Advertisment

ಬಳ್ಳಾರಿ ಪೊಲೀಸರಿಂದ ಅತೀ ದೊಡ್ಡ ಕಾರ್ಯಾಚರಣೆ; 1.21 ಕೋಟಿ ಹಣದೊಂದಿಗೆ Email ವಂಚಕ ಅರೆಸ್ಟ್

author-image
Veena Gangani
Updated On
ಬಳ್ಳಾರಿ ಪೊಲೀಸರಿಂದ ಅತೀ ದೊಡ್ಡ ಕಾರ್ಯಾಚರಣೆ; 1.21 ಕೋಟಿ ಹಣದೊಂದಿಗೆ Email ವಂಚಕ ಅರೆಸ್ಟ್
Advertisment
  • ಅಗರ್ವಾಲ್ ಕಂಪನಿಯ ನಕಲಿ ಇ ಮೇಲ್ ಕ್ರಿಯೇಟ್ ಮಾಡಿ ಖದೀಮ
  • ಹಣ ವರ್ಗಾವಣೆ ಬಗ್ಗೆ ಮಾಹಿತಿ ಪಡೆದಿದ್ದ ಖದೀಮ ಅಜಯ್ ಕುಮಾರ್
  • ಮಧ್ಯ ಪ್ರದೇಶ ಮೂಲದ ಅಜಯ್ ಕುಮಾರ್ ಜೈಸ್ವಾಲ್ ಬಂಧಿತ ಆರೋಪಿ

ಬಳ್ಳಾರಿ: ನಕಲಿ ಇ-ಮೇಲ್ (Email) ಬಳಸಿ ಕೋಟಿ ಕೋಟಿ ವಂಚಿಸಿದ್ದ ಆರೋಪಿಯನ್ನ ಹಣದ ಸಮೇತ ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಮಧ್ಯ ಪ್ರದೇಶ ಮೂಲದ ಅಜಯ್ ಕುಮಾರ್ ಜೈಸ್ವಾಲ್ ಬಂಧಿತ ಆರೋಪಿ.

Advertisment

ಇದನ್ನೂ ಓದಿ:Breaking News: ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹೃದಯಾಘಾತದಿಂದ ನಿಧನ

publive-image

ಏನಿದು ಆರೋಪ..?

ಬಂಧಿತ ಆರೋಪಿಯೂ ಕಲ್ಲಿದ್ದಲು ಸಪ್ಲೈ ಮಾಡುವ ಕಂಪನಿಗೆ 2 ಕೋಟಿ 11 ಲಕ್ಷದ 50 ಸಾವಿರ ರೂ ವಂಚನೆ ಮಾಡಿದ್ದಾನೆ. ಮಧ್ಯ ಪ್ರದೇಶ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿಗೆ ಕಲ್ಲಿದ್ದಲು ಖರೀದಿಗೆ ಹಿಂದೂಸ್ತಾನ ಕಂಪನಿಗೆ ಹಣ ಹಾಕಲಾಗಿತ್ತು. ಹಣ ವರ್ಗಾವಣೆ ಬಗ್ಗೆ ಖದೀಮ ಅಜಯ್ ಕುಮಾರ್ ಜೈಸ್ವಾಲ್ ಮಾಹಿತಿ ಪಡೆದಿದ್ದ. ಆಗ ಅಜಯ್ ಕುಮಾರ್​ ಪಕ್ಕಾ ಪ್ಲಾನ್​ ಮಾಡಿ ಅಗರ್ವಾಲ್ ಕಂಪನಿಯ ನಕಲಿ ಇ-ಮೇಲ್ ಕ್ರಿಯೇಟ್ ಮಾಡಿ ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಂಜ್ ಆಗಿದೆ ಎಂದು ಹಿಂದುಸ್ತಾನ್​ಗೆ ಕಳಿಸಿದ್ದಾನೆ.

publive-image

ಇದನ್ನ ನಂಬಿದ ಹಿಂದುಸ್ತಾನ್ ಕಂಪನಿ ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್​ಗೆ ಹಣ ಹಾಕಿದ್ದಾರೆ. ಆಗ ತನ್ನ ಖಾತೆಗೆ ಬಂದ 2 ಕೋಟಿ 11 ಲಕ್ಷ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಡ್ರಾ ಮಾಡಿದ್ದಾನೆ. ಬಳಿಕ ಹಣದ ಸಮೇತ ಬಳ್ಳಾರಿಯಿಂದ ಮಧ್ಯಪ್ರದೇಶಕ್ಕೆ ಹೋಗಿದ್ದಾನೆ. ಈ ಮಧ್ಯೆ ಹಿಂದುಸ್ತಾನ್​ ಕಂಪನಿ, ಅರ್ಗವಾಲ ಕಂಪನಿಗೆ ಕಲ್ಲಿದ್ದಲು ಕಳುಹಿಸಿ ಎಂದಾಗ ಹಣ ಹಾಕಿ ಎಂದಿದ್ದಾರೆ. ಆಗ ಸೆಪ್ಟೆಂಬರ್ 3 ನೇ ತಾರೀಖು ಹಣ ಹಾಕಲಾಗಿದೆ ಅಂತಾ ಹಿಂದುಸ್ತಾನ್ ಕಂಪನಿ ತಿಳಿಸಿದೆ. ಆಗಲೇ ಖದೀಮ ಹಣ ಲಪಟಾಯಿಸಿದ್ದು ಬೆಳಕಿಗೆ ಬಂದಿದೆ.

Advertisment

publive-image

ಸೆಪ್ಟೆಂಬರ್ 3ರಂದು ಹಣ ವಂಚನೆ ಗೊತ್ತಾದ ಕೂಡಲೇ ಹಿಂದುಸ್ತಾನ್ ಕಂಪನಿ ಬಳ್ಳಾರಿ ಸೈಬರ್ ಠಾಣೆಗೆ ದೂರು ನೀಡಿದೆ. ಕೂಡಲೇ ಬಳ್ಳಾರಿ ಎಸ್ಪಿ ಶೊಭಾ ರಾಣಿ ಅವರಿಂದ ಪ್ರಕರಣ ಭೇದಿಸಲು ಡಿ ಎಸ್ ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಿತ್ತು. ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದ ಆರೋಪಿಯನ್ನು ಅರೆಸ್ಟ್​ ಮಾಡಿದ್ದಾರೆ.

ಸದ್ಯ ಬಂಧಿತ ಆರೋಪಿಯಿಂದ 1.49 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ಹಣ ಫ್ರೀಜ್ ಮಾಡಿಸಿದ್ದಾರೆ. ಇನ್ನುಳಿದ 62 ಲಕ್ಷ ಹಣದ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಹಿಂದೆ ದೆಹಲಿ ಮೂಲದ ಕುಖ್ಯಾತ ವ್ಯಕ್ತಿಯ ಕೈವಾಡ ಇದೆ ಎಂದು ಪೊಲೀಸರ ತನಿಖೆ ಶುರು ಮಾಡಿದ್ದಾರೆ. ಕೇವಲ 9 ತರಗತಿ ಓದಿರೋ ಆರೋಪಿ 2 ಕೋಟಿ ಹಣ ಕೊಳ್ಳೆ ಹೊಡೆದಿದ್ದನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment