜ್ಯಾದ್ಯಂತ ರಾಮ ಪ್ರಾಣ ಪ್ರತಿಷ್ಠಾಪನೆ ದಿನವನ್ನು ಆಚರಣೆ ಮಾಡಬೇಕು. ಜನವರಿ 22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಮದ್ಯ, ಮಾಂಸದಂಗಡಿಗಳು ಬಂದ್ ಆಗಬೇಕು ಎಂದು ತಿಳಿಸಿದ್ದಾರೆ. ಛತ್ತೀಸ್​ಗಢದಲ್ಲೂ ರಜೆ ಘೋಷಣೆ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಹಾಗೆಯೇ ಹರಿಯಾಣದಲ್ಲೂ ಜನವರಿ 22 ರಂದು ರಜೆ ಘೋಷಣೆ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ರಜೆ ಘೋಷಣೆ ಮಾಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಮಂದಿರ ಉದ್ಘಾಟನೆ ದಿನ ಯಾವ್ಯಾವ ರಾಜ್ಯಗಳು ಶಾಲೆ, ಕಚೇರಿಗಳಿಗೆ ರಜೆ ಘೋಷಣೆ ಮಾಡಿವೆ..?

https://newsfirstlive.com/wp-content/uploads/2024/01/RAM-MANDIR-3-1.jpg

Load More